ಅರುಣೋದಯ

ಅರುಣೋದಯ

ಕವನ

ಬೆಳ್ಳಿ ಮೂಡುವ ಆ ಹೊತ್ತು

ಭುವಿಗೆ ಬೆಳಗಾಗೊ ಹೊತ್ತು 

ಜಗಕೆ ಬೆಳ್ಳಿ ಬೆಳಕ ದರುಶನ

ನಮಗೆ ತಂಪು ಇಂಪ ಸಿಂಚನ 

 

ಅರುಣೋದಯ ಹೊಂಗಿರಣ

ಚೆಲ್ಲೋ ಆ ಸಮಯ ಆಹಾ

ಮುಂಜಾನೆ ಮಂಜು ಹನಿಯು 

ಚಿಮ್ಮೋ ಆ ಸಮಯ ಆಹಾ

 

ಚೆಂದವೊ ಚಂದ ಅಲ್ಲಿ 

ಮುಗಿಲ ಬಾನಲಿ ವಿಸ್ಮಯ 

ಇಲ್ಲಿ ನಮ್ಮ ಇಳೆಯ

ಮಡಿಲು ಒಡಲು ತನ್ಮಯ

 

ಹಕ್ಕಿಗಳ ಹಾರಾಟ ಎಲ್ಲೆಡೆ 

ಬಾನು ಬಣ್ಣ ಹೋಳಿಯಾಡುವಾಗ 

ನೇಸರಿಗೆ ಹೊಸ ಅಮಲು

ಭುವಿಗೆ ಹೊನ್ನ ಬೆಳಕು ಚಿಮ್ಮುವಾಗ

 

ರವಿ ಮೂಡಿ ಬೆಳಕು ಹರಡಲು

ಲತೆಯಲಿ ಜಾಜಿ ಸೂಜಿ ಮಲ್ಲೆ

ಮೂಲೆ ಮೂಲೆಯಲಿ ಅರಳಿ

ಚಿಮ್ಮಿತು ಹೊಮ್ಮಿತು ಪರಿಮಳ

 

ಹಕ್ಕಿಗಳ ಕೊರಳ ಕಂಠದಿಂದ

ಹೊಮ್ಮಿತಿ ಚಿಲಿಪಿಲಿ ಗಾನ

ದುಂಬಿಗಳ ರೆಕ್ಕೆ ಬಡಿತದಿಂದ

ಚಿಮ್ಮಿತು ಸವಿಗಾನ ಝೆoಕಾರ

-ಬಂದ್ರಳ್ಳಿ ಚಂದ್ರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್