ಅಬ್ಬಾ ! ಈಗತಾನೇ ಮುಂಬೈ, ಆತಂಕವಾದಿಗಳ ವಜ್ರಮುಷ್ಟಿಯಿಂದ ಪಾರಾಗಿದೆ- ಪೋಲೀಸ್ ಕಮೀಶನರ್, ಮುಂಬೈ

ಅಬ್ಬಾ ! ಈಗತಾನೇ ಮುಂಬೈ, ಆತಂಕವಾದಿಗಳ ವಜ್ರಮುಷ್ಟಿಯಿಂದ ಪಾರಾಗಿದೆ- ಪೋಲೀಸ್ ಕಮೀಶನರ್, ಮುಂಬೈ

ಬರಹ

೨೯, ಶನಿವಾರ, ನವೆಂಬರ್, ೨೦೦೮. ಮುಂಬೈ :

೫೯ ಗಂಟೆಗಳ ಸತತ ಸಾವು-ಉಳಿವುಗಳ ಸಂದಿಘ್ದ ಹೋರಾಟದಲ್ಲಿ ಎನ್. ಎಸ್. ಜಿ ಪಡೆಯವರು, ಕೊನೆಗೂ ತಮ್ಮ ಕಾರ್ಯದಲ್ಲಿ ಸಫಲತೆಯನ್ನು ಪಡೆದರು. ತಾಜ್ಮಹಲ್ ಹೋಟೆಲ್ ನ ಕಾರ್ಯಾಚರಣೆ ರಾತ್ರಿಯೆಲ್ಲಾ ನಡೆಯಿತು. ಬೆಳಿಗ್ಯೆ, ೮-೪೬ ಕ್ಕೆ ಮುಂಬೈನ ಪೋಲೀಸ್ ಕಮೀಶನರ್, ಹಸನ್ ಗಫೂರ್ ಹೇಳಿಕೆಯ ಪ್ರಕಾರ, ಉಗ್ರರ ನಡುವಿನ ಚಕ-ಮಕಿ ಹೋರಾಟದಲ್ಲಿ ನಮ್ಮ ಸೇನಾಪಡೆಯವರು, ಕಟ್ಟಕಡೆಯ ೨ ಜನ ಆತಂಕಿಗಳನ್ನು ಮುಗಿಸಿ, ಈ ಹೊಲಸು, ಅಮಾನುಷ-ಅಭಿಯಾನಕ್ಕೆ ಕೊನೆ-ಹಾಡು ಹಾಡಿದರು ! ಸುಮಾರು ೧೦-೧೬ ಜನ ಆತಾಂಕವಾದಿಗಳು ೫೯ ಗಂಟೆಗಳಕಾಲ ನೂರಾರು ಸೈನಿಕಪಡೆಯವರಿಗೆ ಸವಾಲಾಗಿದ್ದು, ನೂರಾರು ಅಮಾಯಕ ವ್ಯಕ್ತಿಗಳಮರಣಕ್ಕೆ ಕಾರಣರಾಗಿದ್ದರೆ.

ಬುಧವಾರ ರಾತ್ರಿ ಉಗ್ರರೊಂದಿಗೆ ನಡೆಸಿದ ಗುಂಡಿನ ಕಾಳಗದಲ್ಲಿ, ೩ ಮಂದಿ ಐಪಿಎಸ್ ಅಧಿಕಾರಿಗಳು ಸೇರಿದಂತೆ ಒಟ್ಟು ೧೬ ಮಂದಿ ಪೊಲೀಸರು ಹುತಾತ್ಮರಾಗಿದ್ದಾರೆ. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ(ಎ. ಟಿ.ಎಸ್) ಮಾಲೆಗಾಂವ್ ಸ್ಫೋಟ ಪ್ರಕರಣವನ್ನು ಬಯಗೆಳೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದ, ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಹೆಚ್ಚುವರಿ ಕಮೀಷನರ್ ಅಶೋಕ್ ಮಾರುತಿರಾವ್ ಕಾಮ್ಟೆ, ಹಾಗೂ ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದೇ ಹೆಸರಾಗಿದ್ದ ವಿಜಯ್ ಸಲಸ್ಕರ್, ವೀರ ಮರಣ ಹೊಂದಿದ ಧೀರ ಯೋಧರು !

ಕಾಲಕಾಲಕ್ಕೆ ಮುಂಬೈ ಇಂತಹ ಅಮಾನುಷ ಕೃತ್ಯಗಳಿಗೆ ಬಲಿಪಶುವಾಗಿ ಸಂಕಟಪಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಮುಂಬೈನ ಇತಿಹಾಸದಲ್ಲಿ ಅಮರರಾಗಿ ಉಳಿಯುವ ಈ ಅಧಿಕಾರಿಗಳು, ನಮ್ಮೆಲ್ಲ ಭಾರತೀಯರ ಹೃದಯದಲ್ಲೂ ಅಮರರಾಗಿ ಉಳಿಯುತ್ತಾರೆ. ಇಂದು ಬೆಳಗಿನ ಜಾವ, ೩. ೩೦ ರ ಸಮಯ. ಇಂಟರ್ನೆಟ್ ನಲ್ಲಿ ಒದಗಿಸಿರುವ ವರದಿಯಂತೆ, ಒಟ್ಟಾರೆ, ೧೧೯ ಜನ ಹಾಸ್ಟೇಜರು ಅಸು ನೀಗಿದ್ದಾರೆ. ಅವರಲ್ಲಿ ಅಮೆರಿಕನ್, ಆಸ್ಟ್ರೇಲಿಯನ್, ಬ್ರಿಟಿಷ್, ಹಾಗೂ ಜಪಾನ್ ದೇಶಗಳ ನಾಗರಿಕರು, ಸೇರಿದ್ದಾರೆ. ನಮ್ಮ ಭಾರತದನಾಗರಿಕರೆ ಹೆಚ್ಚು. ತಾಜ್ಮಹಲ್ ಹೋಟೆಲ್ ನ ಬದಿಯಲ್ಲಿರುವ, ನಾರಿಮನ್ ಕಟ್ಟಡದಲ್ಲಿ ಒಂದು ಸ್ಫೋಟವಾಗಿತ್ತೆಂದು ತಾಜಾವರದಿಗಳು ತಿಳಿಸುತ್ತವೆ. ಒಟ್ಟಿನಲ್ಲಿ ಎಲ್ಲವೂ ಇನ್ನೂ ತಹಬಂದಿಗೆ ಬಂದಿಲ್ಲ. ಪಾಕೀಸ್ತಾನ ಬೆಣ್ಣೆಯ ಮಾತಾಡಿದರೂ, ಒಳೊಳಗೆ, ಈಗಂತೂ ಎಲ್ಲರಿಗೂ ಕಾಣಿಸುವಂತೆ, ತಮ್ಮ ದುಷ್ಕರ್ಮಿಗಳಿಂದ ಇಂತಹ ಹೀನ ಕಾರ್ಯಗಳನ್ನು ಮಾಡಿಸುತ್ತಿದ್ದಾರೆ. ನಮ್ಮ ಸಂಕಟಗಳಿಗೆಲ್ಲಾ ಹೆಚ್ಚು ಕಡಿಮೆ ಅವರೇ ಕಾರಣಕರ್ತರೇನೋ ಅನ್ನಿಸುತ್ತದೆ.

ಇಷ್ಟು ದೀರ್ಘಕಾಲಾವಕಾಶವನ್ನು ತೆಗೆದುಕೊಂಡು, ಮುಂಬೈನ ನಾಗರೀಕರನ್ನು ಗೋಳುಹೊಯ್ದುಕೊಂಡ ಇದುವರೆಗಿನ ಕಾರ್ಯಾಚರಣೆಗಳಲ್ಲಿ ಇದೇ ಮುಖ್ಯವಾದದ್ದು. ಶುಕ್ರವಾರ ಮಧ್ಯರಾತ್ರಿಯ ಹೊತ್ತಿಗೆ ಕಮ್ಯಾಂಡೋಗಳು, ನಾರಿಮನ್ ಹೌಸ್, ಹಾಗೂ ಒಬರಾಯ್ ಹೋಟೆಲ್ ಗಳಲ್ಲಿದ್ದ ಟೆರರಿಸ್ಟ್ ಗಳನ್ನು ಕೊಂದು ಆ ಸ್ಥಳಗಳನ್ನು ತಮ್ಮವಶಕ್ಕೆ ತೆಗೆದುಕೊಂಡರು. ಆದರೆ ಶುಕ್ರವಾರದ ರಾತ್ರಿಯೆಲ್ಲಾ, ತಾಜ್ಮಹಲ್ ಹೆರಿಟೇಜ್ ಕಟ್ಟಡದಲ್ಲಿ ಎರಡನೆಯ ಮಹಡಿಯಲ್ಲಿ ಸ್ಪೋಟದ ಶಬ್ದ ಬರುತ್ತಲೇ ಇತ್ತು. ಈ ದಿನದ (೨೯ ರ ಶನಿವಾರ) ಬೆಳಗಿನ ಜಾವದ ಸಮಯದಲ್ಲೂ, ಕಮ್ಯಾಂಡೋ ಹಾಗೂ ಆತಂಕವಾದಿಗಳ ಮಧ್ಯೆ, ಮುಖಾಮುಖಿ ಹೊಡೆದಾಟವಿತ್ತೆಂದು ರೆಡಿಫ್ ಮೇಲ್ ವರದಿಗಳು ತಿಳಿಸುತ್ತವೆ. ಒಟ್ಟು ಮರಣಹೊಂದಿದವರ ಸಂಖ್ಯೆ ೧೫೦ ಕ್ಕೂ ಮೀರಿದೆಯೆಂದು ವರದಿಗಳು ತಿಳಿಸುತ್ತವೆ. ಗಾಯಗೊಂಡವರ ಸಂಖ್ಯೆ ನೂರಾರು.

-ಚಿತ್ರ ಕೃಪೆ : ಸಿ. ಎನ್. ಬಿ. ಸಿ.