ಅಮರನಾಗಬೇಕು...

ಅಮರನಾಗಬೇಕು...

ಕವನ

ಬುವಿಗೆ ಸಾಟಿ ಲೋಕವಿದೆಯೆ

ಹುಟ್ಟಿ ಬೆಳೆದ ತಾಣವಿದುವೆ

ನೋವು ನಲಿವು ಸಾವಿನೊಲವೆ

ಭೂಮಿ ತಾಯ ಮಡಿಲಲೆ

ಬದುಕಿ ಬಾಳಬೇಕು ನಾವು ನಮ್ಮನಮ್ಮೊಂದಿಗೆ !

 

ಹಸಿದ ಹೊಟ್ಟೆ ತಿರುಗುತಿಹುದು

ತುಂಬಿದದುವು ಮಲಗುತಿಹುದು

ಹುಸಿಯರಾಗ ಬೊಗಳುತಿಹುದು

ಕನಸಿನೊಳಗೆ ನಡೆಯುತಿಹುದು

ರಾಗ ದ್ವೇಷವೆಲ್ಲವೂ ಬಾಳ್ವೆಯೊಳಗೆ ಸಲ್ಲವು !

 

ದಿಟ್ಟತನವ ಪಡೆಯಬೇಕು

ನಿಷ್ಟೆಯಿಂದ ಸಾಗಬೇಕು

ಕಷ್ಟದಿಂದ ಬದುಕಬೇಕು

ಪ್ರಾಮಾಣಿಕತೆ ಇರಲೇಬೇಕು

ಎಲ್ಲಾ ವಿದ್ಯೆಗಳನು ಕಲಿತು ಅಮರನಾಗಬೇಕು !

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್