ಅಯ್ಯೊ ಶ್ಯಾಮ, ಸಿಕ್ಬಿಟೃ ; ನಮ್ ಶ್ಯಾಮ. ಸಿಕ್ಬಿಟೃ ! !

ಅಯ್ಯೊ ಶ್ಯಾಮ, ಸಿಕ್ಬಿಟೃ ; ನಮ್ ಶ್ಯಾಮ. ಸಿಕ್ಬಿಟೃ ! !

ಬರಹ

ಶ್ಯಾಮ ಅಂದ್ರೆ, ಗೊತ್ತಾಗ್ಲಿಲ್ವಾ ? ಅದೇ ’ಮಾಯಾಮೃಗದ್, ಕನ್ನಡ ಸೀರಿಯಲ್ ನಲ್ಲಿನ ಪಾತ್ರಧಾರಿ ಶ್ಯಾಮಾ ? ! ಈಗಾದ್ರೂ ಜ್ಞಾಪ್ಕ ಬಂತಾ, ಇನ್ನೂ ಇಲ್ವಾ ? ಏನ್ ಚೆನ್ನಾಗ್ ಗುಂಡ್ ಗುಂಡ್ಗಾಗಿದಾರೆ ! ಅಯ್ಯೊ ಇನ್ನೂ ಚಿಕ್ಕೋರು, ಅಂತ ನಾನಂದ್ಕೊಂಡಿದ್ದು. ಆಗ್ ತಾನೇ ’ಎಸ್ಕಲೇಟರ್ ಹತ್ತಿ ಬಂದೃ. ನಾನೂ ನನ್ ಹೆಂಡ್ತಿ, ಅಲ್ಲೇ ಲಾಬಿನಲ್ಲಿ ಕಾಫೀ ಕುಡ್ದು, ಅದೂ-ಇದು ಅಂತ ಹರ್ಟೆಹೊಡೀತಿದ್ವಿ. ನಮ್ ಗೆಳೆಯ ಸುಬ್ಬೀ, ಮತ್ತೆ ಅವ್ರ್ ಹೆಂಡ್ತಿ, ’ಇರೀ ಬರ್ತೀವಿ,’ ಅಂತ್ ಹೋದೋರು, ಪತ್ತೇನೇ ಇಲ್ಲ. ಅವ್ರ್ ನೈಬರ್ ಇಲ್ ಸಿಕ್ರಂತೆ. ಮರ್ತೇ ಹೋಯ್ತು, ಸಾರಿ..ಅಂತ ಆಮೇಲ್ ಹೇಳ್ದೃ. ಅಯ್ಯೊ, ಇದೆಲ್ಲಾ ಆದದ್ ಎಲ್ಲಿ ಅಂತ ಹೇಳ್ಲೇ ಇಲ್ಲ, ಅಲ್ವೆ..ಮತ್ತೆ... ಸಾರಿ.

ಅಮೆರಿಕದ ಚಿಕಾಗೋ ನಗರದಲ್ಲಿ, ಅಕ್ಕಾ ವಿಶ್ವ-ಕನ್ನಡ ಸಮ್ಮೇಳನದ್ ಮಾತಿದು ! ನಾನಂತೂ ಅವರ್ಗೆ, ಬಿಗಿಯಾದ ಅಮೆರಿಕನ್ ’ಹಗ್,’ ಕೊಟ್ಬಿಟ್ಟೆ. ಏನ್ ನೀವಿಲ್ಲಿ, ಅಂತ, ಶ್ಯಾಮ್ ನಮ್ಮನ್ ವಿಚಾರಿಸಿದೃ. ನಮಗೂ ಮಾತೇ ಆಡಕ್ ಗೊತ್ತಾಗ್ಲಿಲ್ಲ. ಇಷ್ಟ್ ಸುಲಬ್ವಾಗಿ ಅವರ್ನ ಭೇಟಿ ಮಾಡ್ತೀವಿ ಅಂತ ಕನಸ್ನಲ್ಲೂ ಗೊತ್ತಿರ್ಲಿಲ್ಲ. ಬಹುಶಃ, ಎರಡನೇ ದಿನ, ಅದೇ, ಶನಿವಾರ ಇರ್ಬೋದೇನೋ. ಆಮೇಲ್ ಕೇಳ್ದಾಗ, ಅವರ್ ಹೆಸೃ, ವಿಕ್ರಂ ಅಂತ ಹೇಳ್ದಂಗ್ ಗ್ಯಾಪ್ಕ. ಅವೃ, ಅವರ್ ಟ್ರೂಪ್ನೋರೆಲ್ಲಾ ಸೇರಿ, "ಗೀತೋಪದೇಶದ ನೃತ್ಯರೂಪಕ," ಅದೇನ್ ಚೆನಾಗ್ ಮಾಡಿದೃ ! ನನ್ ಮಗ, ಅದರ್ ವೀಡಿಯೋನೂ ತೆಗ್ದ. ಭಾಳ ಚೆನ್ನಾಗಿತ್ತು. ಆದ್ರೆ, ಈ ಜನಗಳ್ನ ನೋಡ್ದಾಗ ಸಿಟ್ ಬರತ್ತೆ, ನೋಡಿ. ಏನಲ್ಲಿ ಗುಂಪು ? ಯಾರಾದೄ ವಿಐಪಿಗಳಾ ?

ಕನ್ನಡ ಸಿನಿ-ನಟ ಉಪೇಂದ್ರ ಬಂದೃ. ಎಲ್ಲಾ ಅವ್ರ್ ಹಿಂದೇ ಓಡೋದೃ. ಆಮೇಲೆ, ಬೆಡಗಿ, ’ತಾರಾ’ ಬಂದ್ರೆ ಮತ್ತೆಲ್ಲಾ ಅವ್ರ್ ಹಿಂದೆ. ಹಾಗಾಗಿ, ಡ್ಯಾನ್ಸ್ ಪರ್ಫಾರ್ಮೆನ್ಸ್ ನೋಡೋರೆ ಕಮ್ಮಿ. ಸಾರಿ. ನಾವೂ ಮಾಡಿದ್ ಅದೇ ಕೆಲ್ಸಾನ. ಆದ್ರೆ, ನಾವ್ ವಾಪಸ್ ಬೇಗ ಬಂದ್ಬಿಟ್ವಿ. ಉಪ್ಪಿ, ತಾರಾರವರ ಜೊತೆ ಹೋಗಿ ಫೋಟೋ ಖೀಂಚಿಸಿದ್ವಿ. ಆದ್ರೆ ವಾಪಸ್ ಬಂದು, ನಮ್ ಶ್ಯಾಮಾ ಅವ್ರ್ ಡ್ಯಾನ್ಸ್ ಅಟೆಂಡ್ ಮಾಡಿದ್ವಿ. ಭಾಳಾ ಚೆನ್ನಾಗಿತ್ರಿ.

ಇನ್ನೊಂದ್ ವಿಚಾರ ; ಗುಟ್ಟು. ಅದೇ, ಕೊನೆ ದಿನ, ’ರಮೇಶ್,’ ನಮ್ಕಣ್ಣಿಗ್ ಬೀಳೋದೆ ! ನಾವಿಳ್ಕೊಂಡಿದ್ ಹೋಟ್ಲು, ’ಎಂಬೆಸಿ,’ ನಲ್ಲಿ ಯಾರ್ಜೊತೆಗೋ ಅಡ್ಡಾಡ್ತಿದೃ. ಓಡೋಗಿ ಅವರ್ನ್ ಹಿಡ್ದು, ಅವರ್ ಜೊತೆ ಫೋಟೊ ತೆಗೆಸ್ಕೊಂಡ್ವಿ. ಈವೂರಲ್ ಸಿಕೃ. ಆದ್ರೆ ಬೆಂಗ್ಳೂರಲ್ಲಿ ಇವ್ರೆಲ್ ಸಿಕ್ತಾರೆ, ಇಷ್ಟಕ್ಕೂ ?

ಒಟ್ನಲ್ಲಿ ಇದಕ್ಕೇ ಅಂತೇನಲ್ಲ. ಅಷ್ಟ್ ಜನ ಕನ್ನಡ್ದೋರ್ ಜೊತೆ ಮಾತು-ಕತೆ, ಸ್ಪಂದನ, ಇತ್ಯಾದಿಗಳು ನಮಗೆ ಬಹಳ ಮುದನೀಡಿದವು. ರಥಯಾತ್ರೆಯದಿನ, ಎಲ್ಲರೊಡನೆ, ಭಜನೆ, ಹಾಡು, ಹೇಳುತ್ತಾ, ’ ಸ್ಟೀಫನ್ ಸೆಂಟರ್,’ ನಲ್ಲಿ ಒಟ್ಟಾಗಿ ಹೋದ ಸಮೂಹ ಪೆರೇಡ್, ನಿಜಕ್ಕೂ ಅವಿಸ್ಮರಣೀಯವಾದ ಘಟನೆ !

ನಾವ್ ಎರಡೂವರೆ ತಿಂಗ್ಳಿದೄ, ಹೆಚ್ಚು ಕಡ್ಮೆ ಎಲ್ಲಾ ಮುಖ್ಯವಾದ್ ಜಾಗಗಳ್ನ್ ನೋಡಿದ್ವಿ. ನಮಗ್ ನಿಜ್ಚಾಗ್ಲೂ ಸಂತೋಷ ಆಯ್ತ್ರಿ.

-ಚಿತ್ರ ನನ್ ಹೆಂಡ್ತಿ ತೆಗೆದದ್ದು.