ಅಮೆರಿಕದ ನಾಗರೀಕ ಸಾಮಾನ್ಯವಾಗಿ ಸಾಲದಹೊರೆಯಲ್ಲೇ ಜೀವನವೀಡಿ ದುಡಿಯಬೇಕಾದ ಪ್ರಸಂಗವಿರುತ್ತದೆ !

ಅಮೆರಿಕದ ನಾಗರೀಕ ಸಾಮಾನ್ಯವಾಗಿ ಸಾಲದಹೊರೆಯಲ್ಲೇ ಜೀವನವೀಡಿ ದುಡಿಯಬೇಕಾದ ಪ್ರಸಂಗವಿರುತ್ತದೆ !

ಬರಹ

ಮಾರ್ಕೆಟ್ ಎಕಾನಮಿ ದೇಶವಾದ ಅಮೆರಿಕದಲ್ಲಿ , ಎಲ್ಲರೂ ಒಂದಲ್ಲ ಒಂದು ಖಾಸಗೀ ಸಂಸ್ಥೆಗಳಲ್ಲಿ ಕೆಲಸಮಾಡಿದುಡಿಯುವ ವರ್ಗಕ್ಕೆ ಸೇರಿದ್ದಾರೆ. ಸರ್ಕಾರಿವಲಯದಲ್ಲೂ ನೌಕರಿ ಮಾಡುವವರೂ ಇದ್ದಾರೆ. ಅವರು ಕಡಿಮೆ. ನಮ್ಮದೇಶದ ತರಹ ಕೆಲಸದ ವೈಖರಿಯಿಲ್ಲ. ಎಲ್ಲೂ ಪೀವನ್ ಗಳಿಲ್ಲ. ಕೆಳವರ್ಗದ ನಾಲ್ಕನೇ ಶ್ರೇಣಿಯ ಕೆಲಸಗಾರರು ಇಲ್ಲ. ಬ್ಯೂರೋಕ್ರೆಸಿ, ಇಲ್ಲೂ ಇದ್ದೇ ಇದೆ. ಶಕ್ತರಾದ ರಾಜಕಾರಣಿಗಳ ವರ್ಚಸ್ಸು ಚೆನ್ನಾಗಿ ಕೆಲಸಮಾಡುತ್ತದೆ. ಇಲ್ಲಿನ ಜನ ’ ಸೆಲೆಬ್ರಿಟೀಸ್’ ಹುಚ್ಚು ಬೆಳಸಿಕೊಂಡಿದ್ದಾರೆ. ಅಧ್ಯಕ್ಷ ಕ್ಲಿಂಟನ್, ಆ ಸೆಲೆಬ್ರಿಟಿ ವರ್ಗಕ್ಕೆ ಸೇರಿದ್ದರು. ಕೊನೆಗೆ ಅವರಕಾರ್ಯ ಜನಕ್ಕೆ ಸರಿಬರದೆ ’ಇಂಪೀಚ್’ ಮಾಡಿದ ವಿಷಯ ಎಲ್ಲರಿಗೂ ತಿಳಿದಿದೆ.

ಬಡವರು ಎಂದು ಯಾರಿಗೂ ಹಣೆಪಟ್ಟಿ ಇಲ್ಲಿ ಇಲ್ಲ. ಆದರೂ ಸುಮಾರಾಗಿ ೩೭ ಮಿಲಿಯನ್ ಅಮೆರಿಕನ್ ಬಡವರಿದ್ದಾರೆ ಎಂದು ಅಂಕಿ-ಅಂಶಗಳು ತಿಳಿಸುತ್ತವೆ. ತಮಾಷೆಯೆಂದರೆ, ಆ ಬಡವರ ಬಳಿ, ಫ್ರಿಡ್ಜ್, ವಾಶಿಂಗ್ ಮೆಶಿನ್, ಓವೆನ್, ಕಾರ್, ಎ.ಸಿ, ಕಲರ್ ಟೀವಿ, ಎಲ್ಲ ಇದ್ದು ಅವರು ಹೇಗೆ ಬಡವರು ನಮಗೆ ಅರ್ಥವಾಗುವುದು ಕಠಿಣ. ವರಮಾನ ಇಷ್ಟುಡಾಲರ್ ಗಿಂತಾ ಕಡಿಮೆಯಿದ್ದರೆ ಅವರು ಸಹಜವಾಗಿ ತಮ್ಮ ಮನೆಯ ಬಿಲ್ ಗಳನ್ನು ಕೊಡಲಾರರು. ವೀಕೆಂಡ್ ಹೈಕಿಂಗ್ ಗಳಲ್ಲಿ, ಪಾರ್ಟಿಗಳಲ್ಲಿ ಭಾಗವಹಿಸಲಾರರು, ಕ್ಲಬ್-ಪಾರ್ಟಿಗಳು, ಅವರ ಭಾಗಕ್ಕೆ ದಕ್ಕುವುದಿಲ್ಲ. ಇತ್ಯಾದಿ. ಸಾಮಾನ್ಯವಾಗಿ, ಮೆಕ್ಸಿಕನ್ ಅಮೆರಿಕನ್ನರು, ಕೊರಿಯನ್ಅಮೆರಿಕನ್ನರು, ಕಪ್ಪು ಅಮೆರಿಕನ್ನರು, ಚೀನೀ ಅಮೆರಿಕನ್ನರು, ಭಾರತೀಯ ಅಮೆರಿಕನ್ನರು ಬಂಗ್ಲಾದೇಶದವರು, ಪಾಕೀಸ್ತಾನಿಗಳು, ಈ ವರ್ಗಕ್ಕೆ ಸೇರಿದವರು. ಇವರು ಕಾರ್ ಗಳನ್ನು ಇಟ್ಟುಕೊಳ್ಳಲಾರರು. ಬಸ್ ನಲ್ಲಿ, ರೈಲಿನಲ್ಲಿ ಪ್ರಯಾಣಮಾಡುತ್ತಾರೆ. ಇಲ್ಲವೇ ಸ್ವಲ್ಪ ಹಣ ಸಂಗ್ರಹವಾದಕೂಡಲೇ ಸೆಕೆಂಡ್ ಹ್ಯಾಂಡ್ ಕಾರನ್ನು ಕೊಳ್ಳುತ್ತಾರೆ.

ಹಾಗೆನೋಡಿದರೆ, ಕಾರ್ ಕೊಳ್ಳುವುದು ತೀರಾ ಸುಲಭ ಇಲ್ಲಿ. ಕ್ರೆಡಿಟ್ ಮೇಲೆ ಏನುಬೇಕಾದರೂ ದೊರೆಯುತ್ತದೆ. ಹಾಗಾಗಿ, ಒಬ್ಬ ಸಾಧಾರಣ ಅಮೆರಿಕನ್ ನಾಗರೀಕ, ತನ್ನ ಜೀವನ ರ್ಯಂತ ತನ್ನ ಪೂರ್ಣ- ವೇತನ ಪಡೆಯುವುದೇ ಇಲ್ಲ. ಯಾವಾಗಲೂ ಒಂದಲ್ಲ ಒಂದು ಬಿಲ್ ನ್ನು ಚುಕ್ತಾಯಮಾಡುತ್ತಲೇ ಇರಬೇಕಾಗುತ್ತದೆ. ಅದಕ್ಕಾಗಿ ಹಗಲಿರುಳೂ ಅವರು ಕಷ್ಟಪಟ್ಟು ದುಡಿಯುತ್ತಲೇ ಇರುತ್ತಾರೆ. ಜೀವನ ನಿರ್ವಹಣೆಗೆ ಎಲ್ಲರೂ ಎಲ್ಲಾ ದೇಶಗಳಲ್ಲೂ ದುಡಿಯುತ್ತಿದ್ದಾರೆ., ನಿಜ. ಆದರೆ, ಮಾರುಕಟ್ಟೆ ಎಕಾನಮಿಯ ದೇಶವಾದ ಅಮೆರಿಕದಲ್ಲಿ, ಅಮೆರಿಕನ್ನರು ತಮ್ಮ ವರಮಾನಕ್ಕಿಂತ ಹಲವುಪಾಲು ಹೆಚ್ಚು ಸಾಲಮಾಡಿಕೊಂಡು ಬದುಕುತ್ತಿದ್ದಾರೆ, ಎನ್ನುವ ಮಾತನ್ನು ಅನೇಕರು ಒಪ್ಪಿಕೊಂಡಿದ್ದಾರೆ.

ಭಾರತೀಯ, ಇಂಜಿನಿಯರ್ ಗಳು, ಪ್ರೊಫೆಸರ್ ಗಳು, ವಿಜ್ಞಾನಿಗಳು, ಐಟಿ ಅಫಿಷಿಯಲ್ ಗಳು, ಸ್ವಾಮಿಗಳು, ಯೋಗ-ಟೀಚರ್ಗಳು, ಹೋಟೆಲ್-ಮೋಟೆಲ್ ಓನರ್ಗಳು ಅಮೆರಿಕನ್ನರಿಗಿಂತ ಹೆಚ್ಚು ವರಮಾನಹೊಂದಿದ್ದಾರೆ.