ಅಯೋಧ್ಯೆ ತೀರ್ಪು
ಬರಹ
ನ್ಯಾಯಾಂಗ ತನ್ನ ನಂಬಿಕೆ ಉಳಿಸಿಕೊಂಡಿದೆ. ಒಣ ತರ್ಕ, ಸೃಷ್ಟ್ಯ ಸಾಕ್ಷ್ಯಾಧಾರದ ಮೇಲೆ ಮಾತ್ರಾ ಇದು ಕೆಲಸ ಮಾಡುತ್ತದೆಂಬ ಪೂರ್ವಗ್ರಹವನ್ನು ಹೋಗಲಾಡಿಸಿ, ಹೃದಯವಂತಿಕೆನ್ನೂ ಇದು ಕಾಣಿಸಿರುವುದು ಸ್ವಾಗತಾರ್ಹ.
ಈ ಎಲ್ಲಾ ಸದ್ಗುಣಗಳೂ ಎಕ್ಕುಟ್ಟಿ ಹೋಗಿರುವುದು ನಮ್ಮ ರಾಜಕಾರಣ ವ್ಯವಸ್ಥೆಯಲ್ಲಿ. ರಾಜಕಾರಣಿಗಳು ಉಚ್ಚರಿಸುವ ರಾಮ, ಬಾಬರ್, ಮಂದಿರ, ಮಸೀದಿ, ಸ್ವಾಮಿಗಳು, ಸಿದ್ಧಾಂತ ಇತ್ಯಾದಿಗಳೆಲ್ಲಾ ಬರೀ ಬೊಗಳೆ. ಇದು ಓಟ್ ಬ್ಯಾಂಕ್ ಸೃಷ್ಟಿಸಿಕೊಳ್ಳುವ ನಯವಂಚನೆ. ಫಲಾನುಭವಿಗಳಮೇಲೆ ಹೊಟ್ಟೆ ಉರಿದುಕೊಳ್ಳುವುದು ಬೇಡ. ರಾಜಕಾರಣದ ಕೃತಕ ಒಲೈಕೆಯನ್ನು ನೇರವಾಗಿ ಹೀಗಳೆಯುವುದು ನಮ್ಮ ವಿವೇಕವಾಗುತ್ತದೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ