ಅರಿತು ಬಾಳಿ

ಅರಿತು ಬಾಳಿ

ಕವನ

ಪ್ರೀತ್ಸೆ ಪ್ರೀತ್ಸೆ ಎನ್ನುವುದೇ ಪ್ರೇಮವಲ್ಲ

ಮಾತು ಮಾತುಗಳೇ ಸ್ನೇಹ ಸಲುಗೆಯಲ್ಲ

ಹಣ ಹಣವೆಂಬುದೇ ಬರಿಯ ಬದುಕಲ್ಲ

ಜಾತಿ ಜಾತಿಗಳ ಗೋಡೆ ಕಟ್ಟಿದರೆ ಸುಖವಿಲ್ಲ.

 

ಕಲ್ಲು ಕಲ್ಲನು ತಿಕ್ಕಿ ಬೆಂಕಿ ಜನಿಸಿದಂತೆ

ದ್ವೇಷ ದ್ವೇಷವು ಮುಸುಕಲಿ ವಿಷಕಾರುತಿದೆ

ನೊಣ ನೊಣಗಳೇ ತುಂಬಿಹ ಅತ್ತಿಯ ಹಣ್ಣಂತೆ

ಹೊರ ಹೊರಗೆ ಮಾತ್ರ ಪ್ರೇಮ ಸುಳಿದಿದೆ.

 

ಹಾಲು ಹಾಲೆಂದರೆ ನೀರು ಹಾಲಾಗದು

ಬೆಲ್ಲ ಬೆಲ್ಲವೆಂದು ಬೇವ ಜಗಿದರಾಗದು

ವಿಧಿ ವಿಧಿಯೆಂದು ಕಾಲವ ಜರಿದರಾಗದು

ಆತ್ಮ ಆತ್ಮಗಳ ಅರಿಯದೇ ಬದುಕು ಸಾಗದು.

 

ಕಾಡಿ ಕಾಡಿ ದೈವವ ಪಡೆದ ಜನುಮವಿದು

ಬೇಡಿ ಬೇಡಿ ಪಡೆದ ಮನುಜ ಕಾಯವಿದು

ಹಲವು ಹಲವು ಪುಣ್ಯಗಳ ಫಲವಂತೆ

ಹರಕೆ ಹರಕೆಯ ಬದುಕ ಹಾಳಗೆಡವದಿರಿ.

(ದ್ವಿರುಕ್ತಿ ಕವನ)

-ನಿರಂಜನ ಕೇಶವ ನಾಯಕ, ವಿಟ್ಲ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್