ಅಯ್ಯಪ್ಪಸ್ವಾಮಿ ಭಕ್ತವೃಂದದ, ೨೭ ನೇ ವಾರ್ಷಿಕ ಮಹಾಪೂಜೆ, ವಿಜೃಂಭಣೆಯಿಂದ ಘಾಟ್ಕೋಪರ್ ನಲ್ಲಿ ನೆರವೇರಿತು !

ಅಯ್ಯಪ್ಪಸ್ವಾಮಿ ಭಕ್ತವೃಂದದ, ೨೭ ನೇ ವಾರ್ಷಿಕ ಮಹಾಪೂಜೆ, ವಿಜೃಂಭಣೆಯಿಂದ ಘಾಟ್ಕೋಪರ್ ನಲ್ಲಿ ನೆರವೇರಿತು !

ಬರಹ

ಅಯ್ಯಪ್ಪಸ್ವಾಮಿ ವ್ರತಧಾರಿ, ಗುರು-ಸ್ವಾಮಿ ಶ್ರೀನಿವಾಸ್, ರವರ ನೇತೃತ್ವದಲ್ಲಿ ಈ ದಿನ, ೧೬-೧೦- ೨೦೦೮, ರ ಗುರುವಾರ, ಘಾಟ್ಕೋಪರ್ (ಪ.) ದಲ್ಲಿರುವ, ’ಹಿಮಾಲಯ ಸೊಸೈಟಿಯ, "ದೇವಕೃಪ" ಕೋ. ಹೌ. ಸೊಸೈಟಿಯಲ್ಲಿ ಅಯ್ಯಪ್ಪ ಭಕ್ತವೃಂದದ, ೨೭ ನೆಯ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ, ಹಾಗೂ ಇರುಮುಡಿ ಕಟ್ಟುವಿಕೆ, ಮತ್ತು ಪಡಿಪೂಜೆಯು ವಿವಿಧ ಧಾರ್ಮಿಕ ವಿಧಿ-ವಿಧಾನಗಳಿಂದ ವಿಜೃಂಭಣೆಯಿಂದ ನೆರವೇರಿತು.

ಈ ಸಮಯದಲ್ಲಿ ಮುಂಬೈನಗರದ ಪ್ರಸಿದ್ಧ ಭಜನಾಗಾಯಕರಾದ, ’ಸುರೇಶ್ ಎಲ್. ಶೆಟ್ಟಿ,’ ಯವರಿಂದ ’ಭಕ್ತಿಲಹರಿ,’ಕಾರ್ಯಕ್ರಮದ ವ್ಯವಸ್ಥೆ ಇತ್ತು. ಮಂಗಳಾರತಿಯ ಬಳಿಕ ಶ್ರೀ ಅಯ್ಯಪ್ಪ ಸ್ವಾಮಿಯ ತೀರ್ಥ ಪ್ರಸಾದಗಳನ್ನು ವಿತರಿಸಲಾಯಿತು. ಅನ್ನಸಂತರ್ಪಣೆಯ ವ್ಯವಸ್ಥೆಯಲ್ಲಿ ಭಾಗವಹಿಸಿದನಂತರ, ಕಾರ್ಯಕ್ರಮ, ಸುಮಾರು ೭-೩೦ ರ ಹೊತ್ತಿಗೆ, ಸಂಪನ್ನವಾಯಿತು.

ತದನಂತರ, ಶಬರಿಮಲೆಗೆ ಹೊರಟುನಿಂತ ಸ್ವಾಮಿಗಳನ್ನು ಹಿರಿಯರು ಆಶೀರ್ವದಿಸಿದರು. ಕಿರಿಯರು ಸ್ವಾಮಿಗಳ ಆಶೀರ್ವಾದವನ್ನು ಪಡೆದರು.

-ಚಿತ್ರ-ವೆಂ.