ಅಮ್ಮನ ಹಾರೈಕೆ

ಅಮ್ಮನ ಹಾರೈಕೆ

ಕವನ

ಅಂದು ಜೀವ ಜಯಿಸಿ ಸಾವ

ಗೆಲುವ ಭಾವ ಬೀರಿತು
ಒಡಲ ಕುಡಿಯ ಕೇಳಿ ದನಿಯ
ನೋವ ಮರೆತು ನಲಿಯಿತು.
 
ಮಗುವೆ ನಿನ್ನ ಮೊಗವ ನೋಡಿ
ನಲಿದೆ ನಾನು ಲಾಲಿ ಹಾಡಿ
ನಗುವಿನಲ್ಲು ಎಂತ ಮೋಡಿ
ದಣಿಯದಾದೆ ಅಪ್ಪಿ ಮುದ್ದಾಡಿ
 
ದೇವ ಕೊಟ್ಟ ವರವೊ ನೀನು
ಮಡಿಲ ತುಂಬಿದ ಸಿರಿಯು ನೀನು
ಮುದ್ದಿನ ಕೂಸು ಮರಿಯು ನೀನು
ನಿನ್ನ ಬಿಟ್ಟು ಇರೆನು ನಾನು.
 
ಎನ್ನ ಮಡಿಲ ಚೆಲುವ ಹೂವೆ
ನಗುವಾಗಲಿ ಮಾಸದ ಒಡವೆ
ವಿದ್ಯೆಗೆ ವಿನಯ ಮೆರುಗು ಮಗುವೆ
ಸುಖಮಯವಾಗಿರಲಿ ಬಾಳ್ವೆ.

ಶಾರಿಸುತೆ