ಅಮ್ಮ ಅಂದರೆ…
ಕವನ
ಅಮ್ಮ ಎಂದರೆ ಏನೊ ಹರುಷವೊ
ಅಮ್ಮ ಎಂದರೆ ಏನೊ ಸರಸವೊ
ಅಮ್ಮ ಎಂದರೆ ಬಾಳ ಜೀವವು
ಸಕಲ ಜೀವಿಯ ಧೈವ ಭಾವವು
ಅಮ್ಮ ಎಂದರೆ ರಕ್ಷಾ ಕವಚವು
ಎಲ್ಲ ಉಸಿರಿನ ವೃಕ್ಷ ಬದುಕದು
ಅಮ್ಮ ಇದ್ದರೇ ಅಂದ ಚಂದವು
ಅವಳೇ ನಮ್ಮ ಬದುಕು ಆನಂದವು
ಅಮ್ಮ ಇದ್ದರೇ ಬದುಕು ಬಾಳ್ವೆಯು
ಅವಳೇ ನಮ್ಮ ಬಾಳಿನ ತಾಳ್ಮೆಯು
ಅಮ್ಮ ಕಲಿತರೆ ಲೋಕವೇ ಕಲಿತರೆ
ಅವಳು ಮುನಿದರೆ ಜಗವೇ ಮಲಗ್ವುದು
ಅಮ್ಮ ನಲಿದರೆ ಬಾಳು ಚಂದಿರ
ಅವಳು ನೊಂದರೆ ಬದುಕು ಹಂದರ
ಅಮ್ಮ ಎಂದರೆ ಸಹನಾ ಮೂರ್ತಿಯು
ಅವಳೇ ನಿಜಕು ಮಕ್ಕಳ ಕೀರ್ತಿಯು
ಅಮ್ಮ ಅಂದರೆ ಲೋಕ ವಿಜ್ಞಾನವು
ಅವಳೇ ನಮ್ಮ ಬದುಕ ಜ್ಞಾನವು
ಅಮ್ಮ ಕಲಿಸಿದಾ ನೀತಿ ರೀತಿಯು
ದೂರ ಮಾಡ್ವುದು ಎಲ್ಲ ಭೀತಿಯ
ಅಮ್ಮ ಹೇಳಿದಾ ಸತ್ಯ ಬುದ್ದಿಯು
ನಮ್ಮ ಪಾಲಿಗೆ ಸಿದ್ದಿ ಬುದ್ದಿಯು
ಅಮ್ಮ ಎರಡಕ್ಷರಕೆ ಸಾಟಿ ಇಲ್ಲವೂ
ಅವಳಿಗಿಂತ ಬೇರೆ ದೇವರು ಇಲ್ಲವೊ
ಅಮ್ಮ ಎಂದರೆ ಮುಕ್ಕೋಟಿ ದೇವರು
ಅವಳೇ ನಮ್ಮ ಜಗದ ಸೃಷ್ಟಿಕರ್ತಳು
(ವಿಶ್ವ ಅಮ್ಮಂದಿರ ದಿನದ ಶುಭಾಶಯಗಳು)
-ಬಂದ್ರಳ್ಳಿ ಚಂದ್ರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
