ಅರಳಿ ಬಿಡು ಪೂರ್ತಿ
ಕವನ
ಅರ್ಧ ಬಿರಿದಿಹುದೇಕೆ
ಪೂರ್ತಿ ಅರಳದೆ ಉಳಿದೆ
ಲಜ್ಜೆ ಮುಸುಕಿತೆ ಮನದೆ ಏತಕೀ ಬಿಗುಮಾನ
ಭಯವು ಕಾಡಿತೆ ನುಡಿಯೆ
ಯಾರದಂಜಿಕೆ ನಿನಗೆ
ಬೆದರು ನೋಟದಲಿರುವೆ ಏನಿದೀ ಅನುಮಾನ
ರವಿಯು ಬಂದನು ನೋಡು
ಅತ್ತ ಮುಖವನು ಮಾಡು
ಲಜ್ಜೆ ಭಯವನು ತೊರೆದು ಅರಳಿ ಬಿಡು ನೀ ಪೂರ್ತಿ
ನಿನ್ನ ಅಂದವ ಕಂಡು
ಮನದೆ ಸಂತಸಗೊಂಡು
ತಂದುಕೊಡುವುದು ಎನಗೆ ಕವನ ಬರೆವಾ ಸ್ಪೂರ್ತಿ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್
