ಅಮರತ್ವ

ಅಮರತ್ವ

ಬೆಳೆದ ಕನಸುಗಳು ಮರಿ ಹಾಕಿ
ಆ ಮರಿಗಳನ್ನು ಪೋಷಿಸುತಾ,
ಮುಖ್ಯ ಕನಸೇ ಅಂತರ್ಗತವಾಗಿ
ಅಂತಹದೊಂದು ಕನಸು ಅಸ್ತಿತ್ವದಲ್ಲಿ 
ಇತ್ತೆಂಬುದನ್ನೆ ಮರೆಸುವುದೇ 
ಆಧುನಿಕತೆಯ ಹೊಸ ಹುನ್ನಾರ ಇರಬಹುದೇ ?

ಹೆತ್ತ ಮಕ್ಕಳನು 
ಸಾಕಿ, ಕಲಿಸಿ, ಅವುಗಳ ಕನಸುಗಳಿಗೆ ನೀರೆರೆದು,
ತಮ್ಮ ಕನಸುಗಳಿಗೆ ತರ್ಪಣ ಬಿಟ್ಟ 
ಅಮ್ಮಂದಿರ ಕನಸುಗಳಿಗೆಲ್ಲ ಒಂದೊಂದು
ಗಿಡ ನೆಟ್ಟಿದ್ದಿದ್ದರೆ, ಮಕ್ಕಳಿಗಿಂತ 
ಹೆಚ್ಚು ಶಾಂತಿ ನೀಡುತ್ತಿದ್ದವೇನೋ ?

Comments

Submitted by kavinagaraj Sat, 12/13/2014 - 08:19

ಚೆನ್ನಾಗಿದೆ. ಕಾಲಾಯ ತಸ್ಮೈ ನಮಃ! ಇರುವುದರಲ್ಲಿ ಸೊಗಸು ಕಂಡರೆ ದುಃಖವಿರದು!