ಅಪ್ಪಯ್ಯನಿಗೊಂದಿಷ್ಟು....

ಅಪ್ಪಯ್ಯನಿಗೊಂದಿಷ್ಟು....

ಕವನ

ನೆರಳನು ನೀಡುವ ಸೂರನು ನೆನೆವುದು

ಹೊಣೆಯದು ನಮ್ನದು ತಪ್ಪಲ್ಲ

ಜಡಿಮಳೆ ಸುರಿದರೆ ಬಿಸಿಲಿನ ತಾಪಕೆ

ರಕ್ಷಣೆ ಕೊಡುವುದು ನಮಗೆಲ್ಲ

 

ಸೂರಿಗೆ ನಮಿಸುತ ತಳವನು ಮರೆತರೆ

ಈ ನಡೆ ಎಂದುಗು ಸರಿಯಲ್ಲ

ನೆಲೆಸಲು ಭದ್ರದ ತಳವನು ಮರೆತರೆ

ದೇವರು ನಮ್ಮನು ಕ್ಷಮಿಸಲ್ಲ

 

ಪೀಠವನೂರಿದ ನೆಲವದು ಕುಸಿಯದೆ

ರಕ್ಷಿಸುತಿರುವುದು ತಳಪಾಯ

ನೆರಳನು ನೀಡುವ ಅಮ್ಮನ ಜೊತೆಯಲಿ

ಬದುಕನು ನೀಡುವ ಅಪ್ಪಯ್ಯ

 

ಬಾಳಿಗೆ ಭದ್ರಬುನಾದಿಯ ನೀಡುವ

ಅಪ್ಪನು ಬದುಕಿನ ಆಧಾರ

ಅಪ್ಪನು,ಅಮ್ಮನು ಹರಸಿದರಾದರೆ

ಗೆಲುವಿನ ಹಾಡಿಗೆ ಶ್ರೀಕಾರ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್

ಚಿತ್ರ ಕೃಪೆ : ಅಂತರ್ಜಾಲ 

ಚಿತ್ರ್