ಅಭಯಾರಣ್ಯಗಳ ಉಳಿವಿಗೆ ಕ್ರಮಗಳೇನು ?
ಕರ್ನಾಟಕದಲ್ಲಿ ಸುಂದರ ಕಾನನಗಳು ಇವೆ.ಇದರಲ್ಲಿ ರಾಷ್ಟ್ರೀಯ ಉದ್ಯಾನವನ,ಅಭಯಾರಣ್ಯ,ರಕ್ಷಿತಾರಣ್ಯ ಹಾಗೂ ಪಕ್ಷಿಧಾಮಗಳೆಲ್ಲವೂ ಇವೆ.ನಮ್ಮ ಕರ್ನಾಟಕದಲ್ಲೇ ೫ ರಾಷ್ಟ್ರೀಯ ಉದ್ಯಾನವನಗಳು,೧೮ ಅಭಯಾರಣ್ಯಗಳು ಕಂಡು ಬರುತ್ತವೆ.
ಇದಲ್ಲದೆ ಪಕ್ಷಿಧಾಮಗಳು ,ಮೃಗಾಲಯಗಳೂ ಕೂಡ ಇವೆ.ಪಶ್ಚಿಮ ಘಟ್ಟಗಳ ಶ್ರೇಣಿಗಳಲ್ಲಿ ಕರ್ನಾಟಕದ ಎಲ್ಲ ಅರಣ್ಯ ಪ್ರದೇಶಗಳು ಹೆಚ್ಚಾಗಿ ಕಂಡು ಬರುತ್ತದೆ.ನಿತ್ಯ ಹರಿದ್ವರ್ಣ ಕಾಡುಗಳು ಎಲ್ಲ ವನ್ಯ ಮೃಗಗಳ ವಾಸಸ್ಥಾನ.
ಹಾಗಾದರೆ ಈ ರಾಷ್ಟ್ರೀಯ ಉದ್ಯಾನವನ (National park ) ಮತ್ತು (Wildlife sanctuaries) ಅಭಯಾರಣ್ಯಗಳ ವ್ಯತ್ಯಾಸಗಳೇನು ?
IUCN (International Union for the Conservation of Nature and Natural Resources) ಎಂಬ ಘಟಕ ಪ್ರಪಂಚದ, ರಾಷ್ಟ್ರೀಯ ಉದ್ಯಾನವನಗಳನ್ನು ಆಯಾ ದೇಶದ ಅರಣ್ಯ ಪ್ರದೇಶಗಳನ್ನು ಪರಿಶೀಲನೆ ಮಾಡಿ ಆಯಾ ದೇಶದ ಸರಕಾರಕ್ಕೆ ಸೂಚಿಸುತ್ತದೆ.ಇದರ ಸಂಪೂರ್ಣ ನಿರ್ವಹಣೆ ಸರಕಾದ ಮೇಲಿರುತ್ತದೆ.
ಅದೇ ಅಭಯಾರಣ್ಯಗಳು ದೇಶದ ಪ್ರತಿಷ್ಟಿತ ಅರಣ್ಯ ಸಂಪನ್ಮೂಲಗಳಿರುವ ಜಾಗಗಳು.
ಯಾವುದೇ ಜನಜೀವನದಿಂದ ಹಾಳಾಗದ ಪ್ರದೇಶಗಳು ರಾಷ್ಟ್ರೀಯ ಉದ್ಯಾನಗಳೆಂದು ಕರೆಸಿಕೊಳ್ಳುತ್ತವೆ.ಇಲ್ಲಿ ಅಣೆಕಟ್ಟು ಗಳನ್ನಾಗಲೀ ,ಮರಮುಟ್ಟುಗಳನ್ನೂ ಸಹ ಮುಟ್ಟುವಂತಿಲ್ಲ.ನೈಜ ದಟ್ಟ ಅರಣ್ಯದ ಸಂರಕ್ಷಣೆ ಇಲ್ಲಿ ಕಾಣಬಹುದು.
ಆಂಗ್ಲರ ಆಳ್ವಿಕೆಯಲ್ಲಿ ವಸಾಹತು ಕೇಂದ್ರಗಳಿಂದ ನಮ್ಮ ನಾಡಿನ ಅನೇಕ ನಾಟಕ್ಕೆ ಬೇಕಾದ ಮರಗಳು ಅರಬ್ಬೀ ಸಮುದ್ರದ ಮುಖೇನ ಅವರ ದೇಶದ ಕಡೆಗೆ ಹೋಗಿರುವಂಥದ್ದು ಈಗ ಇತಿಹಾಸ.ಆಗಿದ್ದು ಆಗಿ ಹೋಯ್ತು ಬಿಡಿ.ಸರಕಾರ ಹಾಗೂ ಅರಣ್ಯ ಸಂರಕ್ಷಣೆಗೆ ಬೇಕಾದ ಕ್ರಮಗಳು ನಮ್ಮ ವ್ಯವಸ್ಥೆಯಲ್ಲಿದ್ದರೂ,ಎಲ್ಲಾ ವ್ಯವಸ್ಥೆಗಳು ಮಲಗಿದೆಯೋ ಎನ್ನಿಸುತ್ತದೆ.
ಇಂಥ ಪ್ರದೇಶಗಳಲ್ಲಿ ಶಿಕಾರಿ ಮಾಡುವ ಜನರೂ ಇದ್ದಾರೆ.ಹುಲಿ,ಚಿರತೆ,ಜಿಂಕೆ ಸೇರಿದಂತೆ ಎಲ್ಲಾ ವನ್ಯ ಮೃಗಗಳ ಮಾರಣ ಹೋಮ ನಡೆಸುವ ಕಾರ್ಯ ಆಫ್ಟರ್ ಆಲ್ ಕಾಂಚಾಣಕ್ಕಾಗಿ.ಈ ತರಹ ಆದರೆ ಇದರಿಂದ ಮುಂದಿನ ಪೀಳಿಗೆಯ ಮಕ್ಕಳಿಗೆ ಕಾಡಿನಲ್ಲಿ ತೋರಿಸಲು ವನ್ಯ ಪ್ರಾಣಿಗಳೇ ಕಾಣುವುದಿಲ್ಲ.
ಇದನ್ನೆಲ್ಲಾ ಸರಿ ಮಾಡೋಣ ಅಂತ ಹೋಗೋಕೆ ಹೋದರೆ ಸರಕಾರಕ್ಕೆ ದೇಶದಲ್ಲಿ ಹಾಗೂ ನಮ್ಮ ಕರ್ನಾಟಕದ ಮಲೆನಾಡಿನ ಅರಣ್ಯಗಳಲ್ಲಿ ಕಂಡು ಬರುತ್ತಿರುವ ಪೈಶಾಚಿಕ ನಕ್ಸಲಿಸಂ ಎಂಬ ಉಗ್ರರ ಉಪಟಳಗಳು.ಇದೇ ನಕ್ಷಲರ ಕಾರಣಾರ್ಥ ಬಂಗಾಳದ ಕಾನನದ ಕರಡಿಗಳನ್ನು ಬನ್ನೇರುಘಟ್ಟಕ್ಕೆ ತಂದ ನಿದರ್ಶನ ಇತ್ತಿಗೆಗಷ್ಟೇ ನಡೆದಿರುವುದು ಒಂದು ಆಘಾತಕಾರಿ ವಿಷಯ.
ಹೀಗೆಲ್ಲ ಇರಬೇಕಾದರೆ ಇದನ್ನೆಲ್ಲಾ ಹತ್ತಿಕ್ಕಲು ಭಾರತ ಸರಕಾರಕ್ಕೆ ತನ್ನ ಕಾನೂನಿನ ವ್ಯವಸ್ಥೆಗಳಲ್ಲಿ ಹಲವಾರು ಮಾರ್ಪಾಡುಗಳನ್ನು ಹಾಗೂ ಕಠಿಣ ನಿಲವುಗಳನ್ನೂ ಇನ್ನಾದರೂ ತೆಗೆದುಕೊಳ್ಳ ಬೇಕಾಗುತ್ತದೆ.ಉತ್ತಮವಾದ ಶಿಕ್ಷಣ ಕೂಡ ಬೇಕಾಗಿದೆ.ಆ ಪ್ರದೇಶದಲ್ಲಿ ವಾಸಿಸುವರಿಗೆ ಈ ಸಮಸ್ಯೆಯ ಬಗ್ಗೆ ಅರಿವು ಮೂಡಿಸುವುದು ಕೂಡ ಅಗತ್ಯವೇ ಅಲ್ಲವೇ ?ಇನ್ನೇನು ಕ್ರಮಗಳು ಕೈಗೊಳ್ಳಬಹುದು? .