ಅರುಂಧತಿ ಇತ್ಯಾದಿ ಕುರಿತು ಒಂದು ಸ್ವಾರಸ್ಯಕರ ಲೇಖನ
’ಅರುಂಧತಿ ರಾಯ್ ಹೇಳಿದ್ದು ಸರಿ’ ಎಂಬ ನನ್ನ ವಿಡಂಬನೆಗೆ ಪ್ರತಿಕ್ರಿಯೆಯಾಗಿ ನನ್ನೋರ್ವ ಹಿರಿಯ ಬಂಧು, ತೆಲುಗು, ಆಂಗ್ಲ ಭಾಷೆಗಳ ಲೇಖಕ ಹಾಗೂ ಆಂಧ್ರಪ್ರದೇಶದ ’ಗಾಡಿಚರ್ಲ ಫೌಂಡೇಶನ್’ನ ಅಧ್ಯಕ್ಷ ಕೆ.ಚಂದ್ರಶೇಖರ ಕಲ್ಕೂರ ಅವರು ನನಗೆ ಸುದೀರ್ಘ ಮಿಂಚಂಚೆ ಕಳಿಸಿದ್ದಾರೆ. ಅದರ ಆಯ್ದ ಭಾಗವನ್ನಿಲ್ಲಿ ನೀಡಿದ್ದೇನೆ. ಕೆ.ಸಿ. ಕಲ್ಕೂರ ಅವರ ನುಡಿಗಳಲ್ಲೇ ಇದನ್ನು ಓದಿ.
*೦*
ನನ್ನ ಮಿತ್ರರ ಮಗ ಒಬ್ಬ ಕರ್ನೂಲಿನ, ಕಲುಗೊಟ್ಲ ವಿಜಯಾತ್ರೇಯ (ಕವಿ)ಎಂಬ ಒಬ್ಬ ಪ್ರಸಿದ್ದ ತೆಲುಗು ಬರಹಗಾರರ ಬರವಣಿಗೆಯ ಮೇಲೆ ಸಂಶೋಧನೆ ಮಾಡಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಪಚ್ಚಡಿ (ಪಿ.ಎಚ್.ಡಿ) ಪಡೆದಿದ್ದ. ಇಂದು ಅವನಿಗೆ ಸನ್ಮಾನ ಸಭೆಯಿತ್ತು. ಆ ಬರಹಗಾರರ ಮೇಲೆ ಇದು ಪ್ರಪ್ರಧಮ ಸಂಶೋಧನಾ ಬರವಣಿಗೆ. ಅದನ್ನು ಕೆಲವರು ಎತ್ತಿ ಆಡಿದರು.
ನನ್ನ ಅಧ್ಯಕ್ಷೀಯ ಮಾತುಗಳಲ್ಲಿ ನಾನು, "ವಿಜಯಾತ್ರೇಯರಿಗೆ ಸಮಾಜದಲ್ಲಿ ಕೆಡುಕನ್ನು ನೋಡುವ ಕಣ್ಣು, ಕೇಳುವ ಕಿವಿ, ಮಾತನಾಡುವ ನಾಲಿಗೆ, ಬರೆಯುವ ಲೇಖನಿಗಳನ್ನು ಆ ಚೌಡೇಶ್ವರಿ ದೇವಿ (ಅವರ ಕುಲದೇವರು) ನೀಡಲಿಲ್ಲ. ಆದ್ದರಿಂದ ಅವರನ್ನು ಯಾರೂ ಗುರುತಿಸಲಿಲ್ಲ. ಇದೇ ಹಣೆ ಬರಹ "ಭಾರತದ ಆಂಗ್ಲ" ವನ್ನು ಸೃಷ್ಟಸಿದ ಆರ್.ಕೆ.ನಾರಾಯಣ್, ಮುಲ್ಕ್ ರಾಜ್ ಆನಂದ್ ಮತ್ತು ರಾಜಾರಾಯರದ್ದು. ತೆಲುಗಿನ ಮಟ್ಟದಲ್ಲಿ ಆ ಸಾಲಿಗೆ ಸೇರಿದವರು ವಿಜಯಾತ್ರೇಯ. ನಮ್ಮಲ್ಲಿ ಕೆಡುಕು ಬಿಟ್ಟರೆ ಒಳ್ಳೆಯದು ಕಾಣದ ಅರುಂಧತಿ ರಾಯ್, ಅರವಿಂದ ಅಡಿಗ, ಕಿರಣ್ ದೇಸಾಯಿ, ನೈಪಾಲ್, ರೆಹಮಾನ್ ಮುಂತಾದವರಿಗೆ ಅಂತರ ರಾಷ್ಟೀಯ ಪ್ರಶಸ್ತಿಗಳು ಸಿಗುತ್ತವೆ. ಅದರೊಂದಿಗೆ ಸಂಘ ವಿದ್ರೋಹಕ ಚರ್ಯೆಗಳನ್ನು ನಡೆಸಲು ಬೇಕಾದಷ್ಟು ಹಣವೂ ಸಿಗುತ್ತದೆ. ಅದಕ್ಕಾಗಿ ಅವರು ಹಾಗೆ ಬರೆಯುತ್ತಿದ್ದಾರೆ", ಅಂದೆ.
ನರೇಂದ್ರ ಮೋದಿಯವರು ಏನೊಂದೂ ಮಾತನಾಡದೆ ಮೇಧಾ ಪಾಟ್ಕರ್ ಮತ್ತು ಅರುಂಧತಿ ರಾಯ್ ಅವರುಗಳನ್ನು ಊರು ಬಿಡಿಸಿದ್ದಾರೆ. ಕಾಶ್ಮೀರದಲ್ಲಿ ಅಂತಹ ಒಬ್ಬ ಗಂಡುಗಲಿ ಇರಬೇಕಿತ್ತು. ಇಂದಲ್ಲವಾದರೆ ನಾಳೆ ಬಂದೇ ಬರುತ್ತಾನೆ/ಳೆ.
ನಾನು ಚರಿತ್ರೆಯ ವಿದ್ಯಾರ್ಥಿ. ಭವಿಷ್ಯತ್ತಿನ ಮೇಲೆ ಅಪಾರ ನಂಬಿಕೆಯುಳ್ಳವನು. ಲೆಬನಾನಿನ ಕವಿ ಖಲೀಲ್ ಜೀಬ್ರಾನನ ಈ ಪದ್ಯದ ಪೂರ್ತಿ ನಕಲು ಅಂತರ್ಜಾಲದಲ್ಲಿ ಇದೆ:
Pity the nation whose statesman is a fox,
whose philosopher is a juggler,
and whose art is the art of patching and mimicking.
Pity the nation that welcomes its new ruler with trumpeting,
and farewells him with hooting,
only to welcome another with trumpeting again.
Pity the nation whose sages are dumb with ears
and whose strong men are yet in the cradle.
Pity the nation divided into fragments,
each fragment deeming itself a nation.
ಇನ್ನು, ಪ್ರಮುಖ/ಅತಿ ಪ್ರಮುಖ ವ್ಯಕ್ತಿಗಳ ಪ್ರವಾಸದ ಸಂದರ್ಭದಲ್ಲಿ ರಕ್ಷಣಾ ಕವಚ. ದಿ.೧೫-೫-೨೦೧೦ ರಂದು ಆಂಧ್ರದ ಮುಖ್ಯಮಂತ್ರಿಯವರು ಕರ್ನೂಲಿಗೆ ಬಂದಿದ್ದರು. ಅಂದಿನ ಕರ್ನೂಲಿನ ದೃಶ್ಯ ಗೋಲ್ಡ್ ಸ್ಮಿತನ "Deserted village" ನ್ನು ನೆನಪಿಗೆ ತರುವಂತಿತ್ತು! (ಪಂಡಿತ್ ನೆಹರು, ರಾಧಾಕೃಷ್ಣನ್ ಇವರುಗಳು ತೆರೆದ ವಾಹನಗಳಲ್ಲಿ ರೈಲ್ವೆ ನಿಲ್ದಾಣದಿಂದ ಊರ ಗಡಿಯ ತನಕ ಮೆರವಣಿಗೆಯಲ್ಲಿ ಹೋಗುತ್ತಿದ್ದರು.)
ಒಮ್ಮೆ ರಾಧಾಕೃಷ್ಣನ್ ರ ಕಾರು ಪಕ್ಕದಲ್ಲಿ ಒಬ್ಬ ಹುಡುಗನಿಗೆ ತಾಗಿ ಆತ ಕೆಳಗೆ ಬಿದ್ದ. ಅದೃಷ್ಟವಶಾತ್ ಅದು ಅಸ್ಪತ್ರೆಯ ಎದುರಿನಲ್ಲೇ ಆಯಿತು. ಕೂಡಲೇ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಹುಡುಗನೊಂದಿಗೆ ಹೋದ ರಾಷ್ಟ್ರಪತಿಯವರು ಅವನಿಗೆ ಏನೂ ಆಗಲಿಲ್ಲ ಅನ್ನುವ ನಿರ್ಧಾರಕ್ಕೆ ಬಂದಮೇಲಷ್ಟೇ ಅಲ್ಲಿಂದ ವಾಪಾಸಾದರು.
ವಿಕ್ಟರ್ ಎನ್ನುವ ೬’ ೩" ಉದ್ದದ ಜಿಲ್ಲಾ ಪೊಲಿಸ್ ಅಧಿಕಾರಿಯೊಬ್ಬ ಪೇದೆಗಳನ್ನು ಬಯ್ಯುತ್ತಿದ್ದದ್ದನ್ನು ಗಮನಿಸಿದ ಇದೇ ರಾಷ್ಟ್ರಪತಿಯವರು, "They are also human beings. Keep calm. Be cool", ಎಂಬುದಾಗಿ ಆತನ ಬೆನ್ನು ಸವರಿ ಹೇಳಿದ್ದರು.
ಕು. ಜಯಲಲಿತರನ್ನು, "ನಿಮಗೆ ಇಷ್ಟು ಕಟ್ಟುನಿಟ್ಟಾದ ಭದ್ರತಾ ಕವಚದ ಆವಶ್ಯಕತೆ ಇದೆಯೇ" ಎಂದು ಕೇಳಿದಾಗ, "ನಾನಾಗಿ ಇದನ್ನು ಕೋರಿರಲಿಲ್ಲ. ಪೋಲಿಸ್ ಯಂತ್ರಾಂಗ ಇದನ್ನೆಲ್ಲಾ ನಿರ್ಮಿಸಿದೆ. ಹಿಂದೆ ಯಾರಿಗೂ ಇಷ್ಟೆಲ್ಲಾ ಇರಲಿಲ್ಲ. ನಿಜ. Gone are the golden days of Prakasam, Rajaji, Kamaraj, Bhaktavatsalam, Anna and MGR" ಎಂಬ ಉತ್ತರ ನೀಡಿದ್ದರು.
ಪ್ರಜಾಪ್ರಭುತ್ವದಲ್ಲಿ ಪ್ರಭುಗಳು ಪ್ರಜೆಗಳಿಗೆ ಹತ್ತಿರವಿರಬೇಕು. ಈ ನಿಟ್ಟಿನಲ್ಲಿ ಯತ್ನಿಸಿದ ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿ ಹುತಾತ್ಮರಾದರು.
ಗಾಂಧೀಜಿಯ ಜೀವನವನ್ನು ಕಟ್ಟುಕಥೆಯೆಂದೇ ಹೇಳುತ್ತಾರೆ, ಕೇಳುತ್ತಾರೆ, ಓದುತ್ತಾರೆ, ತಿಳಿದುಕೊಳ್ಳುತ್ತಾರೆ ಹಲವರು. ತುರ್ತು ಪರಿಸ್ಥಿತಿಯಲ್ಲಿ ನನ್ನ ಮಿತ್ರರೊಬ್ಬರು ಒಂದು ವಿಡಂಬನೆ ಹೇಳುತ್ತಿದ್ದರು. "ಹೊಸತಾಗಿ ಬರೆಯುವ ವಿಶ್ವಕೋಶದಲ್ಲಿ ಸಂಜಯ್ ಗಾಂಧಿಯ ಬಗ್ಗೆ ತುಂಬಾ ವಿವರಗಳಿರುತ್ತವೆ. ಇಂದಿರಾ ಗಾಂಧಿಯು ಸಂಜಯ ಗಾಂಧಿಯ ತಾಯಿ; ಮೋಹನ್ ದಾಸ್ ಕರಮ್ ಚಂದ್ ಗಾಂಧಿಯು ೧೯೪೮ರಲ್ಲಿ ಹತನಾದ ಒಬ್ಬು ಮುದುಕ; ಈ ರೀತಿಯ ವಿವರಗಳಿರುತ್ತವೆ", ಎಂದು ಹೇಳುತ್ತಿದ್ದರು!
*೦*
ಇದು ಕೆ.ಸಿ. ಕಲ್ಕೂರ ಅವರ ಮಿಂಚಂಚೆಯ ಆಯ್ದ ಭಾಗ.
Comments
ಉ: ಅರುಂಧತಿ ಇತ್ಯಾದಿ ಕುರಿತು ಒಂದು ಸ್ವಾರಸ್ಯಕರ ಲೇಖನ
In reply to ಉ: ಅರುಂಧತಿ ಇತ್ಯಾದಿ ಕುರಿತು ಒಂದು ಸ್ವಾರಸ್ಯಕರ ಲೇಖನ by kavinagaraj
ಉ: ಅರುಂಧತಿ ಇತ್ಯಾದಿ ಕುರಿತು ಒಂದು ಸ್ವಾರಸ್ಯಕರ ಲೇಖನ
ಉ: ಅರುಂಧತಿ ಇತ್ಯಾದಿ ಕುರಿತು ಒಂದು ಸ್ವಾರಸ್ಯಕರ ಲೇಖನ
In reply to ಉ: ಅರುಂಧತಿ ಇತ್ಯಾದಿ ಕುರಿತು ಒಂದು ಸ್ವಾರಸ್ಯಕರ ಲೇಖನ by asuhegde
ಉ: ಅರುಂಧತಿ ಇತ್ಯಾದಿ ಕುರಿತು ಒಂದು ಸ್ವಾರಸ್ಯಕರ ಲೇಖನ