ಅರಮನೆ ಮೈದಾನದಲ್ಲಿ ಪುಸ್ತಕ ಸಾಗರ
ಅರಮನೆ ಮೈದಾನದಲ್ಲಿ ಪುಸ್ತಕ ಸಾಗರ
ಈ ಸಾರಿಯ ಗ್ರಂಥ ಮೇಳದಲ್ಲಿ ನಾನು ಬೆಳಿಗ್ಗೆ ಗಂಟೆ ಹನ್ನೊಂದಕ್ಕೆ ಸರಿಯಾಗಿ ಮೈದಾನಕ್ಕೆ ಹೊರಟು ಮೊದಲೇ ನನ್ನ ಜೋಳಿಗೆ ತುಂಬಿಸಿಕೊಂಡೆ, ಎಂದಿಲ್ಲದ "ದರ ಕಡಿತ" ನನಗೆ ಮೂರ್ನಾಲ್ಕು ಅಂಗಡಿ ಮುಗಿಯುವದರೊಳಗೇ ನನ್ನ ಜೋಳಿಗೆ ತುಂಬಿಸಿತ್ತು. ನನಗೆ ನಾನೇ ಎಚ್ಚರಿಸಿಕೊಂಡರೂ ಪ್ರಯೋಜನವಾಗಲಿಲ್ಲ. ಭಾರತ ಕರ್ನಾಟ ಮಂಜರಿ ಬರೇ ನಲವತ್ತಕ್ಕೆ ಸಿಕ್ಕಿದರೆ ಕನ್ನಡ ಸಂಸ್ಕೃತ ರತ್ನ ಕೋಶ ರೂ ಹದಿನೆಂಟಕ್ಕೆ, ರಾಮಕೃಷ್ಣರ ವಚನವೇದವೂ ಡಿಸ್ಕೊಂಟ್ನಲ್ಲೇ ಸಿಕ್ಕಿತು. ಸುಮಾರು ನೂರೈವತ್ತಕ್ಕೂ ಮಳಿಗೆ ನನಗೆ ಪ್ರಾಯಶಃ ಕೊಪ್ಪರಿಗೆ ಸಿಕ್ಕಿದಷ್ಟಾಯ್ತು. ಪುಸ್ತಕಗಳಲ್ಲಂತೂ ದೊಡ್ಡವರ ಮಕ್ಕಳ ವಿಜ್ಞಾನ, ಖಗೋಳ, ಆಧ್ಯಾತ್ಮಿಕ, ವೈದ್ಯಕೀಯ, ಲೌಕಿಕ ಅಲೌಕಿಕ, ಧರ್ಮ ಎಲ್ಲ ವಿಷಯಕ್ಕೂ ಎಲ್ಲ ವಯೋಮಾನದವರಿಗೂ ಎಲ್ಲಾ ಕಾಲಕ್ಕೂ ಬೇಕೆನಿಸುವ ಬಗೆ ಬಗೆಯ ವೈವಿಧ್ಯಮಯ ಜ್ಞಾನ ಭಂಡಾರ,
ಅಡಕ ಧ್ವನಿ ಮುದ್ರಿಕೆಗಳು ತಾಳೆಗರಿ ಸ್ಯಾಂಪಲ್ಲುಗಳು, ಬಗೆಬಗೆಯ ಉಪ್ಪಿನಕಾಯಿಗಳು ತಿಂಡಿತೀರ್ಥದ ಬಗೆಬಗೆಯ ಸ್ಟಾಲುಗಳೂ ಇದ್ದು ಇಡೀ ದಿನದ ಅಲ್ಲಿಯೇ ಕಳೆಯಲು ವೈವಿದ್ಯಮಯ ಭರ್ಜರಿ ಸರಕುಗಳು.
ಮುಂದಿನ ವಾರ ಕೂಡಾ( ರವಿವಾರ ನಮ್ಮ ವಾಕ್ಪಥ ಮುಗಿದ ಕೂಡಲೇ) ಬರಬೇಕು ಎಂದುಕೊಂಡೆ).
ನಿಮಗಾಗಿ ಕೆಲವು ಚಿತ್ರಗಳು
Comments
ಉ: ಅರಮನೆ ಮೈದಾನದಲ್ಲಿ ಪುಸ್ತಕ ಸಾಗರ
In reply to ಉ: ಅರಮನೆ ಮೈದಾನದಲ್ಲಿ ಪುಸ್ತಕ ಸಾಗರ by kavinagaraj
ಉ: ಅರಮನೆ ಮೈದಾನದಲ್ಲಿ ಪುಸ್ತಕ ಸಾಗರ
ಉ: ಅರಮನೆ ಮೈದಾನದಲ್ಲಿ ಪುಸ್ತಕ ಸಾಗರ