ಅಮ್ಮಂದಿರ ದಿನ - ಮದರ್ಸ್ ಡೇ!!!

ಅಮ್ಮಂದಿರ ದಿನ - ಮದರ್ಸ್ ಡೇ!!!

ಅಮ್ಮಂದಿರ ದಿನ - ಮದರ್ಸ್ ಡೇ!!!

ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.

ಯಾಕೋ ಕಾಣೆ ವರುಷಕ್ಕೊಂದು ದಿನ ಬರುವುದು ಈ ಅಮ್ಮಂದಿರ ದಿನ - ಮದರ್ಸ್ ಡೇ. ಇಂಥಾ ಸುದಿನಗಳಿಗೆ ಬೆಲೆ ಕಟ್ಟಲು ಸಾಧ್ಯವೇ??? ಅಮ್ಮನಿಲ್ಲದೇ ಈ ಜಗತ್ತು ಸಾಧ್ಯವಿಲ್ಲದ ಮಾತು. ನಮ್ಮನ್ನೆಲ್ಲಾ ಹುಟ್ಟಿಸಿದ್ದೇ ಈ ಅಮ್ಮ. ದಿನ ನಿತ್ಯವೂ ನೆನೆಯಬೇಕು ಒಂದು ಕ್ಷಣವಾದರೂ ಈ ಮಾತೆಯನ್ನು. ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು?? ಅನ್ನುವುದು ಅಕ್ಷರಷಃ ನೂರು ಪಟ್ಟು ಸತ್ಯ ಮತ್ತು ಅನುಭವಾಮೃತವಾಗಿದೆ ಎಲ್ಲರಿಗೂ. ಹೊತ್ತು, ಹೆತ್ತು, ಬೆಳೆಸಿ, ತಿದ್ದಿ, ತಿಳಿಸಿ, ತೇಲಿಸಿ ಮುಳುಗಿಸದೇ, ನಮ್ಮೆಲ್ಲರನ್ನೂ ಮನುಷ್ಯನನ್ನಾಗಿ ಮಾಡಿಸಿದ ಮಹಾಮಾತೆ! ನಿನಗೆ ಶರಣು!! ಯಾದೇವೀ ಸರ್ವಭೂತೇಷು "ಶಾಂತಿ" ರೂಪೇಣ ಸಂಸ್ಥಿತಾ, ನಮಸ್ತಸೈ, ನಮಸ್ತಸೈ, ನಮಸ್ತಸೈ ನಮೋ ನಮಃ!!! (ಲಲಿತಾ ಸಹಸ್ರ ನಾಮದಿಂದ)

ನನ್ನ ಅಮ್ಮನಮೇಲೆ ಬರೆದ ಈ ಒಂದು ಪದ್ಯವನ್ನು, ನನ್ನ ಅನಿಸಿಕೆಯನ್ನು "ಈ ಅಮ್ಮಂದಿರ ದಿನ" ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ......ವಿಶ್ವದ ಎಲ್ಲಾ ಅಮ್ಮಂದಿರಿಗೂ "ಅಮ್ಮಂದಿರ ದಿನದ" ಶುಭಾಶಯಗಳು!!!

 

“ಅಮ್ಮ”, ಮಹಾತ್ಯಾಗಿ ಅಮ್ಮ!

ಅಮ್ಮನ ಎಷ್ಟು ಗುಣಗಾನ ಮಾಡಿದರೂ ಅದು ಸ್ವಲ್ಪವೇ. ಅಮ್ಮನ ಆತಿಥ್ಯ ಎಲ್ಲರಿಗೂ ಒಂದಲ್ಲ ಒಂದುತರಹ ಅನುಭವ ಆಗಿರುವುದು ಶುದ್ಧ ಸತ್ಯ. ಅಮ್ಮನ ಈ ಒಲವು ಒಂದು “ಅಪೂರ್ವವಾದ ಪ್ರೀತಿ”, ಇದು ಬೇರೆ ಯಾರಿಂದಲೂ ಧಕ್ಕದು. ಈ ಒಂದು ಸಂಬಂಧದಲ್ಲಿ ಅದೆಷ್ಟು ತ್ಯಾಗಮಯವಾದ, ಎನನ್ನೂ ಅಪೇಕ್ಷಿಸದ, ಒಂದೇ ದಾರಿಯಲ್ಲಿ ಹರಿಯುವ ಈ ಪ್ರೇಮಕ್ಕೆ ಅಮ್ಮನ ಪ್ರೀತಿಯಷ್ಟೇ ಸರಿಸಾಟಿ. ಈ ಒಲವು ಆ “ಮಹಾತ್ಯಾಗಿ ಅಮ್ಮ” ನಿಂದಷ್ಟೇ ಸಾದ್ಯ. ಅನುಭವಿಸುವವರು ಕೇವಲ ಚಿರಋಣಿಗಳಷ್ಟೆ.

 

ನಾ ಹುಟ್ಟುವ ಮೊದಲೇ ಆಸೆ ಹೊತ್ತಿದ್ದೆ.

ನನ್ನ ಆ ಸಮಯ ಬಂದಾಗ ಹೆತ್ತಿದ್ದೆ.

ಮಗುವ ಆ ಮುಗ್ಧ ಮುಖವ ನೋಡಿ ಸೋತಿದ್ದೆ.

ಮುಗುಳ್ನಗೆಯ  ಮುಖದಿಂದ ಅಕ್ಕರೆಯ ಸುರಿದಿದ್ದೆ.

“ಅಮ್ಮಾ” ಎಂಬ ಕರೆಗೆ ಅರಳಿದಮುಖದಿ ಅವಸರದಿ ಓಡೋಡಿ ಬಂದೆ.

“ಅತ್ತು” ಅಬ್ಬರದ ಕರೆಗೆ ಅನುಕಂಪದಿ ಅಭಿಮಾನ ತೋರಿಸಿ ನಿಂತೆ.

“ಕಂದಾ” ಎಂಬ ಕೂಗಿಗೆ ಅನುಕರಿಸಿದ  ಕಾಲ್ಗಳ ಹೆಮ್ಮೆಯಿಂದ ನೋಡುತ್ತಾ ನಿಂತೆ.

“ಕೋಪ” ಕೆಂಡದಷ್ಟಾದರೂ, ತಂಪನು ತರಿಸಿ ನಗುತ್ತಾ ನಗಿಸಿದೆ.

ಬೆಳೆದುದ್ದಕ್ಕೂ ಮೈಮರೆತು ಕಾಪಾಡಿ ರಕ್ಿಸಿದೆ.

ಬಂಧು – ಬಾಂಧವರನು ಸ್ನೇಹದಲಿ  ಕಾಣೆಂದೆ.

ಬರೆದು – ಓದುಗಳ ಪಾಠಕೆ ನೀ ಮೊದಲ ಗುರುವಾದೆ.

ಬೇಕು – ಬೇಡಗಳ ಭೇಧಿಸಿ ಸನ್ಮಾರ್ಗವ ತೋರಿಸಿದೆ.

ಉಳ್ಳಲ್ಲಿ ಸಹಾಯವೆಸಗಿದರೆ ಒಳಿತೆಂದೆ.

ಉಪ್ಪು ತಿಂದಲ್ಲಿಗೆ  ವಂಚಕತನ ವಲ್ಲೆ ಎಂದೆ.

ಉಳಿಸಲು ಸು-ಧರ್ಮ – ಸತ್ಸಂಘಗಳ ಯತ್ನವ ಮಾಡೆಂದೆ.

ಉರಿದು ಬೀಳುವವರಿಗೂ, ಮುಪ್ಪಿದ್ದರೆ, ಕ್ಷಮಿಸೆಂದೆ.

“ಅಮ್ಮಾ” ನೀ ಮನುಕುಲದ “ಮಹಾತಾಯಿ” ಯಾದೆ.

“ಅಮ್ಮಾ” ನೀ ಮಾನವೀಯತೆಯ “ಮೊದಲ ಪ್ರತಿನಿಧಿ”ಯಾದೆ.

“ಅಮ್ಮಾ” ನೀ ಸರ್ವಜೀವಿಗಳ ಸಹೃದಯತೆಯ “ಸಾಕಾರ”ವಾದೆ.

“ಅಮ್ಮಾ” ನಾ ನಿನಗೆ ಸದಾ “ಚಿರಋಣಿ” ಯಾದೆ.

Comments