ಅಪ್ಪ

ಅಪ್ಪ

ಕವನ

ಅಪ್ಪ 

ಅಪ್ಪ ಒಂದು ಅನಿರ್ವಚನೀಯ ಅನಿಕೇತನ
ಮಕ್ಕಳು ಬಯಸಿದಾಗ ಬೇಡಿದೆಲ್ಲವ  ಶಕ್ತಿಮೀರಿ ತಂದುಕೊಡುವ ಚೇತನ |
ಸೂರ್ಯ ಚಂದ್ರ  ತಾರೆಯಂತೆ ಮಿನನುಗುವ 
ಹೊಳೆದು ಇತರರ ಬೆಳಗುವ ನಂದಾದೀಪ ಅಪ್ಪ||

ತೀರ್ಥರೂಪವಾಗಿ ಮಗುವ ಹೆತ್ತು 
ಹತ್ತು ಹದಿನೆಂಟು ವರುಷಗಳ ಕಾಲ ಹೊತ್ತು
ನಿರುಪೇಕ್ಷೆಯಿಂದ ಸಾಕಿಬೆಳೆಸುವ ದೇವಮಾನವ|
ಗಾಣದೆತ್ತಿನಂತೆ ನಮಗಾಗಿ ದುಪ್ಪಟ್ಟು ದುಡಿದರೂ
ಕಾಣದಂತೆ ಇರುವ ಅನಾಮಿಕ
ತನಗಾಗಿ ಏನನೂ ಕೂಡಿಡದ ಮನೆಯ ನಾವಿಕ||

ನೀತಿ ನಿಯಮ ಧರ್ಮದಾದಿ ಹಾಕಿಕೊಟ್ಟು
ನೇಮ ಸತ್ಯದಲ್ಲಿ ನೆಡೆದು ತೋರಿಸುವ ದಾರ್ಶನಿಕ|
ನೂರು ಕಷ್ಟ ಸಹಿಸಿ ಪ್ರೀತಿ ಮಮತೆ ಮೂಟೆಹೊತ್ತು 
ಎಲ್ಲಮಕ್ಕಳಿಗೂ ಸಮಾನವಾಗಿ ಹಂಚುವ ಮಾಂತ್ರಿಕ||

ಬೆನ್ನುಬಾಗಿ ತಲೆ ನೆರೆತರೂ ದುಡಿದೇ ಬದುಕುವ ಛಲಗಾರ
ನೋವನುಂಡು ನಗುಮೊಗವ ತೊರುತ ತೃಪ್ತಿದಾತ|
ನೆಲ‌ ಜಲ ಭಾಷೆ ಸಂಸ್ಕೃತಿ ವಂಶ ಪರಂಪರೆಯ ಹರಿಕಾರ
ಅಸಾಧ್ಯವ ಸಾಧಿಸಿ ತೋರುವ  ಸಾಧನಾಶೀಲ ಶಿಲ್ಪಿ ಅಪ್ಪ||

                   *ಜಾನಕಿತನಯಾನಂದ

ಅನಿಕೇತನ=ಮನೆಇಲ್ಲದವನು / ದೇವರು