ಅರಿಯದೇ ನುಸುಳಿದೆ
ಕವನ
ಹೆಚ್ಚೇನೂ ಅದಕಿಲ್ಲ ಹಿಡಿಗಾತ್ರ ವಿಸ್ತಾರ
ಆದರೂ ತೋರಿಸಿತು ಅಲ್ಲೊಂದು ಚಮತ್ಕಾರ
ಅರಿವಿಗೇ ಬರದಂತೆ ಒಳನುಸುಳಿ ಬಂದಿತ್ತು
ನೆಲೆಯಾಗಿ ಹಿತವಾಗಿ ಚಿಗುರೊಡೆದು ಬೆಳೆದಿತ್ತು
ಅರಿವಿಗದು ಬಂದಾಗ ಬಲವಾಗಿ ಬೇರೂರಿ
ಚಿಗುರೊಡೆದು ಸೊಗಸಾಗಿ ಸುತ್ತೆಲ್ಲ
ಹಬ್ಬಿತ್ತು
ಕೆಲಮಾಸ ಕಳೆದಿತ್ತು ಅವಳಲ್ಲಿ ತಳವೂರಿ
ಕಿತ್ತೆಸೆವ ಮನವಿಲ್ಲ ಅವಳತ್ತ ವಾಲಿತ್ತು
ಅಂದೊಮ್ಮೆ ಸಂತೆಯಲೊ, ಸ್ನೇಹಿತರ ಮನೆಯಲ್ಲೊ
ಕಂಡದ್ದು ಎಲ್ಲೆಂದು ಸರಿಯಾದ ನೆನಪಿಲ್ಲ
ಎದೆಗೂಡಿಗಿಳಿದದ್ದು ಅದು ಯಾವ ಪರಿಯಲ್ಲೊ
ಕೈಹಿಡಿವ ಮಹದಾಸೆ ನನ್ನಲ್ಲಿ ತಂತಲ್ಲ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್