ಅಮೃತವಾಣಿಗಳ ಗುಚ್ಛ

ಅಮೃತವಾಣಿಗಳ ಗುಚ್ಛ

೦೧) "ರಸ್ತೆ ಮೇಲೆ ಕಲ್ಲಿನ ಹರಳುಗಳಿದ್ದರೆ ಒಳ್ಳೆಯ ಬೂಟು ಹಾಕಿಕೊಂಡು ನಡೆಯಬಹುದು..!!"

ಆದರೆ...."ಒಳ್ಳೆಯ ಬೂಟಿನೊಳಗೆ ಒಂದೇ ಒಂದು ಕಲ್ಲಿನ ಹರಳು ಇದ್ದಲ್ಲಿ ಅತ್ಯುತ್ತಮ ರಸ್ತೆಯ ಮೇಲೂ‌ ನಾಲ್ಕು ಹೆಜ್ಜೆ ನಡೆಯಲು ಸಾಧ್ಯವಿಲ್ಲ...!!" "ಹೊರಗಿನ ಸವಾಲುಗಳಿಗಿಂತಲೂ ನಾವು ಒಳಗಿನ ದುರ್ಬಲತೆಯಿಂದಲೇ ಸೋಲುವುದು ಹೆಚ್ಚು.!"

೦೨) ತುಳಿಯುವವರ ಮಧ್ಯೆ ಬೆಳೆದು ನಿಲ್ಲಬೇಕು ಅವಾಗಲೇ ವ್ಯಕ್ತಿತ್ವಕ್ಕೆ ಬೆಲೆ ಸಿಗುವುದು

೦೩) ಪ್ರಯತ್ನ ಎಂಬುದು ಬೀಜದ ಹಾಗೆ. ಬಿತ್ತುತ್ತಲೇ ಇರಿ. ಒಂದಲ್ಲ ಒಂದು ದಿನ ಮರವಾಗಿ ಫಲ ಕೊಟ್ಟೇ ಕೊಡುತ್ತದೆ. ೦೪) ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ. ಏಕೆಂದರೆ ಜೀವನ ಕಲಿಸುವುದನ್ನು ನಿಲ್ಲಿಸುವುದಿಲ್ಲ.

೦೫) ಒಂದು ಕಾಲು ಮುಂದೆ ಒಂದು ಕಾಲು ಹಿಂದೆ. ಆದರೆ ಮುಂದಿನದಕ್ಕೆ ಗರ್ವವಿಲ್ಲ, ಹಿಂದಿನ ಅದಕ್ಕೆ ಬೇಸರವಿಲ್ಲ, ಏಕೆಂದರೆ ಇದು ಕ್ಷಣಿಕ.

೦೬) ಸಮುದ್ರ ಎಂದೂ ನೀರಿಗಾಗಿ ಯೋಚಿಸುವುದಿಲ್ಲ. ತಾನಾಗೇ ನೀರು ಅಲ್ಲಿಗೆ ಹರಿದುಬರುತ್ತದೆ

ಯಶಸ್ಸು ಮತ್ತು ಕೀರ್ತಿಗಳೂ ಹಾಗೆಯೇ. ಒಮ್ಮೆ ಅದಕ್ಕೆ ಬೇಕಾದ ಯೋಗ್ಯತೆ ಗಳಿಸಿದ್ದಲ್ಲಿ ನಮ್ಮನ್ನು ಹಿಂಬಾಲಿಸಿ ಬರುತ್ತವೆ.

೦೭) ಪ್ರಭಾವ ನೋಡಿ ಹತ್ತಿರ ಬರುವುದಕ್ಕಿಂತ, ಸ್ವಭಾವ ನೋಡಿ ಬರುವವರು ನಿಜವಾದ ಹಿತೈಷಿಗಳು.

೦೮) ಕತ್ತಲೆಯಿಲ್ಲದೆ ದೀಪದ ಮಹತ್ವ ತಿಳಿಯಲಾರದು.. ದುಃಖದ ಅನುಭವವಿಲ್ಲದೆ ಸುಖದ ಮಹತ್ವ ತಿಳಿಯಲಾರದು.

೦೯) ಸೈಕಲ್ ತುಳಿದು ಕಾಲು ನೋವಾಗಿ ಬೈಕ್ ಬಂತು ಬೈಕ್ ಓಡಿಸಿ ಬೆನ್ನು ನೋವಾಗಿ ಕಾರು ಬಂತು ಕಾರು ಚಾಲನೆ ರೂಢಿಯಾಗಿ ಹೊಟ್ಟೆ ಬಂತು ಹೊಟ್ಟೆ ಇಳಿಸಲು ಜಿಮ್ ಸೇರಿ ಸೈಕಲ್ ತುಳಿವ ಕಾಲ ಮತ್ತೆ  ಬಂತು ಇದೇ - Recycling ?

೧೦) ಮೀನು ಇಡೀ ಸಮುದ್ರವನ್ನು ತನ್ನದು ಎಂದು ಭಾವಿಸಿ ಜೀವಿಸುವಂತೆ, ನೀನು ಕೂಡಾ ಇಡೀ ಜಗತ್ತನ್ನು ನಿನ್ನ ದೇಶ ಎಂದು ಭಾವಿಸಿ ಜೀವಿಸು.

೧೧) ವಿಕಾಸವೇ ಜೀವನ; ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ; ಸ್ವಾರ್ಥವೆಲ್ಲಾ ಸಂಕೋಚ; ಆದುದರಿಂದ ಪ್ರೇಮವೇ ಬದುಕಿನ ಧರ್ಮ.

೧೨) ಜೀವನದಲ್ಲಿ ಹಣದ ಕೊರತೆ ಇದ್ದರೂ ಗುಣದ ಕೊರತೆ ಇರಬಾರದು ಏಕೆಂದರೆ ಹಣವನ್ನು ಬೇರೆಯವರಿಂದ ಕೇಳಿ ಪಡೆಯಬಹುದು ಆದರೆ ಗುಣವನ್ನು ಕೇಳಿ ಪಡೆಯಲು ಸಾಧ್ಯವಿಲ್ಲ.

೧೩) ಎಲ್ಲಿಯವರೆಗೆ ನಮಗೆ ನಾವು ಪ್ರಾಮಾಣಿಕರಾಗಿರುತ್ತೇವೆಯೋ ಅಲ್ಲಿಯವರೆಗೂ ಖಂಡಿತವಾಗಿ, ನಾವು ಸಂತೋಷದಿಂದಿರುತ್ತೇವೆ....

೧೪) ನಿಮ್ಮ ಮನಸ್ಸು ಮತ್ತು ಹೃದಯ ಸರಿಯಾದ ದಿಕ್ಕಿನಲ್ಲಿದ್ದರೆ ಬದುಕು ಎತ್ತ ಹೋಗುತ್ತದೆ ಎಂದು  ಚಿಂತಿಸಬೇಕಿಲ್ಲ.

೧೫) ವಂಚಕರಿಗೆ ಕಿರೀಟವಾಗುವುಕ್ಕಿಂತ ಉತ್ತಮರಿಗೆ ಪಾದುಕೆಯಾಗುವುದು ಶ್ರೇಷ್ಠ...! ಕಾಲೆಳೆವವರ ನಾಯಕನಾಗುವುದಕ್ಕಿಂತ ಕೈಹಿಡಿವವರ ಸೇವಕನಾಗುವುದು ಉತ್ಕೃಷ್ಟ..!

೧೬) ಉತ್ತಮ ಸಮಯಕ್ಕಾಗಿ ಕಾಯುವುದಕ್ಕಿಂತ, ಸಮಯವನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳೋಣ. ಏಕೆಂದರೆ ಸಮಯ ಎಂದೂ ಭೇದ ತೋರುವುದಿಲ್ಲ.

೧೭) ಚಿಂತೆಗೂ, ಚಿತೆಗೊ ಇರುವ ವ್ಯತ್ಯಾಸ ಒಂದು "೦" ಮಾತ್ರ… ಚಿತೆ ಸತ್ತ ದೇಹವನ್ನು ಸುಡುತ್ತದೆ, ಚಿಂತೆ ಬದುಕಿರುವ ದೇಹವನ್ನೇ ಸುಡುತ್ತದೆ.!!

೧೮) ಸಹನೆ ನಿನ್ನದಾದರೆ ಸಕಲ ನಿನ್ನದೇ ವಿನಯ ನಿನ್ನದಾದರೆ ವಿಜಯ ನಿನ್ನದೇ.

೧೯) ಕತ್ತಲೆ ಆವರಿಸಿಕೊಳ್ಳದೆ ನಕ್ಷತ್ರಗಳು ಮಿನುಗುವುದಿಲ್ಲ ಹಾಗೆಯೇ ಕಷ್ಟಗಳು ಬಾರದೆ ವ್ಯಕ್ತಿಯ ಸಾಮರ್ಥ್ಯ ಅನಾವರಣಗೊಳ್ಳಲು ಸಾಧ್ಯವಿಲ್ಲ.

೨೦) ನಡೆದಷ್ಟು ದಾರಿ ಇದೆ ಪಡೆದಷ್ಟು ಭಾಗ್ಯವಿದೆ ಎಂಬುದೇ ಜಗತ್ತು ನಮಗೆ ನೀಡುವ ಸಂದೇಶವಾಗಿದೆ.

೨೧) ಬದುಕುವ ಆಸೆ ಇದ್ದರೆ ನಿನ್ನ ಶತ್ರುಗಳ ಕಣ್ಣೆದುರಲ್ಲೇ ಬದುಕು ಅವರು ನಿನ್ನ ಮುಂದೆ ಸುಳಿದಾಗಲೆಲ್ಲ ನಿನ್ನಲ್ಲಿ ಬದುಕುವ ಛಲ ಎಚ್ಚೆತ್ತುಕೊಳ್ಳುತ್ತದೆ.

೨೨) ನಿಮ್ಮ ನಗು ಜಗತ್ತನ್ನು ಬದಲಿಸಲಿ. ಆದರೆ ನಿಮ್ಮ ನಗುವನ್ನು ಬದಲಿಸಲು ಜಗತ್ತಿಗೆ ಅವಕಾಶ ಕೊಡಬೇಡಿ.

೨೩) "ಸಮಯಕ್ಕೆ ರಜೆ ಇಲ್ಲ  ಸ್ವಪ್ನಕ್ಕೆ  ಅಂತಿಮ ತಾರೀಖು ಇಲ್ಲ ಜೀವನದಲ್ಲಿ ತಾತ್ಕಾಲಿಕ ವಿರಾಮ ಕೀಲಿ ಇಲ್ಲ ...ಜೀವಿಸಿ....ಪ್ರೀತಿಸಿ... ಜೀವನದಲ್ಲಿನ ಪ್ರತೀ ಕ್ಷಣ ಅನುಭವಿಸಿ ಆನಂದಿಸಿ "

೨೪) ತಾಯಿ ಇರುವವರೆಗೂ ಹಸಿವು ಗೊತ್ತಾಗಲ್ಲ. ತಂದೆ ಇರುವವರೆಗೂ ಜವಾಬ್ದಾರಿ ಗೊತ್ತಾಗಲ್ಲ.

೨೫) ಇಲ್ಲಿ ಎಲ್ಲರೂ ಹುಟ್ಟಿದ್ದು ಅಳುವಿನಿಂದ ನಗುವಿಗಾಗಿ ಜೀವನಪರ್ಯಂತ ಶ್ರಮಪಡಲೇ ಬೇಕು.

೨೬) ನಿಮಗೆ ಶತ್ರುಗಳು ಹುಟ್ಟಬೇಕೆಂದರೆ  ನೀವು ಅನ್ಯಾಯ ಮಾಡಬೇಕೆಂದಿಲ್ಲ, ಕೆಲವೊಮ್ಮೆ ಜೀವನದಲ್ಲಿ ನೀವು ಸಾಧಿಸುವ ಯಶಸ್ಸುಗಳೇ ನಿಮಗೆ ಶತ್ರುಗಳನ್ನು ಸೃಷ್ಟಿ ಮಾಡುತ್ತವೆ.

೨೭) ಬೈಯ್ಯೋರು ಬದುಕೋಕೆ ಹೇಳಿದರು...ಹೋಗಳೋರು ಹಾಳಾಗೋಕೆ ಹೇಳಿದರು…  ಬೈಯೋರು ಬಾಗಿಲೊಳಗಿರಬೇಕು, ಹೋಗಳೋರು ಬಾಗಿಲಾಚೆ ಇರಬೇಕು.

೨೮) ಶ್ರೀಮಂತರ ಜೊತೆ ಸ್ನೇಹ ಮಾಡಿ ತಪ್ಪೇನಿಲ್ಲ, ಆದರೆ ಬಡವರ ಜೊತೆಗೆ ಪ್ರೀತಿಯಿಂದ ಮಾತನಾಡಿ ಏಕೆಂದರೆ ಸತ್ತ ಮೇಲೆ ಹೆಗಲು ಕೊಡುವವರು ಅವರೇ, ಶ್ರೀಮಂತರು ನೇರವಾಗಿ ಕಾರಿನಲ್ಲಿ ಸ್ಮಶಾನಕ್ಕೆ ಬರುತ್ತಾರೆ ಅಷ್ಟೇ"

೨೯) ದಾನ ಧರ್ಮಕ್ಕೇ ಕಣ್ಣಿಲ್ಲ ನ್ಯಾಯ ನೀತಿಗೆ ಸಾವಿಲ್ಲ..., ಜೀವ ಚಿಕ್ಕದು ಜೀವನ ದೊಡ್ಡದು..., ಸತ್ತವನಿಗೆ ಒಂದು ದಾರಿ, ಸಾಧಿಸಿದವನಿಗೆ ಸಾವಿರ ದಾರಿ.

೩೦) ಹಣತೆ ಮಣ್ಣಿನದಾಗಿರಲಿ, ಬಂಗಾರದ್ದಾಗಿರಲಿ ಅದು ಮುಖ್ಯವಲ್ಲ. ಕತ್ತಲಾದಾಗ ಅದು ಎಷ್ಟು ಬೆಳಗುತ್ತದೆ ಎಂಬುದು ಮುಖ್ಯ. ಹಾಗೆಯೇ ಗೆಳೆಯ ಬಡವನಾಗಿರಲಿ ಶ್ರೀಮಂತನಾಗಿರಲಿ ಅದು ಮುಖ್ಯವಲ್ಲ, ಕಷ್ಟದ ಸಮಯದಲ್ಲಿ ಅವರು ನಮಗೆಷ್ಟು ಜೊತೆಯಾಗುತ್ತಾರೆ ಎಂಬುದು ಮುಖ್ಯ

೩೧) ಗಡಿಯಾರವನ್ನು ನೋಡಿ ಕೆಲಸ ಮಾಡುವವರು ಕೊನೆಯವರೆಗೂ ಕಾರ್ಮಿಕರಾಗಿಯೇ ಉಳಿಯುತ್ತಾರೆ

ಗಡಿಯಾರವನ್ನು ನೋಡದೆ ದುಡಿಯುವವರು ಮಾಲಿಕರಾಗಿ ಬೆಳೆಯುತ್ತಾರೆ. ಈ ವಾಕ್ಯಗಳನ್ನು ಓದಿ - ಆನಂದಿಸೋಣ. ಅರ್ಥ ತಿಳಿಯೋಣ, ಬದುಕಿನುದ್ದಕ್ಕೂ ಅನ್ವಯಿಸುವುದನ್ನು ಅಳವಡಿಸಿಕೊಳ್ಳೋಣ..

(ಸದ್ವಿಚಾರ ಸಂಗ್ರಹ)