ಅರ್ಥವಿಲ್ಲದ ಸಾಲುಗಳು,,,

ಅರ್ಥವಿಲ್ಲದ ಸಾಲುಗಳು,,,

ಉದ್ದ ಮಣ್ಣಿನ ರಸ್ತೆಯಲಿ ಸಾಗುವಾಗ
ಅಕ್ಕ ಪಕ್ಕದ ಮುಳ್ಳಿಗೆ ಹೆದರಿದರೆ ?
ದಾರಿ ಸಾಗುವುದೇ, 
-----------------------------------------
ಸವೆದ ಚಪ್ಪಲಿಯ ಗುರುತು ಹೇಳಬೇಕು
ಎಲುಬಿರದ ನಾಲಿಗೆಯಲ್ಲ,
ತಾನೇನು ಮಾಡಿದ್ದೇನೆಂದು
-----------------------------------------
ಹೊಟ್ಟೆ ತುಂಬಿದ ಮೇಲೆ, ಜೀವಂತ 
ಜಿಂಕೆಯೂ ಹುಲಿಗೆ ಸ್ನೇಹಿತನೇ,,,
ಅತಿಯಾಸೆ ಹುಲಿಗಿಲ್ಲ
------------------------------------------
ಅತೀ ಉಗ್ರ  ಬೆಂಕಿಯೂ ತಣ್ಣಗಾಗುವುದು
ನೀರನು ಹರಿಬಿಟ್ಟ  ಮೇಲೆ
ಕ್ರೋದ ಕೊಂಚವೂ ಉಳಿಯದಂತೆ
-----------------------------------------
ಅತೀ ಸಿಹಿ ಹಣ್ಣಿಗೆ, ಕಲ್ಲುಗಳು ಹೆಚ್ಚು 
ಕಿತ್ತು ತಿನ್ನುವ  ಕಣ್ಣುಗಳೂ ಹೆಚ್ಚು
ಹಾಗೆಂದು ಹಣ್ಣು ಕಹಿಯಾಗುವುದೇ ?
-----------------------------------------
ಮಧ್ಯ ಕಾಡಿನ ಮರ ಹಸಿರಾಗಿರುವುದಿಲ್ಲವೇ?
ನೀರು-ಬೇಲಿ ಹಾಕುವವನ ಹಂಗಿಲ್ಲದೆ!!
ಬೇಕಿರುವುದು ಸ್ವಾತಂತ್ರ್ಯ,,,, ಬೇಲಿಯಲ್ಲ,
-------------------------------------------
ಗಿಡವ ಕಂಡು, ಚಿಕ್ಕದೆಂದು ಮರ ನಗುವುದೇ?
ಸಾಸಿವೆ ಗಾತ್ರದಲಿ ಬೀಜದಲಿ, ಮರ ಹೇಗೆ ಅಡಗಿತ್ತು
ಆಕರಕ್ಕೂ, ಒಳ ಶಕ್ತಿಗೂ ಸಂಬಂದವಿಲ್ಲ 

Comments

Submitted by lpitnal Tue, 07/01/2014 - 22:46

ಹೀಗೆ ಬರೆಯುತ್ತಿರಿ, ಅರ್ಥವತ್ತಾದ ಸಾಲುಗಳನ್ನು, ಕಾವ್ಯದ ಶೈಲಿ ನಿಮಗೆ ಒಲಿದಿದೆ.ಬರೆಯುತ್ತಿರಿ. ಧನ್ಯವಾದಗಳು

Submitted by naveengkn Wed, 07/02/2014 - 11:27

In reply to by lpitnal

ಇತ್ನಾಳರಿಗೆ ನಮಸ್ತೆ,,,,,, ಹಾರೈಕೆ ಪೂರಿತ ಪ್ರತಿಕ್ರಿಯೆಗೆ ಖುಷಿಯಾಗಿದೆ, ಬರೆಯುವ ಹಾದಿಯಲಿ ಕೈ ಹಿಡಿದು ಮುಂದೆ ನೂಕಿದಂತೆ,,, ಧನ್ಯವಾದಗಳು.