ಅಮೃತವರ್ಷಿಣಿ
ಕವನ
ಒಂದು ಮುಸ್ಸಂಜೆಯ ಹೊತ್ತು,
ಪಟ-ಪಟನೆಂದು ಬೀಳುತ್ತಿತ್ತು ಸ್ವಾತಿ ಮಳೆ ಹನಿಯ ಮುತ್ತು.
ಕಣ್ಣೆತ್ತಿ ಬಾನ ಕಡೆ ನೋಡಿದಾಗ ಕಂಡಿತೆನಗೆ ಆ ಮೇಘಗಳೇ ಅತ್ತ ಹಾಗೆ,
ಆ ಮುತ್ತು ಹನಿಗಳ ಹಿಡಿಯಲು ಸಾಧ್ಯವಾಗದಾಯ್ತು ನನ್ನ ಈ ಕರಗಳಿಗೆ.
ಎಲ್ಲಾ ಹನಿಗಳ ಹಿಡಿವಾಸೆ ಈ ಬೊಗಸೆಯಲಿ,
ಸಣ್ಣ ಮಕ್ಕಳಂತೆ ಕುಣಿದಾಡುವ ಇಚ್ಛೆ ಮೂಡಿತು ಮನದಲಿ.
ವರುಷ ವರುಷವು ಬರುತಿಹಳು ಭುವಿಗೆ ಈ ವರ್ಷಧಾರೆ,
ಮದುವೆಯಾದ ಹೆಣ್ಮಗಳು ತವರಿಗೆ ಬಂದು ಹೋದ ಹಾಗೆ.
ಬಾಳಿನಲ್ಲಿ ಬಂದು ಹೋಗುವ ಸುಖ-ದುಃಖದಂತೆ,
ಒಮ್ಮೆ ಹನಿ ಹನಿಯಾಗಿ ಮಗದೊಮ್ಮೆ ಬಿರುಸಾಗಿ ಬರುವಳು ಈಕೆ "ಮೇಘಮಂದಾರದಂತೆ"
ಧರೆಗೆ ತಂಪನೀಯುತಾ, ಮನಕೆ ಮುದವ ನೀಡುತಾ, ಎಲ್ಲಾ ನದಿಗಳ ಜೀವಾಳಾಗಿ
ಬರುತಿರು ನೀ "ಮಂದಗಮನೆಯಾಗಿ"
ಹೊಸ ಚಿಗುರಿಗೆ, ಹೊಸ ಪೈರಿಗೆ, ಈ ಜೀವಕ್ಕೆ ಸ್ಪೂರ್ತಿಯಾಗಿ,
ಬರುತಿರು ಓ ಮಳೆಯೇ ಈ ಇಳೆಗೆ,
"ಅಮೃತವರ್ಷಿಣಿಯಾಗಿ".
Comments
ಉ: ಅಮೃತವರ್ಷಿಣಿ
In reply to ಉ: ಅಮೃತವರ್ಷಿಣಿ by Jayanth Ramachar
ಉ: ಅಮೃತವರ್ಷಿಣಿ
ಉ: ಅಮೃತವರ್ಷಿಣಿ
In reply to ಉ: ಅಮೃತವರ್ಷಿಣಿ by latha m
ಉ: ಅಮೃತವರ್ಷಿಣಿ