ಅಲೆಗಳು

ಅಲೆಗಳು

ಕವನ

ಅಲೆಗಳಂತೆ ನಾನು


ಭಾವವೆಲ್ಲವನೂ ಒಗ್ಗೂಡಿಸಿ


ಭೋರ್ಗರೆದು ನಿನ್ನತ್ತ ಬಂದರೂ


ಹೆಬ್ಬಂಡೆಯಂತೆ ನೀನು. . .


ಕರಗಲಿಲ್ಲ, ಮನ ಕದಲಲೂ ಇಲ್ಲ,


ಬಂದ ಹಾದಿಯನೇ ನಾ ಮತ್ತೆ ಹಿಡಿದಿರುವೆ


ಮರೆಯದಿರು ನಾ ಮತ್ತೆ ಬರುವೆ


ಸಾಗರ ನಾನು,


ನನ್ನೊಡಲಲಿ ಭಾವದ ಹನಿ ತೀರುವ ವರೆಗೂ


ನೀ ಕರಗುವವರೆಗೂ , ಮನ ಕದಲುವವರೆಗೂ


ಅಲೆಗಳಂತೆ ನಾನು . . .  .

Comments