ಅರಿವಳಿಕೆ (ಅನೆಸ್ತೇಷಿಯಾ)

ಅರಿವಳಿಕೆ (ಅನೆಸ್ತೇಷಿಯಾ)

ಬರಹ

ರೋಗಿಯೊಬ್ಬನಿಗೆ ವಿಪರೀತ ಹೊಟ್ಟೆನೋವು. ಕೂಡಲೇ ಅವನನ್ನು ಆಸ್ಪತ್ರೆಗೆ ತರಲಾಯಿತು. ಪರೀಕ್ಷಿಸಿದ ಡಾಕ್ಟರರೆಂದರು - ಇದು ಅಪೆಂಡಿಸ್ಐಟಿಸ್. ಕೂಡಲೇ ಶಸ್ತ್ರಚಿಕಿತ್ಸೆ ಮಾಡಬೇಕು. ಸರಿ, ರೋಗಿಗೆ ಅರವಳಿಕೆ ನೀಡಲು ಅರವಳಿಕೆ ತಜ್ಞರು ಬಂದರು; ಆಪರೇಷನ್ ಆಯಿತು. ಹೀಗೆ ದೇಹಕ್ಕೆ ಏನಾದರೂ ತೊಂದರೆಯಾಗಿ ಆಪರೇಷನ್ ಮಾಡಬೇಕಾದಾಗ ಅರಿವಳಿಕೆ ಇರಲೇಬೇಕು.

ಅದೇ ರೀತಿ ನಮ್ಮ ಜೀವನದಲ್ಲೂ ಸಹ ನಿರಂತರ ಮಾನಸಿಕ ನೋವು, ದು:ಖ, ಸಂಕಟಗಳಿಂದ ದೂರವಾಗಲು ಭಗವಂತನು ಖಚಿಱಲ್ಲದ ಎಷ್ಟೊಂದು ಅರಿವಳಿಕೆಗಳನ್ನು ನಮ್ಮ ಅರಿವಿಲ್ಲದೆಯೇ ನಮಗೆ ನೀಡಿದ್ದಾನೆ ಎಂದರೆ ಆಶ್ಚಯಱವಾಗಬಹುದಲ್ಲವೇ? ಬೆಂಗಳೂರಿನಲ್ಲಿ ಒಮ್ಮೆ ಕುನ್ನಕುಡಿ ವ್ಐದ್ಐನಾಥನ್ ರವರ ಪಿಟೀಲು ಕಛೇರಿ ಏಪಾಱಟಾಗಿತ್ತು. ಅನಿವಾರ್ಯ ಕಾರಣಗಳಿಂದ
ಅಂದು ನಾನು ಮಧ್ಯಾಹ್ನದ ಊಟ ಮಾಡಲಾಗಿರಲಿಲ್ಲ. ಸಂಜೆ ಕಛೇರಿ ಸ್ಥಳ ತಲುಪುವಷ್ಟರಲ್ಲಿ ಸಾಕಷ್ಟು ತಡವಾಗಿದ್ದರಿಂದ ಸಂಜೆಯೂ ಏನೂ ಉಪಹಾರ ಕೂಡ ಸೇವಿಸಲಾಗಲಿಲ್ಲ. ವಿಪರೀತ ಹಸಿವಿದ್ದರೂ
ಕಛೇರಿ ತಪ್ಪಿಸಿಕೊಳ್ಳಲಾಗದೇ ಹಾಗೆಯೇ ಒಳಗೆ ಹೋದೆ. ಕಛೇರಿ ಮುಗಿದಾಗ ರಾತ್ರಿ ಹತ್ತು ಘಂಟೆ. ಆಶ್ಚಯಱವೆಂದರೆ ಕಛೇರಿಯಿಂದ ಹೊರಬಂದ ನನಗೆ ಹಸಿವೇ ಮರೆತು ಹೋಗಿತ್ತು. ಅಂತಹ ಅದ್ಭುತ ಕಛೇರಿ! ಇದು ಪಿಟೀಲು ವಾದನವನ್ನು ಮ್ಐಮರೆತು ಆಸ್ವಾದಿಸಿದ್ದರ ಫಲವಲ್ಲದೇ ಮತ್ತೇನು?

ಮತ್ತೊಂದು ಕಾಲ್ಪನಿಕ ಸನ್ನಿವೇಶ. ಮನೆಯಲ್ಲಿ ಯಾವುದೋ ಕಾರಣಕ್ಕೆ ಪರಸ್ಪರರಲ್ಲಿ ವ್ಐಮನಸ್ಸು ಉಂಟಾಗಿದೆ; ಅತ್ಯಂತ ಬಿಗುವಿನ ವಾತಾವರಣ. ಆ ಸಮಯಕ್ಕೆ ಸರಿಯಾಗಿ ಬಹಳ ಆತ್ಮೀಯರಾದ ಬಂಧುವೋ-ಮಿತ್ರರೋ ಬಂದರೆ ಮನೆಯ ವಾತಾವರಣ ತಂತಾನೇ ತಿಳಿಯಾಗುವ ಅನುಭವ ಸಾಕಷ್ಟು ಜನರಿಗೆ ಆಗಿಲ್ಲವೇ?

ಅದೇ ರೀತಿ ಮಗು ಬಹಳ ರಗಳೆ ಮಾಡುತ್ತಿದೆ ಎಂದು ಕೊಳ್ಳೋಣ. ಏನು ಮಾಡಿದರೂ ಸುಮ್ಮನಾಗುತ್ತಿಲ್ಲ. ಮಗುವಿನ ಕ್ಐಗೆ ಒಂದು ಹೊಸ ಆಟದ ಸಾಮಾನನ್ನು ಕೊಡುತ್ತೀರಿ. ಮಗುವಿನ ಅಳು ಕೂಡಲೇ ಮಾಯ. ಅದರ ಜೊತೆ ಆಟವಾಡಿ ಬೇಸರವಾದಾಗ ಕೂಡಲೇ ಪುನ: ರಗಳೆ ಶುರು. ಹಾಗೆ ಅಳುವ ಮಗುವನ್ನು ತಾಯಿ ಜೋಗುಳ ಹಾಡುತ್ತಾ ತೂಗಿ ಮಲಗಿಸುವಾಗ ಆ ಜೋಗುಳವೇ ಮಗುವಿಗೆ ಅರಿವಳಿಕೆ! ಈ ಅನುಭವ ಕೂಡ ಸಾವಱತ್ರಿಕವಲ್ಲವೇ? ಹಾಗೆಯೇ ಬಿದ್ದು ಕಾಲು ಗಾಯ ಮಾಡಿಕೊಂಡು ರಂಪಾಟ ಮಾಡುತ್ತಿರುವ ಮಗು, ಟಿ.ವಿ.ಯಲ್ಲಿ ಬರುತ್ತಿರುವ ಕಾಟೂಱನ್ ನೋಡುವವರೆಗೆ ಏಕಾಗ್ರತೆಯಿಂದ ನೋಡುತ್ತಾ ಆ ಕಾಯಱಕ್ರಮ ಮುಗಿದ ಕೂಡಲೇ ಪುನ: ಅಳುವುದನ್ನು ಪ್ರಾರಂಭಿಸುವುದೂ ಕೂಡ ನಮ್ಮ ಅನುಭವಕ್ಕೆ ಬಂದ ವಿಷಯವೇ. ಶಿವರಾತ್ರಿಯ ಪ್ರತಿ ಝಾವದಲ್ಲೂ ಶಿವನ ಪೂಜೆ, ಅಭಿಷೇಕ, ಭಜನೆ, ಹಾಡು, ಸಂಗೀತದಲ್ಲಿ ನಾವು ತಲ್ಲೀನರಾದಾಗ ನಮ್ಮ ನಿದ್ರೆ-ಹಸಿವು ಎಲ್ಲಿ ಹೋಯಿತು?

ಅಥಾಱತ್ ಮೇಲಿನ ಸನ್ನಿವೇಶಗಳಲ್ಲಿ ಹಸಿವಿಗೆ ಅರಿವಳಿಕೆ ಸಂಗೀತ; ಕುಟುಂಬದ ವ್ಐಮನಸ್ಸಿನ ಪರಿಸರಕ್ಕೆ ಬಂಧು-ಮಿತ್ರರ ಆಗಮನವೇ ಅರಿವಳಿಕೆ; ಮಗುವಿನ ರಗಳೆಗೆ ಅರವಳಿಕೆ ಆಟದ ಸಾಮಾನು, ತಾಯಿಯ ಜೋಗುಳ ಮತ್ತು ಟಿ.ವಿ.; ನಿದ್ರೆ ಹಸಿವಿಗೆ ಶಿವನ ಧ್ಯಾನವೇ ಅರಿವಳಿಕೆ ಎನ್ನಬಹುದಲ್ಲವೇ?

ತಾತ್ಪಯಱ ಇಷ್ಟೆ. ಇಂತಹ ಅರಿವಳಿಕೆಗಳು ಆ ಕ್ಷಣದ ನೋವು, ದು:ಖ-ದುಮ್ಮಾನಗಳನ್ನು ಮರಯೆಲು (ತಾತ್ಕಾಲಿಕವಾಗಿಯಾದರೂ) ಅತವಶ್ಯ. ನಾವು ನಿಜ ಜೀವನದಲ್ಲಿ ನಮ್ಮ ನಿರಂತರ ಕಷ್ಟ-ಕಾಪಱಣ್ಯಗಳಿಂದ ಸಾಧ್ಯವಾದಷ್ಟೂ ಹೆಚ್ಚು ಕಾಲ ದೂರವಿರಲು/ಮರೆಯಲು ಭಗವಂತ ನಮಗೆ ನೀಡಿರುವ ಇಂತಹ ಅಸಂಖ್ದಾತ ಅರಿವಳಿಕೆಗಳನ್ನು ಗುರುತಿಸಿ ಹೆಚ್ಚು ಹೆಚ್ಚು ಬಳಸಬೇಕಾಗಿದೆ. ರೋಗಿಗೆ ಅರಿವಳಿಕೆ ಜಾಸ್ತಿ ಆದರೆ ಪ್ರಾಣಕ್ಕೇ ಅಪಾಯ. ಆದರೆ ಈ ಅರಿವಳಿಕೆಗಳನ್ನು ಹೆಚ್ಚು ಬಳಸಿದಷ್ಟೂ ಮಾನಸಿಕ ಆರೋಗ್ಯಕ್ಕೆ, ನೆಮ್ಮದಿಗೆ ಒಂದು ರೀತಿಯ ಟಾನಿಕ್! ಉತ್ತಮ ಸಂಗೀತ, ಭಜನೆ, ಸತ್ಸಂಗ, ಧ್ಯಾನ, ಯೋಗ, ಜಪ-ತಪ, ಸದಾ ಸದ್ವಿಚಾರ ಚಿಂತನೆ, ದೇವರ ಪೂಜೆ, ಚಿಕ್ಕಮಕ್ಕಳ ಒಡನಾಟ, ಸದ್ಗ್ರಂಥ ಪಠಣ ಇಂತಹ ಹತ್ತು-ಹಲವಾರು ಅರಿವಳಿಕೆಗಳ ಭಂಡಾರವೇ ನಮ್ಲಲ್ಲಿದೆ. ಹಾ! ಈ ಅರಿವಳಿಕೆಗಳಿಗೆ ನೀವು ಯಾವುದೇ ಫೀ ಕೊಡಬೇಕಾಗಿಲ್ಲ! ಆದರೆ ಇವುಗಳನ್ನು ಅರಸಿ, ಗುರುತಿಸಿ ಸಾಂದಭಿ್ಕವಾಗಿ ನಿರಂತರ ಬಳಸುವ ದ್ಋಢ ಚಿತ್ತ ಮತ್ತು ಬುದ್ಧಿವಂತಿಕೆ ಮಾತ್ರ ನಮ್ಮ-ನಿಮ್ಮದಾಗಬೇಕು. ಏನಂತೀರಿ?

['ಸಂಪದ" ದೊಡನೆ ಕಳೆಯುವ ಕಾಲ ಕೂಡ ಒಂದು ಉತ್ತಮ ಅರಿವಳೆಕೆಯೇ ಅಲ್ಲವೇ?]