ಅಮ್ಮ

ಅಮ್ಮ

ಬರಹ

ಅಮ್ಮ
-----
ಮೊದಲ ಪ್ರೀತಿ ನೀಡಿದವಳಮ್ಮ
ಮೊದಲ ಮಾತು ಆಡಿದವಳಮ್ಮ
ತೊದಲು ನುಡಿಯ ಕಲಿಸಿದಳಮ್ಮ
ಮೊದಲಾ ಮುತ್ತು ಕೊಟ್ಟವಳಮ್ಮ

ಮೊದಲ ಊಟ ಉಣಿಸಿದಳಮ್ಮ
ಮೊದಲ ಆಟ ಆಡಿಸಿದಳಮ್ಮ
ಮೊದಲ ಪಾಠ ಕಲಿಸಿದಳಮ್ಮ
ಮೊದಲಾ ನೋಟಕೆ ಕಂಡವಳಮ್ಮ

ಮೊದಲ ನಡಿಗೆ ನಡೆಸಿದಳಮ್ಮ
ಮೆಚ್ಚುವ ಉಡಿಗೆ ತೊಡಿಸಿದಳಮ್ಮ
ಕಣ್ಣಿಗೆ ಕಾಡಿಗೆ ಹಚ್ಚಿದಳಮ್ಮ
ದೃಷ್ಠಿಗೆ ಬೊಟ್ಟು ಇಟ್ಟವಳಮ್ಮ

ಜುಟ್ಟಿಗೆ ಮಲ್ಲಿಗೆ ಮುಡಿಸಿದಳಮ್ಮ
ಕಾಲಿಗೆ ಗೆಜ್ಜೆ ಕಟ್ಟಿದಳಮ್ಮ
ಗೆಜ್ಜೆಗೆ ಹೆಜ್ಜೆ ಹಾಕಿಸಿದಳಮ್ಮ
ಗೆಜ್ಜೆಯ ನಾದಕೆ ತೂಗಿದಳಮ್ಮ

ಎಡವಿ ಬಿದ್ದಾಗ ಎತ್ತಿದಳಮ್ಮ
ಘಾಯಕೆ ಮುಲಾಮು ಹಚ್ಚಿದಳಮ್ಮ
ನೋವು ಅಂದಾಗ ಅತ್ತವಳಮ್ಮ
ಜ್ವರ ಬಂದಾಗ ನಿದ್ರೆ ಮರೆತವಳಮ್ಮ

ಅಂದು ಜೀವ ಪಣಕ್ಕಿಟ್ಟು ಹಡೆದಳು ನಮ್ಮಮ್ಮ
ನಮಗಾಗಿ ಬೇಕಾದ್ರೆ ಮತ್ತೆ ಪ್ರಾಣ ಕೊಡ್ತಾಳಮ್ಮ
ಜೀವಕ್ಕಿಂತ ಹೆಚ್ಚಾಗಿ ಪ್ರೀತ್ಸೊಳೊಬ್ಬಳೇ ಅಮ್ಮ
ನಾವೆಷ್ಟೇ ಬೆಳೆದರು ಮಗುವೆಂದೇ ಪೊರೆಯುವ ಅಮ್ಮ

(ರವಿಕುಮಾರ ವೈ.ಎಂ)