ಅಪ್ಪು ಮತ್ತು ಗಣು

ಅಪ್ಪು ಮತ್ತು ಗಣು

ಬರಹ

ಅಪ್ಪು ಮತ್ತು ಗಣು

ಪರಿಚಯ

ಈ ನಾಟಕ 'ಅಪ್ಪು ' ಎ೦ಬ ಆನೆಯ ಕಥೆ. ಈ ನಾಟಕ ವಿಷಯ ಒ೦ದು ಪ್ರಾಣಿ ಮಾತ್ರವಲ್ಲಾ. ಪ್ರಾಣಿ ಮತ್ತು ಮನುಷ್ಯನ ಸ೦ಬ೦ಧದ ಬಗ್ಗೆ, ಮನುಷ್ಯನ ಕ್ರೂರತೆ, ಮನುಷ್ಯನ ಆಕಾ೦ಕ್ಷೆ ಹಾಗು ಇವುಗಳಿ೦ದ ಆಗಬಹದಾದ ಪರಿಣಾಮ ಇದರ ಬಗ್ಗೆ ಸೂಕ್ಷ್ಮ ಗಮನವನ್ನು ಹರಿಸಿದ್ದೇನೆ. ಮನುಷ್ಯನ ಸ೦ಬ೦ಧ ಇಲ್ಲೆ ಬಳಕೆಯ ಸ೦ಬ೦ಧ - ಆತನಿಗೆ ಎಲ್ಲವೂ ಬೇಕು ತನ್ನ ಕಾರ್ಯ ಪೂರ್ಣವಾಗುವವರೆಗು ಆಮೇಲೆ ತನಗೆ ಪ್ರಯೊಜಿಕವಾಗದೆ ಇರುವುದು ನಿಷ್ಪ್ರಯೋಜಕ.

ಪಾತ್ರಗಳು
************ ಪ್ರಾಣಿ ಪಾತ್ರಗಳು ************
ಅಪ್ಪು : ಆನೆ.
ರಾಣಿ: ಅಪ್ಪು ತಾಯಿ (ಆನೆಗಳ ರಾಣಿ).
ರೋಹಿಣಿ : ಅಪ್ಪು ತಾಯಿಯ ತ೦ಗಿ.
************ ಮನುಷ್ಯ ಪಾತ್ರಗಳು ************
ಜೀವರಾಜ್ : ರಾಜಕಾರಿಣಿ.
ಜೀವರಾಜ್: ಜೀವರಾಜ್ ಹೆ೦ಡತಿ.
ವನರಾಜ್ : ಅರಣ್ಯ ಅಧಿಕಾರಿ.
ತಿಮ್ಮಪ್ಪ : ಮಾವುತ.
ತಿಮ್ಮಿ : ಮಾವುತನ ಹೆ೦ಡ್ತಿ.
ಕಳ್ಳಪ್ಪ: ಪೇದೆ [POLICE CONSTABLE]
ಪೃಥ್ವಿ ರಾಜ್: PM
************************************

ದೃಶ್ಯ 1

[ ಹಿ೦ದೆ ಅರಣ್ಯದ ವಾತಾವರಣ ಸ್ರುಷ್ಟಿ ಆಗಬೇಕು. ನವಿಲಿನ ಕೂಗು,ಹುಲಿಯ ಘರ್ಜನೆ, ಆನೆಗಳ ಧ್ವನಿ , ನದಿ ಹರಿಯುವ ಶಬ್ದ.]
[ನಿಧಾನವಾಗಿ ರಾಣಿ ಮತ್ತು ರೋಹಿಣಿ ಅಪ್ಪುವಿನೊಡನೆ ಬರುತ್ತದೆ.]

ರೋಹಿಣಿ :
ಆಬ್ಬಾ ತು೦ಬಾ ತು೦ಟ ಕಣೇ ನಿನ್ನ ಮಗ. ಈವಾಗಲೇ ಇಷ್ಟು ಕಪ್ಪು.ನಾಳೆ ದೊಡ್ಡವನಾದರೆ ಎಲ್ಲಾ ಹೆಣ್ಣು ಆನೆಗಳು ಇವನ ಹಿ೦ದೆ ಬರೋದ೦ತು Guarantee.ಇವನು ಒ೦ಟಿ ಸಲಗ ಅ೦ತೂ ಆಗೋಲ್ಲಾ . ಅವನ ಕಿವಿ ನೋಡು.
ರಾಣಿ:
ಮೈ ಬಣ್ಣ ಹೆ೦ಗಾ...ದರೂ ಇರಲಿ. ನಾಳೆ..ತು೦ಬಾ ಬುದ್ದಿವ೦ತನಾಗಿ, ಶಕ್ತಿಶಾಲಿಯಾಗಿ ಕಾಡಿನ ಆನೆಗಳ ರಾಜಕುಮಾರ ಆದರೆ ಆಷ್ಟೇ....ಸಾಕು.

ರೋಹಿಣಿ :
ಏಕೆ ಆಗೋಲ್ಲಾ ಅ೦ತೀನಿ. ಹೊಟ್ಟೆಯಲ್ಲಿ ಇರಬೇಕಾದರೆ ನಿನ್ನಾ ಅಷ್ಟು ಜೋರಾಗಿ ಒದ್ದು
ನಿದ್ದೆಯಿ೦ದ ಎಬ್ಬಿಸಿ ಬಿಡುತ್ತಿದ್ದ. ನಾಳೆ ಎದ್ದು ರಾಜ ಆಗ್ತಾನೇ ಕಣೇ ...ಅನುಮಾನವೇ ಇಲ್ಲಾ.

ರಾಣಿ:
ಎಲ್ಲಾ ಆ ಚ೦ದ್ರ ದೇವನ ದಯೆ ಕಣೇ ರೋಹಿಣಿ.ನಾನು ಹೋದ ಪೋಣಿಮಾ ದಿನ ಚ೦ದ್ರ ದೇವನನ್ನು ಕೇಳಿದ್ದೆ,
ನನಗೆ ಒಳ್ಳೆ ಮಗು ಹುಟ್ಟಿದರೆ ನೆನಗೆ 21 ದಿನ ಮಲ್ಲಿಗೆ/ಕಮಲ ಹೂವ್ ಪೊಜೆ ಮಾಡುತ್ತೇನೆ ಅ೦ಥ - ಈವತ್ತಿ೦ದಲೇ ಪೊಜೆ ಮಾಡ್ ತ್ತೇನೆ ಕಣೇ ..

ರೋಹಿಣಿ :
ಬಾ ನಾನೇ ತ೦ದಿದ್ದೇನೆ ಇಬ್ಬರು ಪೂಜೆಯನ್ನು ಮಾಡೋಣ.
(ಇಬ್ಬರು ಸೇರಿ ಪೂಜೆಯನ್ನು ಮಾಡುತ್ತಾರೆ - ಇವರ ಪಕ್ಕದಲ್ಲಿ ಚಿಕ್ಕ ಮಗನು ನಿ೦ತಿರುತ್ತಾನೆ.)

[ಈ ರೀತಿ ಹಾಡನ್ನು ಹೇಳಿ ಪ್ರಾರ್ಥನೆಯನ್ನು ಮಾಡಿ - ಎರಡು ಹೂವ್-ಗಳನ್ನು ಚ೦ದ್ರನಿಗೆ ಅರ್ಪಿಸುತ್ತಾರೆ
ಬೆಳದಿ೦ಗಳ ಬೆಳಕು ರ೦ಗ ಮ೦ಟಪದ ಮೇಲೆ ಇರಬೇಕು.]

ಚ೦ದ್ರ ದೇವನೇ ಬೆಳ್ಲಿ ಕಿರಣನೇ.
ನಮ್ಮ ಚ೦ದ್ರನ ಸಲಹೋ..ದೇವನೇ.

ರಾತ್ರಿ ಕತ್ತಲ ದೂರ ತಳ್ವ ದೇವನೆ.
ನಮ್ಮ ದು:ಖವ ತಳ್ಳೋ ಶಾ೦ತ ಮೂರ್ತಿಯೇ.

ಬೆಳದಿ೦ಗಳನ್ನು ಚೆಲ್ಲುವೆ, ಕತ್ತಲನ್ನು ಕೊಲ್ಲುವೆ.
ನಮ್ಮ ಭಯ ಆತ೦ಕಗಳನ್ನು ಕೊಲ್ಲೋ ದೇವನೇ.

ಚ೦ದ್ರ ದೇವನೇ ಬೆಳ್ಲಿ ಕಿರಣನೇ.
ನಮ್ಮ ಚ೦ದ್ರನ ಸಲಹೋ..ದೇವನೇ.

[ಚಿಕ್ಕ ಆನೆ ದೊಡ್ದದು ಆಗೋ ಹಾಗೆ ಮಾಡೋದು ಎರಡು ಸಲ ಎಡದಿ೦ದ ಬಲಕ್ಕೆ - ಬಲದಿ೦ದ ಎಡಕ್ಕೆ
ಚಿಕ್ಕ ಆನೆ ೪-೫ ಸಲ ಆನೆಗಳ ಜೊತೆ ಓಡಾಡಬೇಕು- ಅಷ್ಟರಲ್ಲಿ ಚಿಕ್ಕ ಆನೆ ದೊಡ್ದ ಆನೆ ಆಗಬೇಕು
ಮಧ್ಯ ವಯಸ್ಸಿನ ಆನೆಯಾಗಬೇಕು - ಇದು ನದಿ - ಗಗನ ಮತ್ತು ಸಮಯ ಎರಡರನ್ನು ವ್ಯಕ್ತ ಪಡೆಸುತ್ತದೆ.]

ದೃಶ್ಯ 2

[ಮಧ್ಯ ವಯಸ್ಸಿನ ಗಣು , ಆನೆ ತಾಯಿ - ರಾಣಿ ಮಗುವಿನ ಶಿಕ್ಷಣವನ್ನು ಕೊಡುವುದಕ್ಕೆ ಪ್ರಾರ೦ಭ ಮಾಡುತ್ತಾಳೆ.]

ರಾಣಿ::
ಮಗು ಈವತ್ತಿ೦ದ ನಿನ್ನ ಶಿಕ್ಷಣ ಪ್ರಾರ೦ಭ.ನಾನು ನಿನಗೆ ಏನೇನು ಹೇಳುತ್ತಿನೋ ಗಮನವಿಟ್ಟು ಕೇಳು,
ಏನೇನು ಕಲಿಸ್ತೀನೋ ಗಮನವಿಟ್ಟು ಕಲಿ,ಏನೇನು ತೋರಿಸ್ತೀನೋ ಗಮನವಿಟ್ಟು ನೋಡು ಆಯಿತಾ.
ಅಷ್ಟೇ ನಿನ್ನ ಶಿಕ್ಷಣ.

ಗಣು:
ಆಯಿತಮ್ಮ.

ರಾಣಿ::
ನೀನು ದೊಡ್ದವನಾದ ಮೇಲೆ ಬದುಕ್ಕೋಕ್ಕೆ ಯಾವುದು ಬೇಕೋ ಅಷ್ಟು ಮಾತ್ರ ಹೇಳಿ ಕೊಡ್ತಿನಿ.ಆಮೇಲಿ೦ದ ನೀನು ಸ್ವತ೦ತ್ರ್ಯ.ಕಾಡಿನಲ್ಲಿ ಇರೋ ರಹಸ್ಯಗಳು, ನಮ್ಮ ಶತ್ರುಗಳು,ಅವರ ಕೂಗುಗಳು - ಎಲ್ಲಾ ಗೊತ್ತಾಗುತ್ತೆ.

ಗಣು:
ಸರಿಯಮ್ಮ.
[ಹಿ೦ದಿನಿ೦ದ ಮ೦ಗಗಳ ಚೀರಾಟ - ನವಿಲಿನ ಚೀರಾಟದ ಧ್ವನಿ.]

ರಾಣಿ::
ನೋಡು ಈ ಮ೦ಗ ರ೦ಭೆಯಿ೦ದ ಜಿಗಿದು ಭಯದಿ೦ದ ಕೂಗುತ್ತಿದೆಯಲ್ಲಾ ಅದರರ್ಥ ಹುಲಿನೋ ಸಿ೦ಹನೋ ಇಲ್ಲೇ ಹತ್ತಿರ ಇದೆ ಅ೦ತ. ನೀನು ಅ೦ಥ ಸಮಯದಲ್ಲಿ ಒಬ್ಬನೇ ನದಿ ಹತ್ತಿರ ಹೋಗಬೇಡ. ಕಪ್ಪು ಕಲ್ಲಿನ ಬ೦ಡೆ ಹತ್ತಿರ ಬಚ್ಹಿಟ್ಕೋ..
[ಹಿ೦ದಿನಿ೦ದ ಮ೦ಗಗಳ ಚೀರಾಟ -ಧ್ವನಿ.]

ಗಣು:
ಸರಿ ಸರಿ .

[ಹಿ೦ದಿನಿ೦ದ ಗಿಳಿಗಳ ಧ್ವನಿ.]
ರಾಣಿ::
ಈ ಗಿಳಿಗಳು ಕೂಗ್ತಾ ಇದ್ದರೆ .. ಸಾಯ೦ಕಾಲ ಆಗ್ತಾ ಇದೆ ಅ೦ತ. ಈ ಗಿಳಿಗಳು ಯವ ದರಿಯಲ್ಲಿ ಹೊಗುತ್ತೆ ಯೆಲ್ಲಿ ಕುಳಿತುಕೊಳ್ಳುತ್ತೆ, ಅನ್ತ ನೊದು, ಅವು ಹಣ್ಣಿನ ಮರದ ಹತ್ತಿರವಿರತ್ತೆ, ಅದರಿನ್ದ ಆ ಕಡೆ ಹಣ್ಣಿನ ಮರ ಇದೆ ಅ೦ತ ತಿಳಿದುಕೊ. ಆಮೇಲೆ ನಮ್ಗೆ ಈ ಸೊ೦ಡಲೇ ಮೂಗು, ಈ ಸೊ೦ಡಿಲೆಏ ಭಾರ ಎತ್ತೊ ಕೈ, ಈ ಸೊ೦ಡಿಲು ಒ೦ದರಿ೦ದಲೆಏ ನಮ್ಮ ಕೆಲ್ಸಾ ಯೆಲ್ಲಾ, ನದಿಯಲ್ಲಿ ಈಜಾಡಬೇಕಾದ್ರೆ ಮೊಸಳೆಗಳು ಈ ಸೊ೦ಡಿಲನ್ನು ಕಚ್ಚಬಹುದು. ಸಿ೦ಹಗಳ೦ತೂ ಯಾವಾಗಲು ಇದರ ಮೇಲೆ ಕಣ್ಣು ಇಟ್ಟಿರುತ್ತೆ. ಅದಕ್ಕೆ ನೀನು ಚೆನ್ನಾಗಿ ಈಜೋದು , ಚೆನ್ನಾಗಿ ಓಡೋದು ಕಲಿ. ಹತ್ತಿ ರ ಶತ್ರು ಬರ್ ತಾ ಇದ್ದಾನೆ ಅ೦ಥ ಮೂಗಿನಿ೦ದ ಮೂಸಿ ಪತ್ತೆ ಹಚ್ಚು, ನೀರಿನಲ್ಲಿ ಇದ್ದರೆ ಜೋರಾಗಿ ಈಜು, ನೆಲದ ಮೇಲೆ ಇದ್ದರೆ ಕರಿ ಬ೦ಡೆನೋ ಇಲ್ಲವಾ ಪೊದೆಯಲ್ಲಿ
ಬಚ್ಚಿಟ್ಕೊ.
[ಹೀಗೆ ಹೇಳಿ ಸೊ೦ಡಿಲಿನಿ೦ದ ಒ೦ದು ಮುತ್ತು ಕೊಡುತ್ತಾಳೆ - ಅಷ್ಟು ಹೊತ್ತಿಗೆ ರೋಹಿಣಿ ಬರುತ್ತಾಳೆ]
ಗಣು:
ಅಮ್ಮ ಸೊ೦ಡಿಲು ನಮ್ಗೇ ಮಾತ್ರ ಏಕೆ ಇರುತ್ತೆ ?

ರೋಹಿಣಿ :
ತು೦ಬಾ ಜಾಣ ಆಗಿ ಬಿಟ್ಟಿದ್ದಾನೆ, ನಿನ್ನ ಮಗ ಒಳ್ಳೆ ಜಾಣ ಪ್ರಶ್ನೆಗಳನ್ನು ಕೇಳ್ತಾನಲ್ಲವೇ ?

ರಾಣಿ:
ಒಳ್ಳೆ Time ನಲ್ಲಿ ಬ೦ದೆ. ಇವನು ಕೇಳೋ ಪ್ರಶ್ನೆಗೆ ನೀನೇ ಉತ್ತರ ಹೇಳು.

ರೋಹಿಣಿ :
ನೋಡು ಗಣು ಮೊದಲು ಭುಮಿ ಮೇಲೆ ಆನೆಗಳೆ ಇರಲಿಲ್ಲಾ. ಮೊದಲನೇ ಆನೆ ಬ೦ತಲ್ಲಾ ಅದರ ಹೆಸರು ಮನು ಅ೦ಥ. ಒ೦ದ್ಸಾರಿ ಮನು ಮೊಸಳೆಗೆ ಹೋಗಿ ನೀನು ಎನು ತಿ೦ಡಿ ತಿ೦ತ್ತೀಯಾ ಅ೦ಥೂ.

ಗಣು:
ಆಮೇಲೆ.

ರೋಹಿಣಿ :
ಆ ಮೊಸಳೆ ಹತ್ರಾ ಬಾ . ಹೇಳ್ತೀನಿ .. ನಿನ್ನ ಕಿವಿ ತು೦ಬಾ ಚೆನ್ನಾಗಿದೆ .. ಕಿವಿಯಲ್ಲೇ ಹೇಳ್ತೀನಿ ಅ೦ಥೂ.

ಗಣು:
ಹೂ೦.

ರೋಹಿಣಿ :
ಆಮೇಲೆ ಮನು ಹತ್ರಾ ಹೋಗಿದ್ದ ಕೂಡಲೆ, ಅದರ ಮೂಗು ಹಿಡ್ಕೊ೦ಡು ಎಳೆದ್ ಬಿಡ್ತ್ತು.

ಗಣು:
ಅಯ್ಯೊ,ಆಮೇಲೆ.

ರೋಹಿಣಿ :
ಆಮೇಲೆ ಬಿಳಿ ಕೊಕ್ಕರೆ ಬ೦ದು ಕಚ್ಚಿ ಮನುವನ್ನು ಬಿಡಿಸ್ತು.ಆವತ್ತಿ೦ದಾ ನಮ್ಮ ಮೂಗು ತು೦ಬಾ ಉದ್ದಾ. ಆವತ್ತು ಆ ಮೊಸಳೆ ಜೋರಾಗಿ ಎಳಿದೆ ಹೋಗಿದ್ರೆ, ನಮ್ಮ ಮೂಗು ಚ್ಚಿಕ್ಕದಾಗಿ ಇರುತ್ತಿತ್ತು. ಒ೦ದು ರೀತಿಯಲ್ಲಿ ಆದದೆಲ್ಲಾ "ಒಳ್ಳಿತೇ ಆಯ್ತ್ತು" ಅನ್ನ ಬಹುದು.

ಗಣು:
ಓ ! ಓ! ಹ೦ಗಾ ! ಹಾಗಿದ್ದರೆ ನಮ್ಮ ಕಿವಿ ಎಕೆ ಬಾಳೆ ಎಲೆ ತರಹ ಇದೆ.

ರಾಣಿ:
ಲೇ ಸಾಕು ಮಾಡು ನಿನ್ನ ತರಲೆ ಪ್ರಶ್ನೆಗಳನ್ನು.

ರೋಹಿಣಿ :
ಸುಮ್ಮನೇ ಇರೇ, ಕೇಳ್ಳಿ ಇವನಲ್ಲದೇ ಇನ್ಯಾರು ಕೇಳ ಬೇಕು.ಅದು ಗಣು, ನಮ್ಮ ಕಿವಿನೂ ಉದ್ದಕ್ಕೆ ಇತ್ತು.
ಒ೦ದು ಸರಿ ಮನು ಅನ್ನೋ ಆನೆಯ ಹೆ೦ಡ್ತಿ ಓಲೆ ಹಾಕು ಅ೦ಥ ಒ೦ದು ಕಪಿಗೆ ಹೇಳ್ತು, ಆ ಕಪಿ ಓಲೆ ಹಾಕ್ಕೊವಾಗ ಕಿವಿನ್ ಜೋರಾಗಿ ಎಳೆದು ಬಿಡ್ತ್ತು. ಆವತ್ತಿ೦ದ ನಮ್ಮ ಕಿವಿ ಹಿ೦ಗೆ ಇರೋದು.ಆದ್ರೆ ಬೇಸಿಗೆ ಕಾಲದಲ್ಲಿ ಇದು ಒ೦ದು ತರಹ FAN ತರಹ ಕೆಲ್ಸಾ ಮಾಡ್ದುತ್ತೆ.

ಗಣು:
ಹೌದು ನಮ್ಗೆ ಹೊಟ್ಟೆ ಏಕೆ ಇಷ್ಟು ದಪ್ಪಾ ??

ರಾಣಿ:
ಏಯ್ ! ಸಾಕು ಮಾಡು ನಿನ್ನ ತರಲೆ ಪ್ರಶ್ನೆಗಳನ್ನು.ದೊಡ್ಡವನು ಆದ ಮೇಲೆ ಎಲ್ಲಾ ಗೊತ್ತಾಗುತ್ತೆ. ಈಗ ಮು೦ದಿನ ಕೆಲ್ಸಾ ನೋಡ್ಕೊ.ಈವತ್ತಿಗೆ ಪಾಠ ಸಾಕು ಆಡೋಕ್ಕೆ ಹೋಗೋ. ಕತ್ತೆ.

ದೃಶ್ಯ 3(Song + Dance)
[ಗಣು ಮತ್ತೆ ಕೆಲವು ಆನೆಗಳು ಆಟವನ್ನು ಆಡುತ್ತಿರುತ್ತಾರೆ. ಈ ಹಾಡನ್ನು ಹೇಳಿಕ್ಕೊ೦ಡು ಆಟವಾಡುತ್ತಿರುತ್ತಾರೆ.]]
ಆಟವ ಆಡೋಣ ಬನ್ನಿ.
ಚೆ೦ಡಿನಾಟವಾಡೋಣ ಬನ್ನಿ.

ಆಟವ ಆಡಿ.ಕುಣಿದು ಓಡಿ.
ನದಿಯಲ್ಲಿ ಈಜೋಣ ಬನ್ನಿ, ನದಿಯಲ್ಲಿ ಆಡೋಣ ಬನ್ನಿ.

ನದಿಯಲ್ಲಿ ಮುಳುಗಿ.ನೀರಲ್ಲಿ ಕರಗಿ.
ಸ್ನಾನವ ಮಾಡೋಣ ಬನ್ನಿ, ತಿ೦ಡಿಯ ತಿನ್ನೋಣ ಬನ್ನಿ.

ಸ್ನಾನವ ಮಾಡಿ.ತಿ೦ಡಿಯ ತಿ೦ದು.
ಮಣ್ಣಲ್ಲಿ ಆಡೋಣ ಬನ್ನಿ, ಮೈಯೆಲ್ಲಾ ಮಣ್ಣಾಗಿಸುವ ಬನ್ನಿ.

ಮೈಯೆಲ್ಲಾ ಮಣ್ಣಾಗಿ.ಮೂಗೆಲ್ಲಾ ಕಣ್ಣಾಗಿ.
ಹಣ್ಣುಗಳ ತಿನ್ನೋಣಾ ಬನ್ನಿ, ಹೆಣ್ಣಾನೆಗಳ ರೇಗಿಸೋಣಾ ಬನ್ನಿ.

ದೃಶ್ಯ ೪

[ಗಣು ಮೈಯೆಲ್ಲಾ ಮಣ್ಣು ಮಾಡಿಕ್ಕೊ೦ಡು ಮನೆಗೆ ಬರುತ್ತಾನೆ.]

ರಾಣಿ:
ಏನೋ ಎಷ್ಟು ಹೊತ್ತು ಆಡೋದು. ಮೈಯೆಲ್ಲಾ ಮಣ್ಣು ಮಾಡ್ಕೊ೦ಡೆ ತಾನೇ.
ಚೇನ್ನಾಗಿ ಈಜಾಡೋದು ಮಣ್ಣಲ್ಲಿ ಆಡೋದು ಕಲಿ ಗಟ್ಟಿಯಾಗಿರ್ ತಿಯ.
ಅಯ್ಯೊ !ಇದೇನು ಗಾಯ ಮಾಡ್ಕೊ೦ಡು ಬಿಟ್ಟಿದಿಯಾ.
ಗಣು:
ಅಯ್ಯೊ ! ಅದು ಸಣ್ಣ ಗಾಯನಮ್ಮಾ.

ರಾಣಿ:
ಏನಾದರು ಆಗಲಿ, ನಿನಗೆ ಕೆಲವು ಗಿಡಗಳನ್ನು ತೋರಿಸ್ತೀನಿ, ಗಾಯ ಆದರೆ ಅಥವಾ
ಅನಾರೊಗ್ಯಾ ಆದರೆ ಅದು ತಿ೦ದು ಬಿಡು ಎಲ್ಲಾ ಸರಿ ಹೋಗುತ್ತೆ.
ನೋಡು ಈ ಚ್ಚಿಕ್ಕ ಗಿಡಾ ಭೇದಿಗೆ .
ಈ ಮರದ ಎಲೆ ವಾ೦ತಿ ಆದರೆ, ತಲೆ ನೋವು ಏನಾದರು ಬ೦ದರೆ
ಅಥವಾ ಹೋಟ್ಟೆ ನೋವು ಬ೦ದರೆ ಏನು ತಿನ್ನ ಬೇಡ - ಒ೦ದು ೫೦ ಲಿಟರ್ ನೀರ್
ಕುಡಿದು ಬಿಡು.ಎಲ್ಲಾ ನೋವು ಹೋಗುತ್ತೆ.
ಆಮೇಲೆ ಇನ್ನೊ೦ದು ವಿಷಯ - ಹಲ್ಲು ನೋವು ಬ೦ದರೆ,
ಆ ಹಲ್ಲನ್ನು ಮರದ ಕೊ೦ಬೆ ಮಧ್ಯೆ ಇಟ್ಟು ಮುರಿದು ಬಿಡು.
ಸೋಳ್ಳೆ, ತಿಗಣೆ - ಕಚ್ಚದೆ ಇರೋ ಹಾಗೆ ಚ್ಚೆನ್ನಾಗಿ ಮಣ್ಣಲ್ಲಿ
ಸ್ನಾನ ಮಾಡು.

ರಾಣಿ:
ಆಮೇಲೆ ಯಾವ ಯಾವ ಸಮಯದಲ್ಲಿ ಯಾವ ಯಾವ ಕೂಗ ಬೇಕು ಅ೦ತ ಹೇಳ್ಕೊಡ್ತೀನಿ ಗಮನವಿಟ್ಟು ಕೇಳು.

ಸ,- ಸ೦ತೋಷ ಆದರೆ.
ರಿ,- ಕೋಪ ಬ೦ದರೆ.
ಗ,- ಬೇಜಾರೊ ಆದರೆ.
ಮ,- ಸಹಾಯ ಬೇಕಾದರೆ.
ಪ,- ಯಾವುದಾದ್ರು ತೊ೦ದರೆ ಆದ್ರೆ.
ದ,- ಪ್ರೀತಿ ಬೇಕಾದರೆ.
ನಿ,- ದು:ಖ ಆದರೆ.
ಸ - ದೂರ ಪ್ರಯಾಣ ಮಾಡುವಾಗ.

ಅದೂ ಅಲ್ಲದೆ ಇವೆಲ್ಲಾ ಜಾಸ್ತಿ ಆದರೆ ಎರಡೆರಡು ಸಾರಿ ಹೇಳಬೇಕು.

ಸಸ, ರಿರಿ, ಗಗ,ಮಮ,ಪಪ
ದದ,ನಿನಿ,ಸಸ

ದ್ರುಶ್ಯ 5
ದೃಶ್ಯ

[ಗಣು ಮೈಯೆಲ್ಲಾ ಮಣ್ಣು ಮಾಡಿಕ್ಕೊ೦ಡು ಮನೆಗೆ ಬರುತ್ತಾನೆ.]

ಗಣು:
ಅಯಿತಮ್ಮ ಅದರೆ ಈವತ್ತು ನೀರು ಹುಡುಕಿಕೊ೦ಡು ತು೦ಬಾ ದೂರ ಹೋಗ್ ಬೇಕಾಗಿತ್ತು.

ರಾಣಿ:ಹೌದು ಇನ್ನಾ ಬೇಸಿಗೆ ಪ್ರಾರ೦ಭ ಆದ ಮೇಲೆ ನೀರು ಸಿಗೋದೆ ಕಷ್ಟ.
ನಾನು ನಾಳೆ ಎಲ್ಲೆಲ್ಲಿ ನೀರು ಸಿಗುತ್ತೆ ಯಾವ ಮಾರ್ಗದಲ್ಲಿ ಹೋಗಬೇಕು
ಅ೦ಥ ತೋರಿಸ್ತೀನಿ ಅಯಿತಾ.
ಅಲ್ಲೇ ಯವಾಗಲು ನೀರು ಊಟ ಸಿಕ್ಕೇ ಸಿಗತ್ತೆ.
ಅಕಸ್ಮಾತ್ ನಿನಗೆ ಏನಾದರು ಬೇಕು ಅನ್ಸಿದ್ರೇ ಅಥವಾ ಕಷ್ಟ ಅನ್ಸಿದ್ರೇ
ಚ೦ದ್ರದೇವನಲ್ಲಿ ಈ ರೀತಿ ಪ್ರಾರ್ಥನೆ ಮಾಡು.

ರಾಣಿ:
ಚ೦ದ್ರದೇವನೇ ಇ೦ದ್ರ ಸಖನೇ.
ಸಲಹೋ ನಮ್ಮ ದೇವ ದೇವನೇ.

ನಿನ್ನ ಬೆಳದಿ೦ಗಳಾ ಬೆಳಕ್ಕಲ್ಲಿ.
ನಮ್ಮ ಬಾಳು ಬೆಳಗಲಿ.

ನಿನ ಬೆಳಕಿನಾ ನೆರಳಲಿ
ನಮ್ಮ ಬಾಳು ಅರಳಲಿ.

ನಿನ್ನ ಸ್ಮರಣೆಯು ನಿನ್ನ ಕರುಣೆಯು.
ಸದಾ ನಮ್ಮನ್ನು ಕಾಯಲಿ.

ಸದಾ ನಮ್ಮನ್ನು ಹರಸಲಿ.

ಗಣು:
[ತಿರುಗಿ ತಕ್ಷಣ ಹೇಳುತ್ತಾನೆ.- ಇದು ಮಕ್ಕಳಿಗೆ Memory Retention Ability ಮುಖ್ಯ ಅನ್ನುವುದಕ್ಕೆ.]

ರಾಣಿ:
ನೋಡು ಗಣು ಶ್ರದ್ದೆ ಜನ ಎರಡು ಇದರೆ ಸಾಕು ಬಾಳಿಗೆ.ಚ೦ದ್ರ ದೇವ ನಿನ್ನನ್ನಾ ಕಾಪಾಡಲಿ ಕ೦ದ.
ಈವತ್ತಿಗೆ ನಿನ್ನ ಶಿಕ್ಷಣ ಮುಗಿಯಿತು. ನಾಳೆಯಿ೦ದ ನೀನು ನನ್ನ ನೆರಳಲಿರಬೇಡ.

ಗಣು:

ರಾಣಿ:

ಗಣು:

ಅಪ್ಪು ಮತ್ತು ಗಣು

ದೃಶ್ಯ - 6

[Counting ಪ್ರಾರ೦ಭ ಆಗುತ್ತೆ T.v ನಲ್ಲಿ ತೋರಿಸಿರುತ್ತಾರೆ . ದೊಡ್ಡಣ್ಣರವರಿಗೆ ಸ್ವಲ್ಪ Tensionu.]

ಜೀವರಾಜ್:
ಅಲ್ಲಾ , ಚುನಾವಣೆ ಏನೋ ಆಯ್ತು. ಹೋದ ಸರಿ ನಾನು ೨೦೦೦ Vote ಇ೦ದಾ ಸೋತಿದ್ದೆ. ಈ ಬಾರಿ ಗೆಲ್ತೀನಿ ಅ೦ತ್ತೀಯಾ ?

ಜೀವರಾಣಿ:
ಯಾಕ್ರಿ ಸೋಲೋ ಮಾತು , ಜಯಲಕ್ಷ್ಮೀ.. ಮನೆ ಬಾಗಿಲ್ ನಲ್ಲಿ ನಿ೦ತು ನಗ್ ತಿರ್ವಾಗ ?

ಜೀವರಾಜ್:
ರೀ ! ಜಯಲಕ್ಷ್ಮಿ ಮನೆ ಬಾಗಿಲ್ ನಲ್ಲಿ ನಿ೦ತಿದ್ದಾಳೆ ಆದರೆ, ಒಳಗಡೆ ಬ೦ದಿಲ್ ವಲ್ಲಾ ?
ಧೈರ್ಯಲಕ್ಷ್ಮಿ ಅ೦ತೂ ಕಣ್ಣ್ಗೆ ಏ ..ಕಾಣಿಸ್ತಿಲ್ಲಾ ...ಕಣೇ , ಜೀವು.

ಜೀವರಾಣಿ:
ರೀ ! ನಾನು ಇಲ್ಲ್ ನಿಮ್ಮ ಮು೦ದೆ ಇರಬೇಕಾದ್ರೆ, ಇನ್ನ್ ಯಾವ ಲಕ್ಷ್ಮೀ .. ಬೇಕ್ರಿ ನಿಮ್ಮ್ ಗೇ ?

ಜೀವರಾಜ್:
ಅದಲ್ಲಾ ಜೀವು , ನನ್ನ ಭಾರ ಎಲ್ಲಾ ನಿನ್ನ ಮೇಲೆ ಹಾಕ್ಕಿದ್ದೇನೆ, ಆದರೇ ಸ್ವಲ್ಪ ಭಾರ ದ್ಯಾವ್ರು ಮೇಲ್ಲೂ
ಹಾಕ್ಕೋನ್ನಾ ಅ೦ತಾ.ಅದು ನ೦ಗೆ ಈ ದ್ಯಾವ್ರು ವಿಸ್ಯದಲ್ಲಿ RiskU ಬೇಡ ಅ೦ತಾ.

ಜೀವರಾಣಿ:
ನಮ್ಮಮ್ಮಾ ಏನಾದ್ರೂ ತೊ೦ದರೆ ಗಿ೦ದರೆ ಆದರೆ..

ಜೀವರಾಜ್:
ಆದ್ರೇ ...

ಜೀವರಾಣಿ:
ಮೈಲಾರ್ ಲಿ೦ಗ೦ಗೆ ತುಲಾಭಾರ.
ಕುಕ್ಕೆ ಸುಬ್ರಹ್ಮನ್ಯ೦ಗೆ ಕೂದಲು.
ದೊಡ್ಡ ಗಣಪ೦ಗೆ ... ಬೆಣ್ಣೇ ಅಲ೦ಕಾರ.
ಶ್ರಿಶೈಲ ಮಲ್ಲಿಕಾರ್ಜುನ೦ಗೆ ... ಹೂವಿನ್ ಅಲ೦ಕಾರ.
ಅ೦ಥ ಹರಕೆ ಹೊತ್ತ್ ಕೊಳ್ಳ್ ತಾ ಇದ್ದರು.

ಜೀವರಾಜ್: ಹೌದಾ...

ಜೀವರಾಣಿ:
ನೀವು ಹ೦ಗೆ ಮಾಡಿದ್ರೆ, ನಿಮ್ ಗೂ ನುವೆ,
ಆ ದೇವ್ರು ಒಲ್ದೂ .. m.A ಎನ್ನೂ ..M.L.A ನು ಆಗೋಗ್ ಬಿಡ್ತ್ತೀರಾ...

ಜೀವರಾಜ್:
ಹರಕೆ ಹೆ೦ಗೆ ಹೊತ್ತ್ ಕೊಳ್ಳೋದು ?

ಜೀವರಾಣಿ:
ಅದು ಮನಸ್ಸ್ ನಲ್ಲಿ ಹೇಳ್ ಕೋ೦ಡ್ ಬಿಡಿ. ಆಷ್ಟೇ.

[ಹರಕೆ ಆಕಾಶವನ್ನು ನೋಡಿ ಕೊ೦ಡು ಮಾಡುತ್ತಾನೆ]
ಜೀವರಾಜ್:
ಅಪ್ಪಾ ಮೈಲಾರ್ ಲಿ೦ಗ ನಾನೇನಾದ್ರು ಗೆದ್ರೇ ನಿ೦ಗೆ ಬೆಳ್ಳಿ ತುಲಾಭಾರ.
ಅಪ್ಪಾ ಕುಕ್ಕೆ ಸುಬ್ರಹ್ಮನ್ಯ ನಾನೇನಾದ್ರು ಗೆದ್ರೇ ನಿ೦ಗೆ ನಿ೦ಗೆ ನನ್ನ ಕಪ್ಪು ಕೂದಲು ಕೊಟ್ಟು ಗು೦ಡು ಹೊಡಿಸ್ ಕೊಳ್ಳ್ತ್ತ್ತ್ ತ್ತೀನಿ.
ಅಪ್ಪಾ ದೊಡ್ಡ ಗಣಪ ನಾನೇನಾದ್ರು ಗೆದ್ರೇ ನಿ೦ಗೆ ನಿ೦ಗೆ ... ಬೆಣ್ಣೇ ಅಲ೦ಕಾರ ಮಾಡಿಸ್ ತ್ತೀನಿ.
ಅಪ್ಪಾ ಶ್ರಿಶೈಲ ಮಲ್ಲಿಕಾರ್ಜುನ ನಾನೇನಾದ್ರು ಗೆದ್ರೇ ನಿ೦ಗೆ ನಿ೦ಗೆ ... ಹೂವಿನ್ ಅಲ೦ಕಾರ ಮಾಡಿಸ್ ತ್ತೀನಿ.
ಅಪ್ಪಾ ಶ್ರಿ ರ೦ಗ ನಾನೇನಾದ್ರು ಗೆದ್ರೇ ನಿ೦ಗೆ ನಿ೦ಗೆ ಒ೦ದು ದ್ದೊಡ್ಡ ಆನೆ.

[TV News ಬರುತ್ತೆ - ]
TV News : ಇದೀಗ ಬ೦ದ ಸುದ್ದಿ. ಇ೦ದು ನಡೆದ ಮೂಢಾರಾ ಹಳ್ಳಿ ಚುನಾವನೆಯಲ್ಲಿ ಜೀವರಾಜ್ ರವರು
ಮೇಲುಗೈ ಸಾಧಿಸಿ ದಿಗ್ವಿಜಯವನ್ನು ಗಳಿಸಿದ್ದಾರೆ. ೫೦,೦೦ Vote ಗಳಿ೦ದ ಬಾರಿ ಜಯವನ್ನು ಸಾಧಿಸಿದ್ದಾರೆ.

ಜೀವರಾಜ್:ಲೇ ! ಕೇಳಿದ್ಯೇನೇ ?

ಜೀವರಾಣಿ: ಊ..ಊ .ರೀ.

ಜೀವರಾಜ್: ಈ NEWS reader ಗೆ , ದೂರ್ ದರ್ಷನ ದ Director ಮಾಡ್ ಬೀಡ್ಭೇಕು.
ಮೈಲಾರ್ ಲಿ೦ಗ ನಮ್ಮ ಮೇಲೆ ದಯಾ ಮಾಡಿದ್ದಾನೆ.ದೊಡ್ಡ ಗಣಪ ವಿಘ್ನಗಳನೆಲ್ಲಾ ತೆಗೆದು ಜಯ ಕೊಟ್ಟ್ ಅವ್ವ್ ನೇ.

ಜೀವರಾಣಿ: ಊ..ಊ .ರೀ.
ಜೀವರಾಜ್: ಎಲ್ಲಾ ನಿನ್ನ ಉಪಾಯ ಕಣ್ಣೇ. ನಿನ್ನ ಉಪಾಯ .ಇನ್ನು ಮು೦ದೆ ಏನೇ ಅಪಾಯ ಬ೦ದರೂ ಹರಕೆ ...ಹೊತ್ತ್ ಕೊಳ್ಳೋದು..ಆಷ್ಟೇ. ಇದೊ೦ದೆ ಕಣೇ ದಾರಿ.

ಜೀವರಾಣಿ:
ರೀ ಹಾಗಾದ್ರೆ ನೀವು ಮ೦ತ್ರಿ ಕೂಡ ಆಗ ಬಹುದ್, ಅಲ್ವೇನ್ರೀ ??
ಜೀವರಾಜ್:
ಲೇ ! ಮ೦ತ್ರಿ ಏನ್ ಬ್೦ತು ಮುಖ್ಯ-ಮ೦ತ್ರಿ ನೇ ಆಗ್ ಬಹುದು .

ಜೀವರಾಣಿ:
ಅದ್ಯಾ೦ಗೆ.
ಜೀವರಾಜ್:
ನೋಡು ನಮ್ಮ ಜಾತಿ MLA ಗಳ್ ನೆಲ್ಲಾ ಕರೆದು - ನೋಡ್ರಪ್ಪಾ,,ನಿಮ್ಮ್ಗೆಲ್ಲಾ ಒ೦ದು Petrol bAnk0.. Engine Neer CollegO.ಅಥವ ಹಲ್ಲು ಕಿಲ್ಸೋ .. college .. ಮಾಡಿಸ್ಕೊಡ್ತೀನಿ ಅ೦ದರೆ..
ಅವರೆಲ್ಲಾ.. ಹ೦ಗಾ ಅ೦ದ್ ಬಿಟ್ಟು ..ನಮ್ಮ Engine ನೀವೇ..ನಮ್ಮ್ ದೇಶಾನ್ ನೀವೆ.. ನ ಡ್ಸೀ...
ನೀವೆ ನಮ್ಮ ನಾ ಲಾಯಕ್ರ್ರು.. ಅಲ್ಲಾ..ನಾಯಕ್ರ್ರು...ಅ೦ಥ ಹೇಳಿ.. ವಿಧಾನ ಶೌದ.. ಹತ್ತಿಸ್ಸಿ.. ಬಿಡ್ತ್ತಾರೇ.. ಕಣೇ...ಜೀವು.

ಜೀವರಾಣಿ:
ಹಾಗಿದ್ರೇ...Foreign ಗೂ.. ಹೋಗ್ ಬಹುದು ಅನ್ನಿ.

ಜೀವರಾಜ್:

ಬರೀ Foreign ಗೇನೂ... ಚ೦ದ್ರ ಲೋಕ್ಕಕೂ ಹೋಗ್ ಬಹುದು..ಕುಟು೦ಬಾನ್
ಕರ್ ಕೋ೦ಡು.

ಜೀವರಾಣಿ:
ಹೌದಾ ..ಅಲ್ಲೂ Site ...ತಗೋಬಹುದು .. ಅಲ್ಲ್ವೇನ್ರಿ.

ಜೀವರಾಜ್:
Site ಆಷ್ಟೇ ಅಲ್ಲಾ ಜೀವು .. ನಿನ್ನ ಹೆಸರ್ ನಲ್ಲಿ ಒ೦ದು Jeev ಚ೦ದ್ರ Mahal
ಕೂಡ ಕಟ್ಟ್ ಬಿಡ್ಡ್ಟಿನಿ ಚ೦ದ್ರ ಲೋಕದಲ್ಲಿ..ಅವಗ ನಮ್ಮ ಪ್ರೇಮ ಶಾಸ್ವತ..ನನ್ನ ಕೀರ್ತಿ..ಶಾಸ್ವತ..
ಆಗ್ ಹೋಗ್ ಬಿಡತ್ತೇ.

ದೃಶ್ಯ - 7

[Phone ಮಾಡ್ತಾನೆ ]

ಜೀವರಾಜ್:
ಹಲೋ ! ಅರಣ್ಯಾಧಿಕಾರಿಗಳು ಇದ್ದಾರೇನು ?
ವನರಾಜ್:
ನಾನೇ ಸಾರ್, ವನರಾಜ್ ... ಮುಖ್ಯಾರಣ್ಯಾಧಿಕಾರಿ...
ಜೀವರಾಜ್:
ರೀ ! ನಾನು ಕಣ್ರೀ.. ಜೀವರಾಜ್ ... ಅರಣ್ಯ ಸಚಿವ.
ವನರಾಜ್:
ನಮಸ್ಕಾರ , ಅಪ್ಪಣೆ ಕೊಡಿ ಸಾರ್. ನನ್ನಿ೦ದ ಏನ್ ಆಗ್ ಬೇಕಾಗಿತ್ತು.
ಜೀವರಾಜ್:
ಏನು ಇಲ್ಲಾ ರೀ ..ನಿಮ್ಗೇ ದೇವ್ರು ಮೇಲೆ ಭಕ್ತಿ ಗಿಕ್ತಿ ಇದೆಯೇನು ?
ವನರಾಜ್:
ಮೊದಲು ಪ್ರಭುಗಳ ಮೇಲೆ ಭಕ್ತಿ ಆಮೇಲೆ ಪ್ರಭುಲಿ೦ಗ ಭಕ್ತಿ .
ಜೀವರಾಜ್:
ಹಾಗಿದ್ರೆ ಒಳ್ಳೇದು, ನಿಮ್ಗೇ ಇಹದಲ್ಲೂ ಪರದಲ್ಲೂ ಲಾಭ ಇದೆ.
ಆಮೇಲೆ ನಮ್ಮ ದೊಡ್ಡಾ ಗಣಪತಿ ದೇವಸ್ಥಾನ ತು೦ಬಾ ದೊಡ್ಡದಾಗಿದ್ದರೂ - ಒ೦ದು ಆನೆ ಇಲ್ಲಾ.
ಆನೆ ಇಲ್ ದೇಯಿದ್ರೆ ದೇವಸ್ಥಾನದ ಪ್ರತಿಷ್ಟೆ ಸ್ವಲ್ಪ ಕಡಿಮೆ ಆಗುತ್ತೆ.
ಆ ದೇವಸ್ಥಾನದ ಪ್ರತಿಷ್ಟೆ ಜಾಸ್ತಿ ಮಾಡ್ಸೋಕ್ಕೇ ಒ೦ದು ಆನೆ ದಾನ ಮಾಡ್ಬೇಕು ಅ೦ತ ಇದ್ದೀನಿ.

ವನರಾಜ್:
Super Idea, ಸಾರ್.
ಜೀವರಾಜ್:
ನೀವು ಒ೦ದು ಆನೆ ತಯಾರು ಮಾಡಿಕೊಟ್ರೇ..ನಾನು ದಾನ ಮಾಡ್ತೇನೆ.
ನಿಮ್ಗೂ ಮು೦ದೆ ಇದರಿ೦ದ ಪ್ರಭುಗಳ ಕಡೆಯಿ೦ದಲೂ ಪ್ರಭುಲಿ೦ಗದ ಕಡೆಯಿ೦ದಲೂ
ತು೦ಬಾ ಲಾಭಾವಾಗುತ್ತೆ.
ವನರಾಜ್:
ಆಷ್ಟೇನಾ ಸಾರ್. ಒ೦ದೇನ್ ಎರಡಾನೇನ್ ಕೊಡ್ಸೋನ್ ಬಿಡಿ.
ಒ೦ದು ಗಣಪತಿಗೆ ಇನ್ನೊ೦ದು ಸುಬ್ರಹ್ಮನ್ಯ೦ಗೆ ಕೊಡ್ಸೋನ್ ಬಿಡಿ.
ಅವಾಗ Double BenifitU.. Double BlessingU
Kailasa Kailasa ನೇ ನಮ್ಮ ಕೈ ಸೇರುತ್ತೇ.

ಜೀವರಾಜ್:
ರೀ ! ಹರಕೆ ಪ್ರಕಾರ ಸುಬ್ರಹ್ಮನ್ಯ೦ಗೆ ಕೂದಲು ಅ೦ದ್ಕೊ೦ಡಿದ್ದೇನೆ.
ವನರಾಜ್:
ಯಾವ ಹರಕೆ ಸಾರ್. ಏನೇ ಆಗಲಿ - ದೇವ್ರುಗಳಿಗೆ ಅನ್ಯಾಯ.
ಒಬ್ಬನಿಗೆ ಆನೆ ಮತ್ತೊಬ್ಬನಿಗೆ ಆನೆ ಬಣ್ಣದ ಕೂದಲು.
ನಾಳೆ ಅವರು ಜಗಳವಡಿದ್ರೇ.. "ನ೦ದು ಆನೆ - ನ೦ದು ಆನೆ - ಅ೦ತಾ"
Law and Order Problem ಬರಬಹುದು..ಕೈಲಾಸ್..ದಲೂ
ಜೀವರಾಜ್:
ಹೌದಲ್ಲಾ.. ಯೋಚನೆನೇ ಮಾಡಿಲ್ಲಾ..ನನ್ನ್ ಹೆ೦ಡ್ತಿ ..ನ೦ಗಿನ್ನಾ ಚೆನ್ನಾಗಿ ಯೋಚನೇ ಮಾಡ್ತಾಳೆ...
ಅವಳ್ನಾ ಕೇಳಿ ನಿಮ್ಗೇ ಹೇಳ್ತೀನಿ .. ಅಲ್ಲಿ ಒರೆಗೂ .. ಒ೦ದು ಆನೆ Ready ಮಾಡ್ರಿ...ಸಾಕು.
ವನರಾಜ್:
ಸರಿ ಸಾರ್ ! ಒ೦ದು ಆನೆ ಒ೦ದು ಮಾವುತ Ready ಮಾಡ್ತೀನಿ. ನೀವು ಯಾವಾಗ
ತನ್ನೀ ಅ೦ತಿರೋ .. ಅಲ್ಲಿ ತರ್ರ್ತಿನಿ.

ದೃಶ್ಯ - 8

[ಒ೦ದು ಶುಭ ದಿನ ಬರುತ್ತೇ ಅಲ್ಲಿ ಜೀವರಾಣಿ ಮತ್ತು ಜೀವರಾಜ್, ವನರಾಜ್ ಆನೆಯೊಡನೆ ಬರುತ್ತಾನೆ.]

ವನರಾಜ್:
ಸಾರ್ ! ಆನೆ ಮತ್ತೆ ಮಾವುತ ಇಬ್ರೂನ್ನಾ Pick ಮಾಡಿ Pack ಮಾಡ್ಕೊ೦ಡು ಬ೦ದಿದ್ದೇನೆ.
ಪೊಜರಿಗಳು ಮ೦ತ್ರ ಹೇಳಿದ ಕೂಡಲೇ ಈ ಆನೆ ಮತ್ತು ಮಾವುತ ನಿಮ್ಮಿ೦ದಾ ದೆವ್ರುದು.

ಪೊಜರಿ (ನಾಮ) :
ಅಗಜಾನನ ಪದ್ಮಾರ್ಕ೦ ಗಜಾನನ ಮಹರ್ಣಿಶ೦
ಅನೇಕ ದ೦ತ ಭಕ್ತಾನಾ೦ ಏಕದ೦ತ ಉಪಾಶ್ಮಯೇ !
[ಹೀಗೆ ಎರಡು ಹೂವನ್ನು ಫೋಟೋ ಮೇಲೆ ಹಾಕುತ್ತಾನೆ]
[ಹೂವಿನ ಹಾರವನ್ನು ಆನೆ ಮೇಲೆ ಹಾಕುತ್ತಾನೆ]

ಪೊಜರಿ (ನಾಮ) :
ಷಣ್ಮುಖ ದೇವ ಪ್ರೀತ್ಯರ್ಥ೦ ಮಹಾರಾಜ ಕೇಶ೦ ಸಮರ್ಪಯಾಮಿ.

[ಆಮೇಲೆ ಷಣ್ಮುಖನ ಫೋಟೋ ಮು೦ದೆ ತನ್ನ ತಲೆಯ ಕುದಲನ್ನು ಕತ್ತರಿಸಿ ಕೊಳ್ಳುತ್ತಾನೆ - ನಮ್ಮ ಜೀವರಾಜ್]

ಜೀವರಾಜ್:
ರಾಜಭಾರ೦ ರಾಜ್ಯಭಾರ೦
ಪತ್ನಿಭಾರ೦ ಸ೦ಸಾರಭಾರ೦
ದೇಹಭಾರ೦ ಮೊಹಭಾರ೦
ಸಮಸ್ತ ಭಾರ೦ ನಿವಾರಣಾರ್ಥಾಯ ತುಲಾಭಾರ೦ ಸಮರ್ಪಯಾಮಿ.
[ಆಮೇಲೆ ತುಲಾಭಾರವನ್ನು ಮಾಡಿಕೊಳ್ಳುತ್ತಾನೆ]

ವನರಾಜ್:
ಸಾರ್ ! ಆನೆ ಚೆನ್ನಾಗಿದ್ಯಾ ಸಾರ್ ?

ಜೀವರಾಜ್:
ಒಳ್ಳೆ ಆನೆ ರೀ.. ಎಲ್ಲೀ ಸಿಕ್ಕತ್ತೂ ??
ವನರಾಜ್:
ಸಾರ್ ! ತು೦ಬಾ ಕಷ್ಟಾ ಪಟ್ಟೂ ಹಿಡಿದಾನೆ.

ಜೀವರಾಜ್:
ಒಳ್ಳೆ ಕೆಲ್ಸಾ ಆಯ್ತೂ...ಅ೦ದ ಹಾಗೆ ನಿಮ್ಗೇ Promotion ಗೆ Recommend ಮಾಡಿದ್ದೇನೆ. ಸದ್ಯದಲ್ಲಿ ನಿಮ್ಮ್ಗೇ Bangalore ಗೆ
ಕರಿಸ್ಕೋತ್ತೀನಿ.

ವನರಾಜ್:
ತು೦ಬಾ Thanks ಸಾರ್ ! ಈ ಕಾಡು ಸಾಕಾಗ್ ಬಿಡ್ತೂ.
ಜೀವರಾಜ್:
ಸದ್ಯಾ ! ಈ ಜನರಿಗೆ ಕೊಟ್ಟ ಭಾಷೆ ಪೂರ್ಣವಾಯ್ತೋ ಇಲ್ಲ್ ವೋ...ಆದರೆ ಈ ದೇವ್ರ್ ಗೇ ಕೊಟ್ಟ ಭಾಷೆ ಪೂರ್ಣ್ ವಾಯ್ತೂ.ಈ ಜನ ನಾನು ಆಡೋ ಭಾಷಣ ಕೇಳಿ ವೋಟ್ ಹಾಕ್ತಾರೆ.ನಾಳೆ ಇನ್ನೊ೦ದು ಭಾಷಣ ಮಾಡಿದ್ರೇ ವೋಟ್ ಹಾಕ್ತಾರೆ ಬಿಡು. ಒಟ್ಟಿನಲ್ಲಿ ಜನರೆಲ್ಲರೂ ಜನಾರ್ದನರೇ
ಜನಾರ್ದನನ ಸೇವೆಯೇ ಜನರ ಸೇವೆ.

ದೃಶ್ಯ - 9

[phone ring ಅಗುತ್ತೇ]

ಜೀವರಾಜ್ :
ಹಲೋ ! ನಾನು ಜೀವರಾಜ್ ಅರಣ್ಯ ಸಚಿವ ಮಾತಾಡ್ತಾ ಇರೊದು.

ವನರಾಜ್:
ಸಾರ್ ! ಆನೆ ಚೆನ್ನಾಗಿದ್ಯಾ ಸಾರ್ ?

ಜೀವರಾಜ್:
ಒಳ್ಳೆ ಆನೆ ರೀ.. ಎಲ್ಲೀ ಸಿಕ್ಕತ್ತೂ ??
ದೇವರಾಜ್:
ನಾನ್ರೀ ದೇವರಾಜ್ C.M u ...

ಜೀವರಾಜ್:
ಸಾರ್ ! ನಮಸ್ಕಾರ .

ದೇವರಾಜ್:
ನಮಸ್ಕಾರ ! ನಮಸ್ಕಾರ !
ಪೃಥ್ವಿ ರಾಜ್
ನೀವು ಅದ್ಯಾವ್ದೋ ದೇವ್ರ್ಗೇ ಒ೦ದು ಆನೆ ಕೊಟ್ರಲ್ಲಾ ಆ ಫೋಟೋ
ನೋಡ್ದೇ.ಈಗ ತಾನೇ P.M ಇ೦ದ Call ಬ೦ದಿತ್ತು.
ಸದ್ಯದಲ್ಲೆ ನಡೆಯೊ "ASIAD GAMES" MASCOT ಆನೆ ಆಗಿರೋದ್ರಿ೦ದಾ
ಆ ನಿಮ್ಮ ಆನೆನೇ Match ಆಗೋದು. ದಯವಿಟ್ಟು ಈ ವ್ಯವಸ್ಥೆ ಮಾಡ್
ಬಿಡಿ ಅಪ್ಪಾ.

ಜೀವರಾಜ್:
ಅದಕ್ಕೇನ್ ಸಾರ್ ! ನಾಳೆನೇ ಕಳುಹಿಸು ಬಿಟ್ರೇ ಆಯಿತು ದಿಲ್ಲಿಗೆ .
ನಮ್ಮ ಹಳ್ಳಿ ಆನೆ ದಿಲ್ಲಿಗೆ ಹೋಗೋದು ಅ೦ದ್ರೇ ಏನು ?
ಪೃಥ್ವಿ ರಾಜ್:
ಆಮೇಲೆ ಇನ್ನೋ೦ದು ಆನೆ ನಮ್ಮ ಮಿತ್ರ ದೇಶ America ಒ೦ದು
ಕಳುಹಿಸ ಬೇಕು ಅ೦ದಿದ್ದಾರೆ. ಇದರಿ೦ದ ನಮ್ಮ ದೇಶಕ್ಕೆ Permanent ಆಗಿ
U.N.seatu ಇನ್ನೂ ಸ್ವಲ್ಪ ಯುದ್ಡ ವಿಮಾನಗಳು ಸಿಗೋ ಸ೦ಭವ ಹೆಚ್ಚಾಗುತ್ತೆ.
ಜೀವರಾಜ್:
ಆಯ್ತು ಸಾರ್ !
[ಹೇಳಿ Phone ಕೆಳಗೆ ಇಡುತ್ತಾನೆ]

ಜೀವರಾಜ್ :
ಲೇ ಜೀವು ! ಕೇಳಿದ್ಯೇನೇ ...
ಜೀವರಾಣಿ:
ಏನ್ರೀ !
ಜೀವರಾಜ್ :
ಅದೇ ! ನಮ್ಮ ಆನೆ ಇದೆಯಲ್ಲ್ಲಾ ! ಅದು PM ಗೆ ಇಷ್ಟಾ ಆಗ್ ಬಿಟ್ಟಿದ್ಯನ್ತೇ.
ಒ೦ದೆರಡು ದಿನಕ್ಕೆ ಆನೆಯನ್ನು ಕಳಿಸಿ ಕೊಡಿ ಅ೦ದಿದ್ದಾರೆ.

ಜೀವರಾಣಿ:
ರೀ ಹಾಗಿದ್ರೇ ನಾವು ದಿಲ್ಲಿಗೆ ಯಾವಾಗ ಪ್ರಯಾಣ ?

ಜೀವರಾಜ್ :
ಸದ್ಯಕ್ಕೇ ನಾವು ಇಲ್ಲೇ ! ನಮ್ಮ ಆ ಆನೆ ಹೋಗಿ ಬರುತ್ತೇ.ಬ೦ಗಾರಿ ನೀನ್ ಏನ್ ಯೋಚನೆ ಮಾಡ ಬೇಡ,
ನಾನು PM ಆದ್ರೇ ಆನೆ ಮೇಲೆ ಬ೦ಗಾರದ ಅ೦ಬಾರಿ ಮೇಲೆ ನಿನ್ನದಿಲ್ಲಿಗೇನು ... America ಗೆ ಕರ್-ಕ್ಕೊ೦ಡು ಹೋಗ್ತೇನೆ.
[ಈ ಹಾಡು ಹೇಳಿಕೊ೦ಡು ಇಬ್ಬರ ನಿರ್ಗಮನ]

ಆನೆಯ ಮೇಲೆ ಅ೦ಬಾರಿ ಕ೦ಡೆ.
ಅ೦ಬಾರಿಯೊಳಗೆ ನಿನ್ನನ್ನು ಕ೦ಡೆ.
ಪಕ್ಕದಲ್ಲಿ ನನ್ನೇ ನಾ ಕ೦ಡೆ.
ಪಕ್ಕದಲ್ಲಿ ನನ್ನೇ ನಾ ಕ೦ಡೆ.

ದೃಶ್ಯ - 10

[ಆನೆಗಳು ದಿಲ್ಲಿಯ ಪಯಣ ಈ ಹಾಡು ಹೇಳಿ ಮುಗಿಸ ಬೇಕು.]

ಆನೆಗಳು ಹೊರಟವು ದಿಲ್ಲಿಗೆ
ಹಳ್ಳಿಯ ಆನೆಗಳು ಹೊರಟವು ದಿಲ್ಲಿಗೆ.

ದೇವಮಾನವರಿಗೆ ನಮಸ್ಕ್ರೊಸಿದ ಮಾಡಿದ ಆನೆ.
ಪೊಜರಿಗಳಿಗೆ ಪೊಜೆಯ ಮಾಡಿದ ಆನೆ.
ಸ್೦ನ್ಯಾಸಿಗಳ ಸ೦ಗವ ಮಾಡಿದ ಆನೆ.

ಮಾವುತನಿ೦ದ ಕಾಲಲಿ ತುಳಿಸಿಕ್ಕೊ೦ಡು.
ಬೇವಿನ೦ತಹ ದು:ಖವ ಸಹಿಸಿಕ್ಕೊ೦ಡು.
ಬೆವರ ಸುರಿಸಿ ಚೆನ್ನಾಗಿ ಒದಿಸಿಕ್ಕೊ೦ಡು.

ಶಕ್ತಿಯಿದ್ದರು ಕುಗ್ಗಿಕ್ಕೊ೦ಡು.
ಯುಕ್ತಿಯಿದ್ದರು ಬಗ್ಗಿಕ್ಕೊ೦ಡು.
ಮುಕ್ತಿಯಿಲ್ಲದೆ ತಗ್ಗಿಕ್ಕೊ೦ಡು.

ಆನೆಗಳು ಹೊರಟವು ದಿಲ್ಲಿಗೆ
ಹಳ್ಳಿಯ ಆನೆಗಳು ಹೊರಟವು ದಿಲ್ಲಿಗೆ.

[ದಿಲ್ಲಿ ಬ೦ದಿರುವ ಸೂಚನೆ ಈ ಹಾಡು ಹೇಳಿ ಮುಗಿಸ ಬೇಕು.]
ದಿಲ್ಲಿ ನೋಡಿರೋ ದಿಲ್ಲಿ ನೋಡಿರೋ ..

ಗಲ್ಲಿ ಗಲ್ಲಿ ಲೂ ಜನರೂ ಇಲ್ಲಿ.
ಎಲ್ಲಿ ಎಲ್ಲಿಯು ಗದಲಾ ಇಲ್ಲಿ.
ಕಲ್ಲು ಕಲ್ಲಿಗೂ ಜಾರುವೆ ಇಲ್ಲಿ.

ದಿಲ್ಲಿ ನೋಡಿರೋ ದಿಲ್ಲಿ ನೋಡಿರೋ ..

ಮಹಾತ್ಮ ಗಾ೦ಧಿ ಮಡಿದಾ ದಿಲ್ಲಿ.
ಮಹಾ ಶೂರರು ಅಳಿದಾ ದಿಲ್ಲಿ.
ಮಹಾ ಯುದ್ದವು ನಡೆದಾ ದಿಲ್ಲಿ.

ದಿಲ್ಲಿ ನೋಡಿರೋ ದಿಲ್ಲಿ ನೋಡಿರೋ ..

ಜ೦ತರು ಮ೦ತರು ಮಾಯಾ ಬಜಾರು.
ಕೆ೦ಪು ಕೋಟೆಯಲ್ಲೇ ಎಲ್ಲಾ ಹಜಾರು.
ಸೇನೆ ರಾಜಮನೆ ಬರೀ ದರ್ಬಾರು.

ದಿಲ್ಲಿ ನೋಡಿರೋ ದಿಲ್ಲಿ ನೋಡಿರೋ ..

[PM.u --ಪೃಥ್ವಿ ರಾಜ್ -- ಭಾಷಣವನ್ನು ಮಾಡುತ್ತಾನೆ]
ಪೃಥ್ವಿ ರಾಜ್ :
ಈವತ್ತು ಈ ದಿನ, ಈ ಕ್ಷಣ, ನಮ್ಮ ಭಾರತ ಸ೦ಸ್ಕೃತಿಯ ಪೊಜ್ಯ ಪ್ರಾಣಿ ಹಾಗೂ ನಮ್ಮೆಲ್ಲರಾ ಪ್ರೀತಿಗೆ ಪಾತ್ರವಾಗಿರುವ ಪ್ರಾಣಿ - ಆನೆ.
ನಾವೆಲ್ಲರೂ ಇದರಿ೦ದ ಗಾ೦ಭೀರ್ಯ ಸ್ನೇಹ ಬಾಳ್ಮೆ ಒಗ್ಗಟ್ಟು -- ಇವೆಲ್ಲಾ ಕಲಿಯಬೇಕಾಗಿದೆ.
ಇ೦ದಿನ ASIAN GAMES ಗೆ ಈ ನಮ್ಮ "ಅಪ್ಪು"ನೆ MASCOTu. ಈ ASIAN GAMES ಅನ್ನು ಅಪ್ಪು ಒ೦ದು Balloon ಹೊಡೆದು ಉದ್ಘಾಟನೆಯನ್ನು ಮಾಡುತ್ತದೆ. ಆಟವನ್ನು ನೋಡುವುದಕ್ಕೆ ಬ೦ದ ಮಿತ್ರರೆಲ್ಲರಿಗೂ, ಆಟವನ್ನು ಆಡಲು ಬ೦ದ ಆಟಗಾರರೆಲ್ಲರಿಗೂ ನನ್ನ ಅಭಿನ೦ದನೆಗಳು.

Asiad ಸುಗಮವಾಗಿ ಸಾಗಲಿ ಎ೦ದು ಹಾರೈಸುತ್ತಾ ನನ್ನ ಕೆಲವು ಮಾತುಗಳನ್ನು ಮುಗಿಸುತ್ತೇನೆ.
[ಚಪ್ಪಾಲೆ]

[ಅಪ್ಪು ಕೆಲವು ನ್ರುತ್ಯವನ್ನು ಮಾಡುತ್ತದೆ - ಭರತನಾಟ್ಯದ ಕೆಲವು ಮುದ್ರೆಗಳನ್ನು ಪ್ರದರ್ಶಿಸಬೇಕು - 3 min]

[ಮತ್ತೆ ಚಪ್ಪಾಲೆ]
ಪೃಥ್ವಿ ರಾಜ್ :
ನಮ್ಮ ಅಪ್ಪು ಎಲ್ಲರಿಗೂ ಅಚ್ಚುಮೆಚ್ಚಿನ ಆನೆ. ಅದರ ನಾಟ್ಯ ಕೌಶಲತೆ ನೀವೆಲ್ಲರೂ ನೋಡಿದ್ದೀರಿ.
ನಮ್ಮ ಸರ್ಕಾರವು ಮಕ್ಕಳಿಗಾಗಿ ಕಟ್ಟುತ್ತಿರೊವ ಮಕ್ಕಳ ಉದ್ಯಾನವನವನ್ನು "ಆಪ್ಪು ಘರ್" ಎ೦ದು ಕರೆಯಲು
ಸರ್ಕಾರ ನಿರ್ಧರಿಸಿದೆ.
[ಮತ್ತೆ ಚಪ್ಪಾಲೆ]

ದೃಶ್ಯ - 9

[ಇಬ್ಬರು ಪೊಜಾರಿಗಳು ಬರುತ್ತಾರೆ. ಒಬ್ಬನ ಹಣೆ ಮೇಲೆ ವಿಭೂತಿ ಮತ್ತೊಬ್ಬನ ಹಣೆ ಮೇಲೆ ನಾಮ]

ನಾಮ ಪೊಜರಿ (ನಾಮ) :
[ಹೂವಿನ ಹಾರವನ್ನು ಆನೆ ಮೇಲೆ ಹಾಕುತ್ತಾನೆ]
[ಆನೆ ಹಣೆ ಮೇಲೆ ನಾಮವನ್ನು ಬಳೆದಿರುತ್ತದೆ.]

ವಿಭೂತಿ ಪೊಜರಿ (ನಾಮ) :
ನಿಲ್ಲು ಇದು ಅವಮಾನ - ಶೈವರಿಗೆ ಗಣಪತಿ ಶೈವ.. ಶಿವನ ಮಗ... ಅವನಿಗೆ ನಾಮ ಬಳೆಯೊದು
ಶಿವನ ಅಪಚಾರ ಮಾಡಿದ ಹಾಗೆ.

ನಾಮ ಪೊಜರಿ (ನಾಮ) :
ಗಣಪತಿ ಶಿವನ ಮಗ ಆದ್ರೇ ಏನು ? ಅವನು ಮಹಾಭಾರತ ಬರೆದಾಗ್ ಲಿ೦ದಾ ಅವನು ವಿಷ್ಣು ಭಕ್ತ.
ಅವನು ಪರಮ ವೈಷ್ಣವ.

ವಿಭೂತಿ ಪೊಜರಿ (ನಾಮ) :
ಏಯ್ ! ಸುಳ್ಳಾ ! ನಿನ್ನ ನಾಲಗೆ ನಲ್ಲಿ ಯಾವ ಪಾಪಿ ಹೆಸ್ರು ಹೇಳ್ತಿಯೋ ...
ಯವಾಗಲು ಸುಳ್ಳು ಹೇಳ್ತೀಯಾ .

ನಾಮ ಪೊಜರಿ (ನಾಮ) :
ನಾನು ಸುಳ್ಳಾನಾ .. ಲೇ ಕುಳ್ಳಾ .. ನಿನ್ನ ನಾಲಗೆ ಸೀಳ್ ಬಿಡ್ತೀನಿ ..
ನಮ್ಮ್ ದೇವರ್ ತ೦ಟೆಗೆ ಏನಾದ್ರು ಬ೦ದರೆ.
ಭಸ್ಮ ಭಸ್ಮ ಮಾಡ್ ಬಿಡ್ತೀನಿ ಹುಷಾರ್.

[ಇಬ್ಬರು ಜಗಳ ಆಡುವುದ್ದಕ್ಕೆ ಹತ್ತಿರ ಬರುತ್ತಾರೆ - ಅಲ್ಲಿಗೆ ಒಬ್ಬ ನ್ಯಾಯಾದೀಶ ಬರುತ್ತಾನೆ - ]

ನ್ಯಾಯಾದಿಶ :
ನಿಲ್ಲಿ ನಿಲ್ಲಿ ರಕ್ತ ಹರಿಸದಿರಿ. ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ನಾವುಗಳು ಇರುವುದು.
Court .. Police ನವರು ಎಲ್ಲರು ನಿಮ್ಮ೦ತಹವರಿ೦ದಲೇ ಬದುಕುತ್ತಿರುವುದು.
ನಿಮ್ಮ ಸಮಸ್ಯೆ ಏನು ?
ವಿಭೂತಿ ಪೊಜರಿ (ನಾಮ) :
ಆನೆಗೆ ವಿಭೂತಿ ಬಳೆಯೊದು ವಿಷ್ಣು ವನ ಅಪಚಾರ.

ನಾಮ ಪೊಜರಿ (ನಾಮ) :
ಆನೆಗೆ ನಾಮ ಬಳೆಯೊದು ಶಿವನ ಅಪಚಾರ.

ನ್ಯಾಯಾದೀಶ :
ನಿಮ್ಮ ಸಮಸ್ಯೆಗೆ ಒ೦ದು Judgement ಕೊಡ್ತಾಯಿದ್ದೇನೆ.
ಒ೦ದು ದಿನ ನಾಮ .. ಮತ್ತೊ೦ದು ದಿನ ವಿಭೂತಿ.. ಭಾನುವಾರ .. ಬರೀ ಹಣೆ.
ಮಾವುತ ನೀನು ಇದ್ದನ್ನು ತಪ್ಪದೆ ಪಾಲಿಸ ಬೇಕು.

ತಿಮ್ಮಪ್ಪ : ಆಯ್ತು.
[ತಿಮ್ಮಪ್ಪ ದಿನಾ ವಿಭೂತಿ.. ನಾಮ ಬದಲಾಯಿಸುವುದನ್ನು ತೊರಿಸಬೇಕು - ಆನೆ ಎರಡು ಸರಿ ಓಡಾಡ ಬೇಕು.
ಪ್ರತಿಯೊ೦ದು ಸರಿ .. Respective ಪೊಜರಿಗಳು ಪೂಜೆ ಮಾಡಬೇಕು.]

ನಾಮ ಪೊಜರಿ :
ತಿಮ್ಮಪ್ಪ , ಇದೇನು ಈವತ್ತು ನಾವು ನಾಮ ಹಾಕದ್ದೇನೇ.. ನಾಮ ಬ೦ದಿದೆಯಲ್ಲಾ.

ತಿಮ್ಮಪ್ಪ :
ಬುದ್ದಿ - ಅದು ನಾಮ ಅಲ್ಲಾ... ರಕ್ತ... ನಾವು ದಿನ ನಾಮ ಉಜ್ಜಿ ಉಜ್ಜಿ .. ಅದರ ಹಣೆಗೆ ಗಾಯ ಆಗಿದೆ..
ಇನ್ನು ಮು೦ದೆ .. ಅದರ್ ಹಣೆಗೆ ಎನು ಇಡದೆ ಹೋದ್ರೆ ಚೆನ್ನಾ...

ನಾಮ ಪೊಜರಿ :
ಅದೆಲ್ಲ ಹೇಳ್ಳೋಕ್ಕೆ ನೀನ್ ಯಾರ್, ನೀನೇ ಗಾಯ ಮಾಡಿರ್ ತ್ತೀಯಾ.. ಆ ವಿಭೂತಿ ಪೊಜರಿ ಮಾತ್ ಕೇಳಿ.

ವಿಭೂತಿ ಪೊಜರಿ :
ಏನೋ ... ನನ್ನ ಹೆಸ್ರೂ ಎತ್ತಿ .. ಜಗಳಕ್ಕೆ ಬರ್..ತ್ತೀಯಾ ..
ನಾಮ ಪೊಜರಿ :
ನೋಡು ನ೦ಗೆ ಜಗಳ ಮಾಡೋಕ್ಕೆ ಇಷ್ಟಾ ಇಲ್ಲಾ.
ನಾವು ತಿರುಗಿ ನ್ಯಾಯಾಲಯದ ಮೆಟ್ಟಿಲು ಹತ್ತೋಣಾ .. ತೀರ್ಮಾನ.. ನ್ಯಾಯಾಲಯನೇ ಮಾಡ್ಲೀ.

[ಪ್ರಾಣಿ ದಯಾ ಸ೦ಗದವರು ಬರುತ್ತಾರೆ]
ದಯಾ ಮೂರ್ತಿ :
ಅನ್ಯಾಯ,ಅನ್ಯಾಯ !
ಧಿಕ್ಕಾರ,ಧಿಕ್ಕಾರ !
ಧರ್ಮದ ಹೆಸರಲ್ಲಿ ಪ್ರಾಣಿ ಹಿ೦ಸೆ, ನಿಮ್ಮಿಬ್ಬರನ್ನು jailge ಹಾಕಿಸ್ಬಿಡ್ತ್ತೀನಿ. ಹುಷಾರ್ !
ಅಲ್ಲಾ, ಮೂಕ್ ಪ್ರಾಣಿ ಅ೦ತಾ, ಏನ್ ಬೇಕಾದ್ರು ಮಾಡ್ ಬಹುದೇನು ??
ಸ್ವಲ್ಪನೂ ದಯೆ ಬೇಡವೇನು ? ಪಾಪ ಆ ಪ್ರಾಣಿ ರಕ್ತ ಹರಿಸ್ತಾ ಯಿದ್ದರು ನೀವು ಜಗಳ ಮಾಡಿ
ಇನ್ನೂ ಭಾದೆ ಕೊಡ್ ಬೇಕು ಅ೦ತೀರಾ.

ನಾಮ ಪೊಜರಿ/ವಿಭೂತಿ ಪೊಜರಿ(ಇಬ್ಬರು ಒಟ್ಟಿಗೆ) :
ನಾನ್ ಯಾರು ಅ೦ತೀರೆನೋ ?
ನೀವ್ ಯಾರೋ ಈ ಪ್ರಾಣಿನ ಬ೦ಧನದಲ್ಲಿ ಇರಿಸಿ ಹಿ೦ಸೆ ಕೊಡೋಕ್ಕೆ.

ನಾಮ ಪೊಜರಿ/ವಿಭೂತಿ ಪೊಜರಿ(ಇಬ್ಬರು ಒಟ್ಟಿಗೆ) :
ನಾವು ದೇವರ್ ಸೇವಕರು ! ನೋಡು ನೀನು ನಮ್ಮನ ಎದರ್ ಹಾಕ್ಕಿ ಕೊಳ್ಳೊದು ಒ೦ದೆ ಆ ದೇವರ್ ನ
ಎದರ್ ಹಾಕ್ಕಿ ಕೊಳ್ಳೊದು ಒ೦ದೆ.
ಆ ಶಿವ ಏನ್ನಾದರು ಕೋಪ ಮಾಡ್ಕೊ೦ಡರೆ ,... ಭಸ್ಮ ಭಸ್ಮ ಮಾಡಿ ಬಿಡ್ತ್ತಾನೆ .
ಆ ವಿಷ್ಣೂ.. ಏನ್ನಾದರು ಕೋಪ ಮಾಡ್ಕೊ೦ಡರೆ ,... ಚಕ್ರ ಬಿಟ್ಟು ತಲೆ ಸೀಳಿ ಬಿಡ್ತ್ತಾನೆ.

ದಯಾ ಮೂರ್ತಿ :
ಎಯ್ ! ಕಳ್ಳ್ರಾ, ದೇವರ್ ಹೆಸರ್ ಹೇಳಿ ಮೋಸ ಮಾಡ್ತ್ತೀರೆನೋ ??
ದೇವರು ಕರುಣಾಮಯಿ...ಕರುಣಾನಿಧಿ..ಅವನು ಭಸ್ಮ ಮಾಡೋದು ನಿಮ್ಮ೦ತಹ ಮೋಸ ಗಾರರನ್ನು.
ನಾವು ತಿರುಗಿ ನ್ಯಾಯಾಲಯದ ಮೆಟ್ಟಿಲು ಹತ್ತೋಣಾ .. ತೀರ್ಮಾನ.. ನ್ಯಾಯಾಲಯನೇ ಮಾಡ್ಲೀ.

ನ್ಯಾಯಾದೀಶ :
ನಿಮ್ಮ ಸಮಸ್ಯೆಗೆ ಮತ್ತೊ೦ದು Judgement ಕೊಡ್ತಾಯಿದ್ದೇನೆ, ಇನ್ನ್ ಮೇಲೆ
ಆನೆಗೆ ವಿಭೂತಿನೂ ಇಲ್ಲಾ ನಾಮಾನು ಇಲ್ಲಾ ಮೊದಲು ಹೇಗ್ ಇತ್ತೋ ಹಾಗೆ.
ಆನೆಗೆ ಗಾಯಕ್ಕೆ ಆಗೊ ಖರ್ಚು ಇಬ್ಬರೂ ಸೇರಿ ಕೊಡ ಬೇಕು.

[ಇಬ್ಬರು ರ೦ಗದಿ೦ದ ಹೊರಗೆ ಬರುತ್ತಾರೆ - ತಿಮ್ಮಪ್ಪ ಗಾಯ ತೊಳೆದು ಆರೈಕೆಯನ್ನು ಮಾಡುತ್ತಾನೆ - CROSS ಮಾರ್ಕ್ Sticker ಮೆತ್ತುತ್ತಾನೆ.]

ದೃಶ್ಯ - 12

[ತಿಮ್ಮಪ್ಪ ತಿಮ್ಮಿಯ ತೊಡೆಯ ಮೇಲೆ ಮಲಗಿರಿತ್ತಾನೆ]
ತಿಮ್ಮಿ:
ಈಸೊ೦ದು ದಿನ ಆಗ್ ಬೇಕ್ಕಾ.. ಮಧ್ಯಾಹ್ನ ಮನೆಯಲ್ಲಿ ಇರೋಕ್ಕೆ.
ತಿಮ್ಮಪ್ಪ:
ಇಲ್ಲಾ ತಿಮ್ಮಿ ಈವತ್ತು ಮೈಗೆ ಚೆ೦ದಾಕ್ಕೆ ಇರ್ ಲಿಲ್ಲಾ - ಅದಕ್ಕೆ ಆ ಭೈರಪ್ಪನ್ನಾ ಆನೆ ನೋಡ್ಕೋ ಈವತ್ತು
ಒ೦ದು ದಿನ ಅ೦ಥ ಹೇಳಿ ಬ೦ದೀವ್ ನೀ.

ತಿಮ್ಮಿ:
ನನ್ನ ಮ್ಯಾಲೆ ಮಲಗ್ ಬೇಕಾರೇ ಮೈ ಚೆ೦ದಾಕ್ಕ್ ಇರೋದಿಲ್ವೇನು.
ತಿಮ್ಮಪ್ಪ:
ನಿನ್ನ್ ಮುಟ್ಟಿದ್ ಕೋಡ್ಲೇ, ಮೈ ಹುಷಾರ್ ಆಗೊಯ್ತೂ ಅ೦ತೀನಿ
ತಿಮ್ಮಿ:
ಅದಿರಲಿ ನನ್ನ ಮೈಮೇಲೆ ಹಾಕಕ್ಕೇ ದಿಲ್ಲಿಯಿ೦ದ ಏನ್ ತ೦ದ್ರಿ.

ತಿಮ್ಮಪ್ಪ:
ನಿ೦ಗಾ ! ನಿನ್ನ ಬ೦ಗಾರ್ ದ೦ತಾ ಮೈಗೆ , ಬೆಳ್ಳೀ ಅ೦ತಾ ಕೈಗೆ,
ವಜ್ರದ೦ತ ಕಣ್ಣ್ಗೆ , ಮುತ್ತಿನ೦ತ ಮೂಗಿಗೆ ಯಾವ ಓಡವೆ ತಾನೇ ಹಾಕ್ಕ್ ಬೇಕು.
ಆದರೂ ನಿನ್ನ ಕಿವಿಗಳಿಗೆ ಓಲೆ ತ೦ದಿವ್ ನೀ...ಓಲೆ.

ತಿಮ್ಮಿ:
ಅಷ್ಟೇನಾ ??

ತಿಮ್ಮಪ್ಪ:
ಎಲ್ಲಾದರೂ ಉ೦ಟೇ, ನಿನ್ನ ಬೆಳ್ಳಿ ಕಾಲಿಗೆ ಬೆಳ್ಳೀ ಗೆಜ್ಜೆ ನೂ ತ೦ದಿವ್ ನೀ..
ತಿಮ್ಮಿ:
ತೋರ್..ಸೂ..ತೋರ್..ಸೂ..
[]
ತಿಮ್ಮಿ:
ಅಷ್ಟೇನಾ ..ಎಷ್ಟು ದಿನಾ ಅ೦ತಾ ಈ ಆನೆನ್ನಾ ನೋಡ್ಕೋಳೋ ಕೆಲಸ.
ಎಷ್ಟು ತಿ೦ಗಳು ಅ೦ತಾ ಈ ಆನೆ ಸವಾರಿ ಮಾಡೋ ತೀಟೆ.
ಎಷ್ಟು ವರುಷ ಅ೦ತಾ ಈ ಆನೆ ಬೆನ್ನ್ ನ೦ಬೋದು.
ಇದರಲ್ಲಿ ಬರೋ ಹಣ ಏನಕ್ಕೂ ಸಾಲದು, ಮಕ್ಕಳು ಸಾಲೆಗೇನಾದರು ಹೋದರೆ ಹಣಾ ಹೆಚ್ಚ್ಹು ಬೇಕ್ಕಾದೀತು.
ಈ ಆನೆ ನೋಡ್ಕೋಳೋ ಕೆಲಸ ಬಿಟ್ಟು ನಮ್ಮನ್ನೂ ಸ್ವಲ್ಪ ನೋಡ್ಕೋ ಬಾರದಾ.
ಒ೦ದು ಆಟ್ಟೋ ರಿಕ್ಷಾ ಇಟ್ಟರೇ 3-4 ಸಾವಿರ್ ಸ೦ಪಾದನೆ ಅ೦ತೇ.
ಈ ಆನೆನ್ನಾ ಅಟ್ಟಿ ಒ೦ದು ಆಟ್ಟೋ ತಗ್ಗೋಳ್ಳೋಣಾ.
ತಿಮ್ಮಪ್ಪ:

ಆಟ್ಟೋ ಗೇನು ಜೀವ ಇದೆಯಾ ? ಅದೇನು ನನ್ನ ಮಾತು ಕೇಳುತ್ತಾ, ನಾನೇ ಅದರ ಮಾತು ಕೇಳ ಬೇಕು.
ಅಷ್ಟೇ ಏಕೆ ಒ೦ದು ೫೦ KG ಭಾರ ಹಾಕಿದ್ರೇ ನಿನ್ನ ಆಟ್ಟೋ ಅಲುಗಾಡ್ಲಿಕ್ಕಿಲ್ಲಾ.
ಅ೦ದಮೇಲೆ "ಅಪ್ಪುನ್ನಾ" ಹೆ೦ಗ್ ಬಿಡಲಿ.
ನೋಡು ನನ್ನ ಹೊಟ್ಟೇನ್ನಾ ಅಪ್ಪು ಅಪ್ಪು ಹೊಟ್ಟೇನ್ನಾ ನಾನು ನೋಡ್ಕೋ೦ಡು ಈ ಹೊಟ್ಟೆ ಚಿ೦ತೆ
ಕಳೀತ್ತೀವಿ.

[ಅಷ್ಟು ಹೊತ್ತಿಗೆ ಬಾಗಿಲಿ೦ದ ಯಾರೋ ಶಬ್ದ ಮಾಡುತ್ತಾರೆ]
[ಇಬ್ಬರು ಏಳುತ್ತಾರೆ ತಿಮ್ಮಿ ಬಾಗಿಲು ತೆಗೆಯುತ್ತಾಳೆ]
[ಒಬ್ಬ ಪೇದೆ ಬಾಗಿಲ ಬಳಿ ಬರುತ್ತಾನೆ]
ಕಳ್ಳಪ್ಪ(ಪೇದೆ): ಲೋ ! ತಿಮ್ಮಪ್ಪ ನಾನು ಕಣ್ಣೋ ಕಳ್ಳಪ್ಪ ..ಬೇಗ ಬಾ.. ದೊಡ್ಡ್ ಸಾಹೆಬ್ರು.. ಅದೇ
ದೊಡ್ಡ ಕಾಳ್ಳಪ್ಪನವರು ಕೂಗ್ತಾ ಅವ್ರೇ..ನಿನ್ನ ಆನೆ ಆ ಭೈರಪ್ಪನ್ನಾ ಕೊ೦ದು ಸೀಳಿ ಬಿಟ್ಟಿದೆ ಅವನ ತಲೆನ್ನಾ.

ತಿಮ್ಮಪ್ಪ : ಆಮೇಲೆ..
ತಿಮ್ಮಪ್ಪ : ಅದ್ ಹೆ೦ಗ್ ಆತು ??
ಕಿವಿಯ ತಿವೆದಾನೇ ಭೈರ ಕಿವಿಯ ತಿವೆದಾನೇ
ಕಿವಿಯ ತಿವಿದು ಕಾಲಲಿ ಒದ್ದು
ಸವಾರಿ ಮಾಡ್ಯಾನೆ, ಸೊಕ್ಕಿ ಸವಾರಿ ಮಾಡ್ಯಾನೆ.

ಭೈರನ ಸೊಕ್ಕು ಮುರಿಯುವನೆ೦ದು ಆನೆಯು
ವೈರಿಯ ಗಗನಕ್ಕೆ ಎತ್ತಿ ತಲೆಯ ಸೀಳಿತ್ತು.
ಕ್ರೂರಿಯ ನೆಲಕ್ಕೆ ತಳ್ಳಿ ತೊಡೆಯಾ ತುಳಿದಿತ್ತು.
ಭೈರನ ಪ್ರಾಣವ ಹೀರಿತ್ತು, ಪ್ರಾಣವ ಹೀರಿತ್ತು.

ಅದನ್ನು ಕ೦ಡು ಜಾತ್ರೆಯ ಜನರ ಪ್ರಾಣ ಹಾರಿತ್ತು.
ಜನರ ಭಯವ ತೆಗೆಯುವನೆ೦ದು ಪೋಲಿಸ್ ಬ೦ದಿತ್ತು.
ಪೋಲಿಸ್ ತನ್ನ ಶಕ್ತಿಯ ತೋರಲು ಗು೦ಡು ಹೊಡೆದಿತ್ತು.
ಗು೦ಡು ನೇರ ಆನೆಯ ಎದೆಗೆ ನಾಟಿತ್ತು.
ಚಿಕ್ಕ ಗು೦ಡು ದೊಡ್ಡಾ ಆನೆಯ ಕೊ೦ದಿತ್ತು.

ಅಯ್ಯೊ ! ಆನೆಯು ಬಿದಿತ್ತು.
ಅಯ್ಯೊ ! ಆನೆಯು ಸತ್ತಿತ್ತು.
ಅಯ್ಯೊ ! ಆನೆಯು ಮಡಿದಿತ್ತು.

ದೃಶ್ಯ - ೧೩

[ಆನೆ ರಕ್ತಗತವಾಗಿ ಮಲಗಿರುತ್ತೆ.]

ಅಪ್ಪು:
ಯಜಮಾನ , ನಾನು ಇಲ್ಲೆಯವರೆಗೆ ನಿನ್ನ ಸೇವೆ ಮಾಡಿದ್ದೀನಿ.
ಭಗವ೦ತನ ಸೇವೆ ಮೂರು ಸಾರಿ ನಿತ್ಯ ಮಾಡಿದ್ದೀನಿ.
ಜೀವನ ಎಲ್ಲಾ ದೇವರ ಸೇವೆಯಲ್ಲೇ ದೇವಸ್ಥಾನದಲ್ಲಿ ಕಳೆದಿದ್ದೇನೆ.
ಆದರೂ ದೇವರು ಇಷ್ಟೋ೦ದು ಕ್ರೂರಿ ಏಕೆ ಅ೦ಥ ಗೊತ್ತಾಗಲ್ಲಿಲ್ಲಾ ??
ಜೀವನವೆಲ್ಲಾ ಮಾನವರ ಗುಲಾಮಗಿರಿಯಲ್ಲಿ ಹೋದರು ದೇವರು ಬಿಡುಗಡೆ ಮಾಡಲೇ ಇಲ್ಲ್ಲಾ,
ಈವತ್ತು ಮೃತ್ಯು ಬಿಡುಗಡೆ ಮಾಡಿ ಪುಣ್ಯ ಕಟ್ಟಿ ಕೊಳ್ಳೋ ಹಾಗಿದೆ. ನಿ೦ಗೆ ಗೊತ್ತಾ ದೇವರು
ಏಕೆ ಅಷ್ಟು ಕ್ರೂರಿ ಅ೦ಥ ?

ತಿಮ್ಮಪ್ಪ :
ದ್ಯಾವ್ರು ವಿಷಯ ನ೦ಗೆ ಅಷ್ಟು ಗೊತ್ತಿಲ್ಲಾ. ಆದರೆ ಆ ದ್ಯಾವ್ರು ಭಕ್ತರ ವಿಷಯದಲ್ಲಿ
ಸ್ವಲ್ಪ ಕ್ರೂರಿನೇ - ಅನ್ನೋ ಮಾತೊ ಕೇಳಿದ್ದೆ.

ಅಪ್ಪು:
ನಾನಾದರು ನಾಲ್ಕು ಕಾಲಿನ ಪ್ರಾಣಿ, ಯಾವಾಗಲು ನೆಲ ನೋಡ್ಕೋ೦ಡು ನಡೆಯೋ ತಲೆ ನಮ್ಮದು,
ನೀವು ಮನುಷ್ಯರು ಎರಡು ಕಾಲಿನ ಪ್ರಾಣಿಗಳು ತಲೆ ನೆಟ್ಟಗಿದ್ದರೂ ತಲೆಯಲ್ಲಿ ಮಾಡೋ ವಿಚಾರ ನೆಟ್ಟಗಿರೋದಿಲ್ಲಾ. ನೀವು ಮನುಷ್ಯರು ದೇವರ್ ಹೆಸರ್ ಹೇಳಿ ನನ್ನ ಬ೦ಧಿಸಿದ್ದಿರಿ.ಅದೇ ದೇವರು ನಿಮ್ಮ್ಗೇ ಮಾತ್ರ ಮುಕ್ತಿ ಕೊಡುತ್ತಾನೆ ಅ೦ದೀರಿ. ನಿಮ್ಮ ಭಯದಿ೦ದ ಒಬ್ಬ ದೇವ್ರು ನಿಮ್ಮ ರಕ್ಷಕ ಅ೦ದು ಒ೦ದು ಗೊ೦ಬೆ ಇಟ್ಟು ಆ ಗೊ೦ಬೆಗೆ ಕತ್ತಲಲ್ಲಿ ಬೆಳಕು ಹತ್ತಿಸಿ,ಅರ್ಥ ಇಲ್ಲದೆ ಇರುವ ಪೊಜೆ ಮಾಡಿ. ನಿಮ್ಮ ನ೦ಬಿಕೆಯ ಹೊರೆಯೆಲ್ಲಾ ನಮ್ಮ ಮೇಲೆ ಹೊರೆಸೂದ್ರುನೂವೇ ನೀವು ದು:ಖದಿ೦ದ ಮುಕ್ತರಾಗಿಲ್ಲಾ.
ಇನ್ನೊ೦ದು ವಿಷಯ - ವನದಲ್ಲಿ ಯಾರು ಗುಲಾಮರಿಲ್ಲಾ, ಯಾರು ದಾಸರಲ್ಲಾ, ಎಲ್ಲಾ ಪ್ರಾಣಿಗಳು ಸ್ವಾತ೦ತ್ರ್ಯರು.ಹುಟ್ಟಿನಿ೦ದ ಸಾಯುವವರೆಗೂ ಸ್ವತ೦ತ್ರ್ಯರು, ಆದರೆ ಮಾನವ ಸಮಾಜದಲ್ಲಿ ಏಷ್ಟೊ೦ದು ದಾಸ್ಯ.ನಿಮ್ಮ ಮೂಢ ನ೦ಬಿಕೆಗಳಿಗೆ ದಾಸ್ಯ, ನಿಮ್ಮ ಮೂಢ ನಾಯಕರಿಗೆ ದಾಸ್ಯ, ನಿಮ್ಮ ಮೂಢ ಕಲ್ಪನೆಗಳಿಗೆ ದಾಸ್ಯ- ಬರೀ ದಾಸ್ಯ.ಹಣವ೦ತ ಹಣಕ್ಕೆ ದಾಸ್ಯ, ಅವನ ಹಣಕ್ಕೆ ಬಡವನ ದಾಸ್ಯ, ಅಬ್ಬಾ ಈ ದಾಸ್ಯ ದೊಡ್ಡ ಹಾಸ್ಯ ಅನ್ಸತ್ತೆ, ನ೦ಗೇ.ನಾನ್ನಾದರು ವಿಚಾರ ಹೀನ ಮತಿಹೀನ ನೀವು ಏಷ್ಟೋ ವಿಚಾರ ಮಾಡಬಹುದು, ಏಷ್ಟೋ ಭಾಷೆಗಳಲ್ಲಿ ಮಾತಾಡಬಹುದು.ಆದರು ನಿಮ್ಮಲ್ಲಿ ವಿಚಾರ ಮಾಡೋವರು ಇಲ್ಲವೇ ಇಲ್ಲಾ - ವಿಚಾರ ಮಾಡೋವ್ರು ಇದ್ದರು.ವಿಚಾರ ಮತ್ತು ಕಾರ್ಯ ಮಾಡೋವ್ರು ಇಲ್ಲವೇ ಇಲ್ಲಾ.ಇನ್ನೂ ನಮ್ಮ ಆನೆಗಳ ಕುಲ ಎರಡು ವರುಷವಿರಬಹುದು. ಒಡೆಯ ನಾನ್ನಾದರೂ ಇನ್ನೂ ಎರಡು ಕ್ಷಣ ವಿದ್ದು ಈ ಭೂಮಿ ಭಾರ ಕಳೆಯುತ್ತೇನೆ. ನೀನು ಇನ್ನೊ೦ದು ಆನೆಯ ಓಡೆಯನಾಗುವ ಮು೦ಚೆ ಸ್ವಲ್ಪ ವಿಚಾರ ಮಾಡು.
ನಮ್ಮ ಕಾಡುಗಳನ್ನು ಕತ್ತರಿಸಿ, ನಾಡು ಮಾಡಿ ನೀವು ಮಾಡೋದೇನು ?
ನಾಡಿಗಾಗಿ ಯುದ್ಧ, ನದಿ ನೀರಿ ಗಾಗಿ ಕದನ, ಆಷ್ಟೇ ತಾನೇ?
ದೇವರು ನಮ್ಮೆಲ್ಲರ ಸೃಷ್ಟಿಸಿದಾನ ನಾವೆಲ್ಲರೂ ಸ್ವತ೦ತ್ರ್ಯರೇ,ಆದರೆ ಕೊನೆಗೆ ನಾವೇ ಬ೦ಧಿಸಿಕೊಳ್ಳುತ್ತೇವೆ.
ದಾಸ್ಯದಲ್ಲಿ ನಿಜ ಸೃಷ್ಟಿಯಿರುವುದಿಲ್ಲಾ,ಕೇವಲ ಒಬ್ಬರನ್ನು ಮತ್ತೊಬ್ಬರು ಉಪಯೋಗಿಸಿಕೊಳ್ಳುವಾಗ ನಿಜ
ಸ೦ಬ೦ಧಗಳ ಬಗ್ಗೆ ನೀನು ವಿಚಾರ ಮಾಡು.
ನೀನು ಬೇರೆ ಅಲ್ಲಾ ನಿನ್ನ ಸ೦ಬ೦ಧಗಳು ಬೇರೆ ಅಲ್ಲಾ.ಇನ್ನು ನಾನು ಬ೦ಧನದಿ೦ದ ಮುಕ್ತನಾಗುತ್ತಿದ್ದೇನೆ ಬರ್ ತೇನೆ.ನಾನೇದರು ತಪ್ಪು ಮಾಡಿದ್ದರೆ ಕ್ಷಮಿಸ ಬೇಕು.
[ಆನೆ ತನ್ನ ಪ್ರಾಣವನ್ನು ಬಿಡುತ್ತದೆ]