ಅರಿಯದ ದೇವರು
ಕವನ
ಪರಿಸ್ತಿತಿಯ ಚೌಕಟ್ಟಿನಲ್ಲಿ
ನೀನು ಆಡಿಸಿದಂತೆ
ಆಡುವ ಗೊಂಬೆಗಳು ನಾವು
ನಗುವದನ್ನ ಕಲಿಸಿದೆ
ಅಳುವದನ್ನ ಮರೆಸಿದೆ
ಜೀವನದ ಅರ್ಥ ನೆನಪಿಸಿದೆ
ಹೇಗೆ ಅರಿಯುವದು ನಿನ್ನ ?
ಪ್ರಪಂಚವ ಸೃಷ್ಟಿಸಿದೆ
ಮನುಕುಲವ ಬೆಳೆಸಿದೆ
ಪ್ರಕೃತಿಯ ಸೊಬಗ ಹರಿಸಿದೆ
ಹುಟ್ಟು ಸಾವುಗಳ ನೆನಪಿಸಿದೆ
ಆದರು ಕಾಣದಾದೆ ಹೇಗೆ ಕಾಣುವದು ನಿನ್ನ?
ಮುಗ್ದ ಮನಸುಗಳ ಸೃಷ್ಟಿಸಿದೆ
ಭಾವನೆಗಳ ಬಳ್ಳಿ ಬೆಳೆಸಿದೆ
ಪ್ರೀತಿಯ ಹೂವ ಅರಳಿಸಿದೆ
ಕ್ರೂರ ಮುಖಗಳ ಪರಿಚಯಿಸಿದೆ
ಹೇಗೆ ಮರೆಯುವದು ನಿನ್ನ ?