ಅಮರಶಿಲ್ಪಿ

ಅಮರಶಿಲ್ಪಿ

ಕವನ

ಕಲ್ಲಿನಲಿ ಕಲೆಯನರಳಿಸಿದ ಕಲಾಕೇಸರಿಯೆ

ಕೈದಳನಾಡ ಅಮರಶಿಲ್ಪಿ ಜಕಣಾಚಾರಿಯೇ!

 

ಅದ್ಭುತ ಸೃಷ್ಟಿಕರ್ತ ಅಭಿನವ ವಿಶ್ವಕರ್ಮನೇ

ಶಿಲ್ಪಕಲೆಯ ಗೌರೀಶಂಕರ ಶಿಖರ ಶ್ರೇಷ್ಠನೇ

ಕಲೆಗಾಗಿಯೇ ಚೈತ್ರಯಾತ್ರೆ ಕೈಗೊಂಡವನೇ

ಇತಿಹಾಸವ ಮರು ಸೃಷ್ಟಿಸಿದ ಕಲಾ ಬ್ರಹ್ಮನೇ!

 

ಕಲಾ ಸೃಷ್ಟಿಗಾಗಿ ಸಂಸಾರವನೇ ತ್ಯಜಿಸಿದವನೇ

ಕೈಲಿ ಸುತ್ತಿಗೆ ಉಳಿಯ ಹಿಡಿದು ಹೊರಟವನೇ

ಕಲೆಗಾಗಿಯೇ ಹುಟ್ಟಿ ಬೆಳೆದ ಕಲಾ ತಪಸ್ವಿಯೇ

ಕಲ್ಲಿನಲಿ ಕಲಾ ಕುಸುಮಗಳರಳಿಸಿದ ಚತುರನೇ!

 

ನಿನ್ನ ಪ್ರಥಮ ಕಲಾ ದೇಗುಲ ಸೋಮನಾಥಪುರ  

ಬಾಹ್ಯ ಸೌಂದರ್ಯದ ಹೊಯ್ಸಳನ ಹಳೇಬೀಡೇ

ಒಳ ಕಲೆಯ ಬೇಲೂರ  ಕುಸುರೀ ಚೆನ್ನಕೇಶವನೇ

ನಿನ್ನ ಮೀರಿಸಿದ ಮಗನ ಆ ಭವ್ಯ ಕಲಾ ಪ್ರೌಢಿಮೆ!

 

ಕಠಿಣ ಕಲ್ಲಾಯಿತೇ ನಿನ್ನ ಕೈಯಲಿ ಮೃದು ಬೆಣ್ಣೇ

ನಿನ್ನಂತ ಶಿಲ್ಪಿಯನು ನಾನು ಈ ಜಗದಲಿ ಕಾಣೇ

ಕುಸುರಿ ಶಿಲ್ಪಕಲೆಯಲಿ ನಿನ್ನ ಮೀರಿಸಿದವರುಂಟೇ

ಧನ್ಯ ಧನ್ಯ ಜಕಣಾ ನೀನೇ ಶಿಲ್ಪಕಲೆಯ ನಿಪುಣಾ!

-ಕೆ ನಟರಾಜ್, ಬೆಂಗಳೂರು

ಚಿತ್ರ್