ಅಭ್ಯಾಸವಿಲ್ಲದ ಕೈ-ಆಡುಗೆ ಮನೆಯಿಂದ ಕಾಗಿ೯ಲ್ ವರೆಗೆ

ಅಭ್ಯಾಸವಿಲ್ಲದ ಕೈ-ಆಡುಗೆ ಮನೆಯಿಂದ ಕಾಗಿ೯ಲ್ ವರೆಗೆ

ಬರಹ

ನಮಸ್ಕಾರ,
ನನ್ನ ಮನದಾಳದ ಮಾತುಗಳು ಶುರುವಾಗುವುದು ಅಡುಗೆ ಮನೆಯಿಂದಲೇ....ಅಡುಗೆ ಮನೆಯ ದಾರಿ ಗಂಡನ ಹೃದಯಕ್ಕೆ ರಹದಾರಿ ಎಂಬುದು ನಿಮಗೆಲ್ಲ ಗೊತ್ತಿರುವ ವಿಷಯ ಅಂತೆಯೇ ಹೆಣ್ಣಿನ ಹೃದಯಕ್ಕೆ ದಾರಿ ಚಿನ್ನದಂಗಡಿಯದೋ ಅಥವಾ ವಜ್ರದುಂಗುರವೋ ಎಂದು ನೀವು ಯೋಚಿಸುವ ಮೊದಲೇ ಹೇಳುವೆ ನನ್ನ ಹೆಂಡತಿ ಚಿನ್ನಕ್ಕೆ ಆಸೆ ಪಡುವವಳಲ್ಲ, ಕೆಲಸ software ಕಂಪೆನಿಯಲಿ ಹಾಗಾಗಿ ಅವಳಿಗೆ ಆಥಿ೯ಕಕುಸಿತದ ಬಗ್ಗೆ ಗೊತ್ತು, ಕೆಲಸ ಎಂಬುದು ನೀರ ಮೇಲಣ ಗುಳ್ಳೆ ಎಂಬುದು ಕೂಡ ಗೊತ್ತಿದೆ :-) :-). ಮದುವೆಯ ಮುಂಚಿನ ದಿನಗಳಲ್ಲಿ ನನ್ನ ಕೈ ಅಡುಗೆ ಸೇವಿಸಿದ ಅನೇಕರು ನಿನ್ನ ಹೆಂಡತಿ ಅದೃಷ್ಟವಂತೆ ಎಂದಿದ್ದರು :-). ನನ್ನ ಹಲವು ಮಿತ್ರರು ಎಮ್.ಟಿ.ಆರ್ ಅನ್ನು "ಮಾಮಾಸ್ ಟಿಫಿನ್ ರೂಮ್ " ಎಂದು ಬದಲಾಯಿಸಿದ ದಿನಗಳೂ ಇದ್ದವು(ನಮ್ಮವನೊಬ್ಬ ಬಹಳ ಲೆವೆಲ್ ಹೊಡಿತಾ ಇದ್ದ ಹಾಗಾಗಿ ಅವನು ಯಾವಾಗ ಫೋನ್ ಮಾಡಿದರೂ ನಾವು ಎಮ್.ಟಿ.ಆರ್ ನಲ್ಲಿ ಇದ್ದೇವೆ ಎಂದು ಹೊಟ್ಟೆ ಉರಿಸಲಿಕ್ಕಾಗಿ ಹುಟ್ಟಿಕೊಂಡದ್ದು :-)). ಅಂತಹ ವೈಭವದ ದಿನಗಳನ್ನು ಕಂಡಿದ್ದ ನಾನು ನನ್ನ "ಸ್ಕಿಲ್ ಸೆಟ್" ಬಗ್ಗೆ ಸ್ವಲ್ಪ ಗವ೯ ಕೂಡ ಹೊಂದಿದ್ದೆ ಅದರಲ್ಲಿ ಚಿತ್ರಾನ್ನದಿಂದ ಮೊದಲುಗೊಂಡು ಹೋಳಿಗೆ ಸಾರಿನವರೆಗೂ ಕ್ರೆಡಿಟ್ ಗಳಿದ್ದವು (ಮಧ್ಯದಲ್ಲಿ ಅನಾನಸ್ ಹುಳಿ ಮಾಡಲು ಹೋಗಿ ಅದು ಅನಾನಸ್ ಪಾಯಸ ಆಗಿತ್ತು ಅನ್ನೊದು ಬಿಟ್ಟರೆ)

ಎಂಥ ಕುದುರೆಯೇ ಆಗಲಿ ಸುಮ್ಮನೆ ಕಾಲ ಕಳೆದರೆ ಅದು "ರಾಯರ ಕುದುರೆ ಕತ್ತೆಯಾಯಿತು" ಎನ್ನುವ ಗಾದೆಯಿಂದ ತಪ್ಪಿಸಿಕೊಳ್ಳಲಾಗದು, ಮದುವೆಯ ನಂತರ ನನ್ನ ಕಥೆಯೂ ಹಾಗೆಯೇ ಆಗಿತ್ತು ನಿತ್ಯವೂ ಅಡುಗೆ ಮಾಡುವ ಹೆಂಡತಿ ನನ್ನನ್ನು "ಮುಸರೆ" ಎನ್ನುವ ಕಿತ್ತು ಹೋದ ಡಿಪಾಟ್೯ಮೆಂಟ್‍ಗೆ ಹಾಕಿದ್ದಳು ಯಾವಗಲೂ "ಮುಖ್ಯ ಭಟ್ಟನ" ಪಾತ್ರ ನಿವ೯ಹಿಸುತ್ತಿದ್ದ ನನಗೆ ಇಲ್ಲಿ ಮುಸರೆ ಕೂಡ ಚೆನ್ನಾಗಿ ತಿಕ್ಕಿಲ್ಲ ಎನ್ನುವ ಅಪರಾಧಗಳು ಎದುರಾಗಿದ್ದವು ಆದರೂ ಸಾವರಿಸಿಕೊಂಡು ನೆಡೆಸಿಕೊಂಡು ಬಂದೆ(ಈ ಸಂಸಾರವೆಂಬ ಕಂಪೆನಿಯಲ್ಲಿದ್ದರೆ ಬೇರೆ ಕಂಪೆನಿಗೆ ಹಾರುವಂತಿಲ್ಲ ಪ್ರಾಜೆಕ್ಟ್ ಬದಲಾವಣೆಗೆ ಕೊಡ ಬಹಳ ದಿನ ಕಾಯ ಬೇಕಾಗಿ ಬರುತ್ತದೆ :-( )

ಕಾಲ ಚಕ್ರ ಉರುಳಿತು ಆರಾಮವಾಗಿ ೬ ಗಂಟೆಗೆ ಮನೆಗೆ ಬರುತ್ತಿದ್ದ ನನ್ನವಳು ೮:೩೦ ಆದರೂ ಮನೆ ಸೇರುವುದಿಲ್ಲ ನಾನು ನನ್ನ ಹಳೆಯ ವೈಭವಕ್ಕೆ ಮರಳಲು ತಯಾರಾದೆ ಇಂದು ನಾನು ಏನು ಅಂತ ತೋರಿಸ್ತೀನಿ ಅಂದುಕೊಂಡು ಒಂದೇ ದಿನವೇ ಚಪಾತಿ, ಪಲ್ಯ, ಅನ್ನ, ಸಾರು ಮಾಡಲು ಕೈ ಹಾಕಿದೆ ಬಹಳ ಬೇಗ ಎಲ್ಲ ಮಾಡಿ ಬಿಡೋಣ ಅಂಥ ಸ್ವಲ್ಪ ಜೋರಾಗಿಯೇ ಕೆಲಸಗಳನ್ನು ಮಾಡಿದೆ.....

ಪಲ್ಯ ಬೇಯಲಿಲ್ಲ, ಸಾರಿಗೆ ಉಪ್ಪು ಹೆಚ್ಚಾಯ್ತು, ಚಪಾತಿ ಹಿಟ್ಟು ಗಟ್ಟಿಯಾಗಿ ಲಟ್ಟಿಸಲು ಬರದಂತಾಗಿತ್ತು ಇನ್ನು ಅನ್ನ ನೀರು ಹೆಚ್ಚಾಗಿ ಮುದ್ದೆಯಾಯಿತು ಒಟ್ಟಿನಲ್ಲಿ ನನ್ನ ಅಡುಗೆಗೆ ಹೆಚ್ಚೆಂದರೆ ೩೫% ಅಂಕಗಳು ಬರುವಂತಿದ್ದವು.ಇದೆಲ್ಲಾ ಆಗಿ ಸ್ವಲ್ಪ ದಿನ ಕಳೆದಿದೆ ಕೈ ಒಂದು ಹದಕ್ಕೆ ಬರುತ್ತಿದೆ....

ಹೇಳಬೇಕು ಅಂಥ ಅಂದುಕೊಂಡಿದ್ದು ಮತ್ತೇನನ್ನೋ ಮೊನ್ನೆ "ಕಾಗಿ೯ಲ್"(KARGIL - from surprise to victory) ಅನ್ನೊ ಪುಸ್ತಕ ಹಿಡುಕೊಂಡು ಕೂತಿದ್ದೆ ವಿ.ಪಿ. ಮಲಿಕ್ ಅವರದು, ೩ ತಿಂಗಳು ಅಡುಗೆ ಮಾಡದ್ದಕ್ಕೆ ನಮಗೆ ಎಷ್ಟೊಂದು ಸಮಸ್ಯೆಗಳು ಆಗುತ್ತವೆ, ಯುಧ್ಧದ ಪರಿಸ್ತಿತಿಗಳಲ್ಲಿ ನಮ್ಮ ಸೈನಿಕರು ಅಭ್ಯಾಸವಿಲ್ಲದ ಯುಧ್ಧದಲ್ಲಿ ಹೊಡೆದಾಡಿ ನಮ್ಮೆಲ್ಲರನ್ನು ಆರಾಮಾಗಿ ಇಟ್ಟಿದಾರಲ್ಲ ಅಂಥ ಹೆಮ್ಮೆ ಅನ್ನಿಸ್ತು....ಯುದ್ದಕ್ಕೆ ಎಂದು ಎಷ್ಟು ಪೂವ೯ ತಯಾರಿ ನೆಡೆದರೂ ಅದು ಯುದ್ದವಾಗೊಲ್ಲ, ಶತ್ರು ಎದೆ ಮೇಲೆ ಗುಂಡಿಡುವ ತಾಕತ್ತು ಅದು ಯುಧ್ಧ ಭೂಮಿಯಲ್ಲಿ ಹುಟ್ಟಬೇಕಾದದ್ದು ಅದನ್ನು ಕಟ್ಟಿ ಕೊಡಲು ಆಗುವುದಿಲ್ಲ, ಮನಮೋಹಕವಾಗಿ ಕಾಣುವ ಹಿಮಾಲಯ ಪವ೯ತ ಸರಣಿ ಮೇಲೆ ಕುಳಿತ ಶತ್ರುವಿನಿಂದ ಯಮಕೂಪವಾಗಿ ಬದಲಾಗಿದ್ದು, ಪ್ರತಿ ಪವ೯ತದ ಪ್ರತಿ ತಿರುವು ಪ್ರತಿ ಕಂದಕವನ್ನು ಹತ್ತಿ ಕುಳಿತ ಶತ್ರು ಮತ್ತು ಅಭ್ಯಾಸವಿಲ್ಲದ ಬಂದೂಕುಗಳು...........
"ವಿಜಯ" ನಮ್ಮದೇ ಆದರೂ ಎಂಥ ನೋವಿನ ಚೀತ್ಕಾರಗಳು ಕೇಳಿರಬೇಡ?