ಅರೆನಿದ್ದೆ ನೇತ್ರದಲಿ

ಅರೆನಿದ್ದೆ ನೇತ್ರದಲಿ


 



ಅರೆನಿದ್ದೆ ನೇತ್ರದಲಿ ಕನಸುಗಳು ರಾತ್ರೆ


ಮುಚ್ಚಿದ ಕಣ್ಣೊಳಗೆ ಬಣ್ಣಗಳ ಜಾತ್ರೆ ||


ನನಸಾಗದಾಸೆಗಳು ಮಸುಕಾದ ನೆನಪುಗಳು


ಮುಸುಕೊಳಗೆ ಸುಳಿದವು ನಸುಕಾಗೊ ಮುಂಚೆ


ರಾಜ ನಾ ರಾಜ್ಯಕೆ, ಹೋರಾಟ ರಂಗದಲಿ


ಟೀವಿಯಲಿ ಕೃಷ್ಣನ ನೋಡಿದಾ ರಾತ್ರೆ||


ಫುಟ್ಬಾಲ್ ಪಂದ್ಯವನು ನೋಡಿದಿರುಳು ಪಕ್ಕಕ್ಕೆ


ಮಲಗಿದವ ಬಯ್ಯುತಿಹ ನಾ ಕೊಟ್ಟ ಗೋಲಿಗೆ


ನೆನಪಿನಲಿ ಕೆಲವೊಂದು ಮರೆಯಾಗುವುದು ಹಲ



-ವರಿಯದ ಪ್ರಶ್ನೆಗಳಿಗುತ್ತರವು ಒಮ್ಮೊಮ್ಮೆ


ಎಷ್ಟೊಂದು ಕಲ್ಪನೆ, ಜಯದ ಸವಿ ನೆನಪುಗಳು


ಸೋಲ ಬಿಡಬಹುದಲ್ಲ ಇದು ಬರೀ ಕನಸೆಂದು


 


 


Comments