ಅಪ್ಪನ ಆಸರೆ ಅಮ್ಮನ ಅಕ್ಕರೆ

ಅಪ್ಪನ ಆಸರೆ ಅಮ್ಮನ ಅಕ್ಕರೆ

ಕವನ

ತಾಯಿ ಕಮಲಮ್ಮ ಅಕ್ಕರೆ

ನನಗೆ ಅದು ಸವಿ ಸಕ್ಕರೆ

ಪ್ರೀತಿ ಬೆಳೆಸಿತು ಮುಗಿಲೆತ್ತರ

ಕರುಣೆ ಕಡಲು ನಿನ್ನ ಹತ್ತಿರ 

 

ಅಪ್ಪ ನೀಡಿದ ಆಸರೆ

ವಿದ್ಯೆ ನೀಡಿದ ಸಾಗರ

ಆತನೇ ಸಹನೆ ಆಗರ

ಪ್ರೋತ್ಸಾಹದ ಉಡುಗೊರೆ 

 

ಬಲ ಹೀನತೆಯಲ್ಲಿ ಇದ್ದಳು

ಬಲವಾಗಿ ನನಗೆ ನಿಂತಳು

ಸಹನೆ ತೋರಿಸು ಎಂದಳು

ತಾಯಿ ಕಮಲಮ್ಮ ದೇವತೆ ಆದಳು

 

ಕರುಣಾಮಯಿ ನನ್ನ ಅಪ್ಪ

ಮಾಡುತ್ತಿರಲಿಲ್ಲ ನನ್ನ ಮೇಲೆ ಕೋಪ

ನನ್ನೊಳಗೆ ಮೂಡಿಸಿದ್ದಾರೆ ಛಾಪು

ಸಾಧನೆ ಮೆಟ್ಟಿಲೇರಲು ಹೊಳಪು 

 

ಬದುಕು  ಅಪ್ಪನ ಆಸರೆ

ಜೀವನ ಅವ್ವನ ಅಕ್ಕರೆ

ಬೆರೆತರೆ ಹಾಲು ಸಕ್ಕರೆ

ಉಳಿಯಲು ಚರಿತ್ರೆಯಲ್ಲಿ ಹೆಸರು

 

-ಹುಚ್ಚೀರಪ್ಪ ವೀರಪ್ಪ ಈಟಿ, ನರೇಗಲ್ಲ, ಗದಗ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್