ಅಲೆಮಾರಿ

ಅಲೆಮಾರಿ

ಕವನ

ಎಲ್ಲಿಹುದು ನಿನ್ನ ನೆಲೆ

ಹೇಗಿಹುದು ನಿನ್ನ ಬದುಕು

ಅರಿತಿರುವೆಯಾ ನೀ ಮನುಜ;

 

ಯಾರ ಮಡಿಲಲ್ಲಿ ಹುಟ್ಟಿ

ಯಾರ ಋಣದ ಅನ್ನ ತಿಂದು

ಯಾವ ಜೀವಕ್ಕೆ ನೆರಳಾಗುವೆಯೋ

ತಿಳಿದವರಾರು?

 

ಯಾರ ಕೈ ತುತ್ತುನು ತಿಂದು

ಯಾರ ಕೈ ರಕ್ಷಣೆಯಲ್ಲಿ ಬೆಳೆದು

ಯಾರ ಕೈ ಅಕ್ಕಿ ಬಾಯಿಗೆ

ಸೇರುವುದೋ ಅರಿತವರಾರು?

 

ಯಾವ ಜೀವದ ಕೈ ಹಿಡಿದು

ಬಾಳೆಂಬ ಬಂಡಿಗೆ ಚಕ್ರವನು

ಜೋಡಿಸಿ ಉರುಳುವೆಯೋ

ಅರ್ಥೈಸಿಕೊಂಡವರಾರು?

 

ಯಾವ ಮಣ್ಣಿನ ಕಣದ

ಒಳಗೆ ಬೆರೆತು ಉಸಿರೆಂಬ

ಜೀವನೆಲೆಯಿಂದ ದೂರಾಗುವೆಯೋ

ಕಲ್ಪಿಸಿಕೊಂಡವರಾರು?

 

ಯಾರು, ಯಾವುದು,ಎಲ್ಲಿ,

ಏಕೆ, ಏನು ಎಂಬ ಪ್ರಶ್ನೆಗಳಿಗೆ

ಉತ್ತರವನ್ನು ಕೊಡುವವರಾರು?

- ಸಹನ. ಆರ್. ಎಂ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್