ಅಮೇರಿಕದಲ್ಲಿ ಗಣಪ....

ಅಮೇರಿಕದಲ್ಲಿ ಗಣಪ....

ಭಾರತದಲ್ಲಿಯು ಗಣೇಶ ಗಣೇಶನೇ, ಅಮೇರಿಕದಲ್ಲಿಯು  ಗಣೇಶನೇ. ನಮ್ಮೆಲ್ಲ ಆಚಾರ ವಿಚಾರಗಳು ಕೇವಲ ಭಾರತದಲ್ಲಿದ್ದಾಗ ಮಾತ್ರ ಸೀಮಿತವಾಗಿರದೆ, ಏಳು ಸಮುದ್ರಗಳು ದಾಟಿ, ದೊಡ್ಡಣ್ಣ ನ ದೇಶದಲ್ಲಿಯು ನಮ್ಮೆಲ್ಲ ಸಂಸ್ಕೃತಿ,ಆಚಾರ ,ವಿಚಾರಗಳಿಗೆ ಬೆಲೆ ಕೊಟ್ಟು, ಕಿಂಚಿತ್ತು ಲೋಪ ದೋಶಗಳಿಲ್ಲದೆ ನಡೆಯೋ ಸಭೇ ಸಮಾರಂಭಗಳಿಗೆ ನಾವೆಲ್ಲ ಹೆಮ್ಮೆಪಡಲೆಬೇಕು.ಭಾರತಿಯರು ಎಲ್ಲೆ ಇದ್ದರು, ಎಲ್ಲೆ ಹೋದರು ತಮ್ಮ ಸಂಸ್ಕೃತಿಯನ್ನ ಕಾಪಾಡಿಕೊಂಡು ಬರುತ್ತಾ ಇದ್ದಾರೆ ಅನ್ನೊದಕ್ಕೆ ಇಲ್ಲಿ ನಡೆಯೋ ಪ್ರತಿ ಹಬ್ಬ ಹರಿದಿನಗಳೆ ಉದಾಹರಣೆಗಳು.. 
 
ಇನ್ನೊಂದೆಡೆ ನಾವೆಲ್ಲ ಗಣೇಶ ನನ್ನ ಮನೆಗೆ ಕರೆದುಕೊಂಡು ಹೋಗಲಿ ಅಂತ ಇಲ್ಲಿನ ಇಂಡಿಯನ್ ಗ್ರಾಸರಿ ಶಾಪ್ ಗಳಲೆಲ್ಲ ಗಜಮುಖನೆ ಾರಜಿಸುತ್ತ ಇದ್ದಾನೆ. ಎಲ್ಲವು ಸಿದ್ದತೆ ಗೊಂಡಿದೆ.
 
ಭಾರತದ ನಾನ ಾಜ್ಯದ ಜನರು ನೋಡಲಿಕ್ಕೆ ಸಿಕ್ಕಿದ್ದು ಗಣೇಶನ ದಿನದಂದು , ಕ್ಯಾಲಿಫೋರ್ನಿಯದ ಸನ್ನಿವೇಲ್ ಎಂಬ ಸಿಟಿಯ
ಹಿಂದು ದೇವಸ್ಥಾನದಲ್ಲಿ ಪಂಚಮುಖಿ ಗಣೇಶನ ಭೇಟಿ, ಆ ಸುಂದರ ಅಲಂಕಾರ, ಮಹಾಪೂಜೆ , ಆರತಿ ಕಣ್ಮನ ಸೆಳೆಯುವಂತಿತ್ತು . ಎಲ್ಲ ಭಾಷದ ಜನರು ಒಂದೆಡೆಯಲ್ಲಿ ಸೇರಿ ಹಬ್ಬದ ಕಳೆ ಇನ್ನು ಹೆಚ್ಚಿದಂತಿತ್ತು. ಮಿನಿಭಾರತವನ್ನ ನೋಡಲಿಕ್ಕೆ ಇಂತಹ ಹಬ್ಬ ಹರಿದಿನ, ಸಭೆ-ಸಮಾರಂಭಗಳ ದಿನದಂದೆ ಸಾಧ್ಯ.
ಗುರುತು ಪರಿಚಯವಿಲ್ಲದಿದ್ದರು ಸಹ ಅದೇನೋ ನಮ್ಮವರು ಎನ್ನುವ ಭಾವನೆ ಮನಸ್ಸಿಗೆ ಮುದ ನೀಡುತ್ತೆ....