ಅರುಣರಾಗದಲ್ಲಿ ಸೇರಿಹೋದ ಗುರುಗ್ರಹ

ಅರುಣರಾಗದಲ್ಲಿ ಸೇರಿಹೋದ ಗುರುಗ್ರಹ

ಬರಹ

ಬುಧ ಮತ್ತು ಗುರುಗ್ರಹಗಳ ಚಲನೆಯನ್ನು ಡಿಸೆಂಬರ್ ೨೯ಱಿಂದ ವೀಕ್ಷಿಸುತ್ತಾ ಬಂದಿದ್ದೇನೆ. ೩೧ನೇ ಡಿಸೆಂಬರ್ ೨೦೦೮ಱಂದು ಸುಮಾರು ಸಂಜೆ ಏೞಱ ಹೊತ್ತಿಗೆ ಗುರುಬುಧಯುತಿಯನ್ನು ನೋಡಿದ ಮೇಲೆ, ಗುರುವನ್ನು ದಾಟಿ ಮೇಲಕ್ಕೆ ಬರುತ್ತಿರುವ ಬುಧಗ್ರಹವನ್ನು ೧, ೨, ೪, ೫ಱಂದು ನೋಡಿದೆ. ಈಗಾಗಲೇ ಸೂರ್ಯ ಮುೞುಗಿದ ಮೇಲೆ ಪಡುವಣ ದಿಕ್ಕಿನಲ್ಲಿ ಅರುಣರಾಗದಲ್ಲಿ ಲೀನವಾಗಿ ಕ್ಷೀಣಿಸಿರುವ ಗುರುಗ್ರಹವನ್ನು ೬ಱ (ನಾಳೆಯ ನಂತರ) ನೋಡುವುದು ಅಸಾಧ್ಯವೇನೋ?. ಈ ತಿಂಗಳ ೧೪ಱಂದು ಅಂದರೆ ಮಕರಸಂಕ್ರಾಂತಿಯಂದು ಗುರು ಅಸ್ತನಾಗಿ ಇನ್ನು ಒಂದು ತಿಂಗಳು ಕಾಣುವುದಿಲ್ಲ. ಬುಧ ಮಾಱನೆಯ ದಿವಸ ಅಂದರೆ ೧೫ಱಂದು ಅಸ್ತನಾಗಿ ಇದೇ ತಿಂಗಳ (ಜನವರಿ ೨೦೦೯) ೨೫ಱಂದು ಬೆಳಿಗ್ಗೆ ಸುಮಾರು ೬.೧೫ಱ ವೇಳೆಗೆ ಸೂರ್ಯೋದಯಕ್ಕೆ ಮುನ್ನ ಕಾಣಿಸಿಕೊಳ್ಳಲು ಪ್ರಾರಂಬಿಸುತ್ತಾನೆ. ಇದನ್ನು ನೋಡಲು ಬಱಿಗಣ್ಣಿನಲ್ಲಿ ಸಾಧ್ಯವಿದ್ದರೂ ಒಂದು ಒಳ್ಳೆಯ ದುರ್ಬೀನು ಅಥವಾ ದೂರದರ್ಶಕವಿದ್ದರೆ ಬುಧನನ್ನು ನೋಡಲು ಸುಲಭ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet