ಅಮ್ಮ

ಅಮ್ಮ

ಕವನ

ನವಮಾಸ ಗರ್ಭದಲ್ಲಿ 

ನನ್ನ ಹೊತ್ತು,ನಿದ್ರೆಯಿಲ್ಲದೆ 

ಕಷ್ಟ ಅನುಭವಿಸಿದ್ದು 

ನನಗೆ ತಿಳಿಯಲೇ ಇಲ್ಲಾ..

 

ತುಂಬಾ ಬಸುರಿ ಇದ್ದಾಗಲೂ 

ಜೀವನಕ್ಕಾಗಿ ಮೀನು 

ವ್ಯಾಪಾರ ಮಾಡಿ,ಹೆರಿಗೆ 

ನೋವು ಅನುಭವಿಸಿ ನನ್ನ 

ಭೂಮಿಗೆ ತಂದದ್ದು 

ನನಗೆ ತಿಳಿಯಲೇ ಇಲ್ಲಾ..

 

ಸೀರೆಯನೇ ತೊಟ್ಟಿಲು ಮಾಡಿ 

ದಿನವೂ ಮೊಲೆಯ ಹಾಲು 

ಕುಡಿಸಿ, ಜೋಗುಳ ಹಾಡುತ 

ತೊಟ್ಟಿಲು ತೂಗಿ,ಕಣ್ಣಿಗೆ ಕಾಡಿಗೆ 

ಹಚ್ಚಿ, ಹಣೆಗೆ ಮುತ್ತಿಟ್ಟದ್ದು 

ನನಗೆ ತಿಳಿಯಲೇ ಇಲ್ಲಾ..

 

ಮನೆಯೇ ಪಾಠ ಶಾಲೆ ಮಾಡಿ,

ಅಮ್ಮನೇ ಮೊದಲ ಗುರುವಾಗಿ

ಸರಿ,ತಪ್ಪು ಹೇಳಿಕೊಟ್ಟು ನನ್ನ ಹೊಟ್ಟೆ 

ತುಂಬಿಸಿಟ್ಟು,ತಾನು ಒಂದು

ಹೊತ್ತು ಊಟ ಮಾಡಿ ಮಲಗಿದ್ದು

ನನಗೆ ತಿಳಿಯಲೇ ಇಲ್ಲಾ..

 

ಕಷ್ಟಗಳ ನಡುವೆ ಬೆಂದು 

ಮಕ್ಕಳ ಗೆಲುವಿಗೆ ಹರಕೆ ಹೊತ್ತು 

ಹುಸಿ ಕೋಪ ತೋರಿ ಪ್ರೀತಿ ಕೊಟ್ಟ 

ಜೀವನದ ಉದ್ದಕ್ಕೂ ಅಮ್ಮನ ತ್ಯಾಗವ 

ನನಗೆ ತಿಳಿಯಲೇ ಇಲ್ಲಾ.. 

ವಿಶ್ವ ಅಮ್ಮಂದಿರ ದಿನದ ಶುಭಾಶಯಗಳು

-’ಕಡಲಕವಿ’ ಶಿವಾನಂದ ಬಿ ಮೊಗೇರ, ಭಟ್ಕಳ

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್