ಅರಿಯದಾಗಿಹೆನು ನಮ್ಮ ದೇಶದ ಸ್ಥಿತಿಗತಿ

ಅರಿಯದಾಗಿಹೆನು ನಮ್ಮ ದೇಶದ ಸ್ಥಿತಿಗತಿ

ಕವನ

ಅರಿಯದಾಗಿಹೆನು ನಮ್ಮ ದೇಶದ ಸ್ಥಿತಿಗತಿ


ಯಾರು ಕಾರಣರು ನಮ್ಮೀ ದೇಶದ ಈ ದುರ್ಗತಿಗೆ?


 


ರಾಜಕಾರಣಿಗಳು ಮಾಡುತಿಹರು ಕೋಟಿ ಕೋಟಿ ಹಣದ ಲೂಟಿ


ಜನಸಾಮಾನ್ಯನ ಮೇಲೆ ಬೀಸುತಿಹರು ತೆರಿಗೆ, ಬೆಲೆ ಏರಿಕೆಯ ಚಾಟಿ


 


ದೇಶರಕ್ಷಣೆಯಲ್ಲಿ ನಡೆಯುವುದು ಸಣ್ಣ ಪುಟ್ಟ ಲೋಪ ದೋಷ 


ಸೆರೆ ಸಿಕ್ಕ ಉಗ್ರರ ಶಿಕ್ಷಿಸುವಲ್ಲಿ ಎಣಿಸುವರು ಮೀನ - ಮೇಷ  


 


ಆಟದಲ್ಲಿ ಗೆದ್ದವರಿಗೆ ಕೋಟಿ ಹಣ, ಬಂಗಲೆ, ಕಾರು, ಸೌಲಭ್ಯಗಳು   


ದೇಶಕ್ಕಾಗಿ ಪ್ರಾಣ ಕೊಟ್ಟವರಿಗೆ ಲಕ್ಷ ಹಣ, ಸಂತಾಪ, ಮೌನಾಚರಣೆಗಳು

Comments