ಅರಸಿ ಅರಸಿ ಎನ್ನರಸಿ

ಅರಸಿ ಅರಸಿ ಎನ್ನರಸಿ

ಕವನ

ಗಂಡ :      ಅರಸಿ ಅರಸಿ ಎನ್ನರಸಿ

                ಜೊತೆಯಲಿ ಮಾತಾಡೆ ನನ್ನರಸಿ

  ಕೈಯಾ ಹಿಡ್ಕೊಂಡು ಸಂತೆಗೆ ಹೋಗೋಣ

                ಕಾಯಿಪಲ್ಲೆ ಹೂವಿನ ಸರವನ್ನು ತರೋಣ

 

ಹೆಂಡತಿ :   ಸಂತೆನೂ ಬೇಡ ಕಾಯಿಪಲ್ಲೆ ಬೇಡ

                ಸಿನಿಮಾಕ್ಕೆ ಕರ್ಕೊಂಡು ಹೋಗು

 

ಗಂಡ :      ಬಳೆ ಅಂಗ್ಡಿಗೆ ಹೋಗಿ ಬಳೆಯನ್ನ ತರೋಣ

                ಕೈ ತುಂಬ ಬಳೆಯನ್ನ ಹಾಕಿಕೊ ನನ್ನ ವೀಣ

 

ಹೆಂಡತಿ :   ಅಂಗ್ಡಿನು ಬೇಡ ಬಳೆನು ಬೇಡ

                ಮಾಲಿಗೆ ಕರ್ಕೊಂಡು ಹೋಗು

 

ಗಂಡ :      ಸ್ಕೂಟರು ಅಂಗಡಿಗೆ ನಾವಿಂದು ಹೋಗೋಣ

                ಸೈಕಲ್ಲು ಬಿಟ್ಟು ಸ್ಕೂಟರನ್ನು ತೆಗೋಳೋಣ

 

ಹೆಂಡತಿ :   ಸೈಕಲ್ಲು ಬೇಡ ಸ್ಕೂಟರೂ ಬೇಡ

                ಕಾರಿನ ಅಂಗಡಿಗೆ ಕರ್ಕೊಂಡು ಹೋಗು

 

ಗಂಡ :      ಬಿಸಿಬೇಳೆ ಬಾತು ಮಾಡ್ಕೊಂಡು ತಿನ್ನೋಣ

                ರಾಗಿಮುದ್ದೆ ಸಾರು ಉಣ್ಣುತ್ತ ಮಲಗೋಣ

 

ಹೆಂಡತಿ :    ಬಿಸಿಬೇಳೆನೂ ಬೇಡ ರಾಗಿ ಮುದ್ದೇನೂ ಬೇಡ

                 ತಾಜಮಹಲು ಹೋಟ್ಲಿಗೆ ಕರ್ಕೊಂಡು ಹೋಗು

 

ಗಂಡ  :      ಹೀಂಗಾದ್ರೆ ಹ್ಯಾಗೆ ಸಂಸಾರ ಸಾಗೋದು ?

                 ದುಡಿದದ್ದು ಎಲ್ಲಾ ಹಾಳಾಗಿ ಹೋಯ್ತಲ್ಲೆ !

                 ತಲೆಯ ಮೇಲೆ ಕೈಹೊತ್ತ ಗಂಡ

                 ಜಗಲಿಯೆ ಗತಿಯೆಂದು ಹೊರ ಮಲಗಿದ

 

-ಹಾ ಮ ಸತೀಶ

 

ಚಿತ್ರ್