ಅಬಾಬಿಗಳ ಲೋಕ
ಕವನ
೧.
ಮೈಯಲ್ಲಿ ಹರಿಯುವುದು
ಕೆಂಪು ರಕುತ
ಹಸಿವೆಗೆ ಅನ್ನವೇ ಬೇಕು
ರತ್ನಾ.....
ಯಾಕೆ ಬಡಿದಾಡ್ತಾರೋ?
*೨*
ಬಣ್ಣಗಳೇಳು ಸೇರಲು
ಅಪ್ಪಟ ಶ್ವೇತವಂತೆ
ಶಾಂತಿ ಶುದ್ಧತೆ ಅಡಗಿದೆ
ರತ್ನಾ....
ಹ್ಯೊಕೈ ಯಾಕಂತೆ?
*೩*
ಉಸಿರು ನಿಂತಾಗ
ಬರಿಯ ಕೊರಡು
ಉಸಿರಾಡುವಾಗ
ರತ್ನಾ....
ಏನಾದರೂ ಸಾಧಿಸು
*೪*
ಆ ಬಣ್ಣ ಈ ಬಣ್ಣ
ತಲೆಕೆಡಿಸದಿರು
ಜೀವನದ ಹಾದಿ
ರತ್ನಾ......
ಹುಡುಕಿ ಜಯಿಸು
*೫*
ಹಿತ್ತಾಳೆ ಕಿವಿಯಾಗಿ
ಚಂದ ನೋಡುವವರ
ಅಡಿಯಾಳಾಗಿದ್ದರೆ
ರತ್ನಾ....
ತನ್ನ ಗುಂಡಿ ತಾನೇ ತೋಡಿದಂತೆ!
*೬
ಗುಬ್ಬಿಯ ಮೇಲೆ
ಬ್ರಹ್ಮಾಸ್ತ್ರ ಪ್ರಯೋಗ
ಸಿಕ್ಕಿ ಬಿದ್ದು ನರಳಾಟ
ರತ್ನಾ.....
ಸ್ವಂತ ಬುದ್ಧಿ ಮಸಿ ನುಂಗಿತೇ?
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
