ಅಮೃತ ಮೂರ್ತಿ

ಅಮೃತ ಮೂರ್ತಿ

ಬರಹ

ಅಮೃತ ಮೂರ್ತಿ ನೀನಮ್ಮ,
ನಮ್ಮಯ ಕೀರ್ತಿ ನಿಂದಮ್ಮ,
ಹಸಿವಿಗೆ ಉಸಿರಿಟ್ಟ ಮಾತೇಯಮ್ಮ,
ಅಟ್ಟವಿರಲಿ ಸಮದಟ್ಟವಿರಲಿ ನೀನಮ್ಮ ಜೊತೆಯಮ್ಮ.

ಜೀವದ ವೀಣೆ ನೀನಮ್ಮ,
ತಂತಿಯ ಮೀಟಿ ನುಡಿಸಮ್ಮ,
ರಾಗಕೆ ತಾಳ ಹಾಕಮ್ಮ,
ಹಾಡುತ ನಮ್ಮನು ನಲಿಸಮ್ಮ.

ನೊಂದ ಹೃದಯಕೆ ಸ್ವಂಧಿಸುವ ನಂದಾ-ದೀಪ ನೀನಮ್ಮ,
ಕಂದ ಚೆಂದವಾಗುವ ತನಕ ಕಣ್ಣಿಗೆ ರೆಪ್ಪೆ ನೀನಮ್ಮ,
ಸಂಬಂಧದ ಸಂಕೋಲೆಯ ತೋಡಿಸಿ ನಿಂದ ಜೀವದಾರಮನೆಯ ರಾಣಿ ನೀನಮ್ಮ,
ಆನಂದದ ಮೂರ್ತಿ,
ಗಗನಕ್ಕೆಣೆ ನಿನ್ನಯ ಕೀರ್ತಿ,
ಬಾಳಿನ ಹಾರದ ಜ್ಯೋತಿ ನೀನಮ್ಮ.

ಅಂದ-ಆನಂದ ಈ ಎರಡರ ಸಂಗಮವೇ
ಅರಿಶಿನ-ಕುಂಕುಮ,
ಕಂದ-ಅನುಬಂಧದ ಮಿಲನದ ಅನುಭವವೇ
ಈ ಪವಿತ್ರ-ಸಂಗಮ,
ಇಂಥ ದಿವ್ಯ ಜ್ಯೋತಿಯ ಭವ್ಯ ದರ್ಶನಕೆ
ಮನ ಕೋರಿದೆ ಕೋಟಿ ಪ್ರಣಾಮ,
ಊರಿಗೆ ಅರಸಾದರು ಹಾರೈಸುವ ತಾಯಿಗೆ,
ನಾನೆಂದೆಂದೂ ಗುಲಾಮ....
ನಾನೆಂದೆಂದೂ ಗುಲಾಮ.....

ಸ್ನೇಹದಿಂದ
ಗಣೇಶ್ ಪುರುಷೋತ್ತಮ