ಅರ್ಧನಾರೀಶ್ವರನ ನೋಡ ಬನ್ನಿ !

ಅರ್ಧನಾರೀಶ್ವರನ ನೋಡ ಬನ್ನಿ !

ತಿ.ನರಸೀಪುರದ ಸಮೀಪ ಗರ್ಗೇಶ್ವರಿ ಎಂಬ ಹಳ್ಳಿಯಿದೆ.
ಈ ಊರಿನ ಮಧ್ಯದಲ್ಲಿ ಗರ್ಗೇಶ್ವರ ದೇಗುಲವಿದೆ.
ಗರ್ಗ ಮಹರ್ಷಿಗಳು ಇಲ್ಲಿಕಠೋರ ತಪಸ್ಸು ಮಾಡಿದರೆಂದು
ಆಗ ಶಿವನು ಪಾರ್ವತೀ ಸಮೇತ ಅರ್ಧನಾರೀಶ್ವರನಾಗಿ
ದರ್ಶನ ಕೊಟ್ಟನೆಂದು ಐತಿಹ್ಯವಿದೆ.ಇಲ್ಲಿ ಲಿಂಗವು ಅರ್ಧಶಿವ
ಮತ್ತು ಅರ್ಧ ಪಾರ್ವತಿ ಆಗಿರುವುದರಿಂದ ಅರ್ಧನಾರಿಶ್ವರ
ನಾಗಿದ್ದಾನೆ.ಶಿವರಾತ್ರಿ ದಿನದಂದು ರಾತ್ರಿಯೆಲ್ಲಾ
ಪೂಜೆ ನಡೆಯುತ್ತದೆ ಈದೇಗುಲದಲ್ಲಿ ಶ್ರೀಶಂಕರಾಚಾರ್ಯರು
ಅಭಿಮಂತ್ರಸಿದ ಯಂತ್ರಪ್ರಶ್ನೆಗಣಪತಿ ವಿಗ್ರಹವಿದೆ.
ಯಾವುದಾದರು ಕಾರ್ಯವನ್ನು ಸಂಕಲ್ಪಮಾಡಿಕೊಂಡು
ಗಣಪತಿಯನ್ನುಎತ್ತಿದರೆ ಆಗುವುದಿದ್ದರೆ ಸಲೀಸಾಗಿ
ಮೇಲೆ ಬರುತ್ತದೆ.ನಿಧಾನವಾಗಿ ಆಗುವುದಿದ್ದರೆ ಪ್ರಯಾಸದಿಂದ
ಬರುತ್ತದೆ.ಆಗದಿದ್ದರೆ ಎತ್ತುವುದಕ್ಕೆ ಆಗುವುದಿಲ್ಲ.ಶನಿವಾರ
ಮತ್ತು ಭಾನುವಾರಗಳಂದು
ಮಾತ್ರ ಪ್ರಶ್ನೆಗೆ ಅವಕಾಶವಿದೆ..ನಿತ್ಯವೂ ದೇಗುಲವು ಬೆಳಿಗ್ಗೆ
ಮತ್ತು ಸಂಜೆ ತೆಗೆದಿರುತ್ತದೆ. ಬನ್ನಿ ಅರ್ಧನಾರೀಶ್ವರನ ನೋಡಿ !
-ನಾನಾ.ಕೊಳ್ಳೇಗಾಲ !