ಅಮ್ಮಜಿಖಷೆಸ್ಸ ಖನಮ ಒಜಿ

ಅಮ್ಮಜಿಖಷೆಸ್ಸ ಖನಮ ಒಜಿ

ಬರಹ

ಅಕ್ಕರೆಯ ಸ್ನೇಹಿತರೆ,
ಸುಮಾರು ದಿನಗಳ ಹಿಂದೆಯೇ ನಾನು ಮಿತಾಕ್ಷರದ ಗುಟ್ಟು ಬಯಲು ಮಾಡುತ್ತೇನೆಂದಿದ್ದೆ. ಆದರೆ ವ್ಯಕ್ತಿಗತ ಮತ್ತು ವೃತ್ತಿಪರ ಕಾರಣಗಳಿಂದ ಬರೆಯುವುದು ತಡವಾಯ್ತು. ಕಾದು ಬೇಸತ್ತ ಎಲ್ಲರ ಕ್ಷಮೆ ಕೋರಿ.........
ಮಿತಾಕ್ಷರ ಒಂದು ಕೃತಕ ಭಾಷೆಯಾದರೂ ಉಪಯುಕ್ತ ಭಾಷೆ. ಆದ್ದರಿಂದಲೇ ಹೆಚ್ಚಿನ ಜನಕ್ಕೆ ಗೊತ್ತಿಲ್ಲದಿದ್ದರೂ ಕರ್ನಾಟಕದ ಅಲ್ಲಲ್ಲಿ ಇದರ ಬಳಕೆ ಕಂಡುಬಂದಿದೆ. ಈ ಬರಹದ ಮುಖ್ಯ ಉದ್ದೇಶ ಇದರ ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದಾದರೂ ನಮ್ಮ ಕೆಲವು ಕುಟುಂಬದವರಲ್ಲದೆ ಇನ್ನೂ ಯಾರಿಗೆ ಈ ಭಾಷೆ ತಿಳಿದೆದೆಯೆನ್ನುವುದನ್ನು ಅರಿತುಕೊಳ್ಳುವ ತವಕ.
ಇರಲಿ ವಿಷಯಕ್ಕೆ ಬರೋಣ. ಇದರ ಸೂತ್ರ ಹೀಗಿದೆ. ಅಕೌ ಖಗೌ ಘನಶ್ಚೈವ, ಚಟೌ ತಪೌ ನಮೇ ಜಡೆ. ಯಶೌ ರಷೌ ಲಸಸ್ಚೈವ ಹವಾಳಾಕ್ಷಿ ಬದಾ ಯಣ.
ಮೇಲಿನ ವರ್ಣಗಳನ್ನು ಜೋಡಿಮಾಡಿರುವ ಉದ್ದೇಶ ತಿಳಿಯಿತಲ್ಲವೆ! ಅ ವರ್ಣವು ಕ ವರ್ಣವನ್ನು ಮತ್ತು ಕ ವರ್ಣವು ಅ ವರ್ಣವನ್ನೂ ಸ್ಥಾನಂತರಗೊಳಿಸುತ್ತವೆ.( ಹಾಗಾಗಿ ಕ್ರಮವಾಗಿ ಅ, ಆ, ಇ, ಈ = ಕ, ಕಾ, ಕಿ, ಕೀ.... ) ಇದೇ ಧಾಟಿಯಲ್ಲಿ ಖ=ಗ, ಚ=ಟ, ತ=ಪ, ನ=ಮ,ಜ=ಡ, ಯ=ಶ, ರ=ಷ, ಲ=ಸ, ಹ=ವ, ಳ=ಕ್ಷ, ಬ=ದ, ಯ=ಣ
(ಘ=ನ ಅನ್ನುವುದು ಸುಮ್ಮನೆ ಇದನ್ನು ಸುಲಭವಾಗಿ ಕಲಿಯುವವರನ್ನು ಹಾದಿತಪ್ಪಿಸುವ ಸಲುವಾಗಿ ಅಷ್ಟೆ!)
ಮತ್ತೆ ಇನ್ನೊಂದು ನಿಯಮವೆಂದರೆ ಯ=ಶ ಮತ್ತು ಯ=ಣ ಇರುವುದರಿಂದ ಶ=ಣ ಅನ್ನುವ ಸಮೀಕರಣ ಇಲ್ಲಿ ಅನ್ವಯವಾಗುವುದಿಲ್ಲ.
ವಿಪಶ್ಶನ= ಹಿತಯ್ಯಮ (ಹಿತಣ್ಣಮ ಅಲ್ಲ.) ಅಯ್ಯಾ= ಕಶ್ಶಾ( ಕಣ್ಣಾ ಅಲ್ಲ),
ಇದರಲ್ಲಿ ಪದಗಳ ಮೊದಲಲ್ಲಿ ಮಾತ್ರವಲ್ಲದೆ ನಡುವಿನಲ್ಲೂ ಸ್ವರವರ್ಣಗಳು ಬರುವುದು ಇಲ್ಲಿಯ ವೈಶಿಷ್ಟ್ಯ ಕೆಲವರಿಗೆ ಕಷ್ಟವೂ ಹೌದು.
ಉದಾಹರಣೆಗೆ:- ಚಿಕ್ಕಪ್ಪ ಅನ್ನುವುದನ್ನು ಟೈಪ್ ಮಾಡಿ ತೋರಿಸುವುದು ಸಾದ್ಯವಿಲ್ಲ. ಚಿ=ಟಿ, ಕ್ಕ= ಅ ಕ್ಕೆ ಅವತ್ತು( ಕೈಬರಹದಲ್ಲಿ ಬರೆಯಬಹುದು- ಮತ್ತು ಉಚ್ಚರಿಸಬಹುದು) ಪ್ಪ=ತ್ತ
ಮೇಲಿನ ನಿಯಮಗಳ ಅನ್ವಯ ಮೊದಮೊದಲು ಕಷ್ಟಸಾಧ್ಯವೆನಿಸಿದರೂ ಆಮೇಲೆ ಬಹಳ ಸುಲಭವೆನಿಸುತ್ತದೆ.
ಅಭ್ಯಾಸಕ್ಕಾಗಿ ಕೆಲವು ಉದಾಹರಣೆಗಳು:-
ಅಪ್ಪ=ಕತ್ತ, ಅತ್ತೆ=ಕಪ್ಪೆ :), ಕೋತಿ= ಓಪಿ, ಮುಂಗುಸಿ =ನುಂಖುಲಿ
ಕೆಲವು ಪದಗಳು ಪ್ರಾರಂಭದಲ್ಲಿ ಕಷ್ಟವೆನ್ನಿಸಿದರೂ ನಂತರ tonguetwisterಗಳಂತೆ ನಾಲಿಗೆಯನ್ನು ನುರಿಯುತ್ತವೆ.
ಜ್ಞ ಎಂಬ ಸಂಯುಕ್ತಾಕ್ಷರವನ್ನು ಗ್ನ ಎಂದೇ ಪರಿಗಣಿಸಲಾಗುತ್ತದೆ. ಹಾಗೆಯೇ ವಟರ್‌ಸುಳಿಯ ಬದಲು ರೇಫ (ರ-ಕಾರ)ವಾಗಿ ಪರಿವರ್ತಿಸಲಾಗಿದೆ)
ಜ್ಞಾನ = ಖ್ಮಾಮ, ಗೃಹಸ್ಥ = ಖ್ಷವಲ್ಫ.
ಅಭ್ಯಾಸಕ್ಕಾಗಿ ಇನ್ನೂ ಕೆಲವು ಉದಾಹರಣೆಗಳು
ಕಮಿಲುಪಿಬೆ ಶಾಓ ಕಿಂಬು
ಮೀಮೇಮೇ ಮಮ್ಮಹಕ್ಷೆಂಬು
ನಾಶಬಾ ಸೋಅಬಿಂಬ
ಮಮಖಾಖೇ ದಂಬಹಕ್ಷೆಂಬು
ಕಾವಾ ಕೆಂಫ ನಭುಷ ಶಾಪಮೆ
ಒಸ್ಸುವುಜುಖಿ ಕೊನ್ನೆ ಮಮ್ಮ ವಾಖೇ ಲುನ್ನಮೆ

ಲುಷಿಶುಹ ಲೋಮೆಶು ಲೂಲಿಬೆ ಮಿಮ್ಮಬೇ ತಷಿನಕ್ಷ
ಕಿಮ್ಶಾಷ ಅಮಲಿಖೋ ಮೀಮು ವೋಬಷೆ ಪಕ್ಷನಕ್ಷ
ತೂಷ್ಯಟಂಬಿಷ ಷಡಾ ವಾಇಬ ಮಿಮ್ಮಶ ನೊಖಹಮು ಅಂಜ ಳಯ
ಮಾ ಐಬಿ ಮೀಮೇ ಲೆಷೆನಮೆ
ಪದ್ದಿ ಮಮ್ಮ ಕತ್ತಿಒ ಕೊನ್ನೆ ವಾಖೇ ಲುನ್ನಮೆ.
ಇಷ್ಟು ಸಾಕೆನ್ನಿಸುತ್ತಿದೆ. ಪ್ರಯತ್ನಿಸಿ. ಸಂತೋಷವಾದರೆ ಖುಷಿಪಡಿ ಕಷ್ಟವಾದರೆ ಕೈಬಿಡಿ.