ಅಬ್ಬೆಯ ನೋಡಿದಿರಾ?

ಅಬ್ಬೆಯ ನೋಡಿದಿರಾ?

ಕವನ

ಅಬ್ಬೆಯ ನೋಡಿದಿರಾ ?

ಎನ್ನಬ್ಬೆಯ ನೋಡಿದಿರಾ ? || ಪ||

 

ಕುಟು ಕುಟು ಹೇಳ್ಯೊಂಡು

ಊರುಗೋಲು ಕುಟ್ಯೊಂಡು

ಮಕ್ಕೊಗೆ ಬುದ್ದಿವಾದ ಹೇಳುವ

ಎನ್ನ ಅಬ್ಬೆಯ ನೋಡಿದಿರಾ ? || ೧||

 

ಶಿವಧ್ಯಾನ ಮಾಡ್ಯೊಂಡು

ಗಣಪತಿಯ ಬೇಡ್ಯೊಂಡು

ಮಕ್ಕಳ ಹರಸ್ಯೊಂಡು ಇಪ್ಪ

ಎನ್ನ ಅಬ್ಬೆಯ ನೋಡಿದಿರಾ ?||೩||

 

ಆಶು ಕವನ ಹಾಡ್ಯೊಂಡು

ಯಕ್ಷ ಪದವ ಹೇಳ್ಯೊಂಡು

ಸವಿ ಮಾತ ಕಲಿಸ್ಯೊಂಡು ಇಪ್ಪ

ಎನ್ನ ಅಬ್ಬೆಯ ನೋಡಿದಿರಾ ?||೩||

 

ತಾಳ್ಮೆಲಿ ಇದ್ದೊಂಡು

ಜೀವನ ಸಾಗಿಸ್ಯೊಂಡು

ಇಹಲೋಕ ತ್ಯಜಿಸಿ ಇಪ್ಪ 

ಎನ್ನ ಅಬ್ಬೆಯ ನೋಡಿದಿರಾ ?||೪||

-ಹಾ ಮ ಸತೀಶ

 

ಚಿತ್ರ್