ಅಲೆಯಲ್ಲಿ ತೇಲುತ್ತ

ಅಲೆಯಲ್ಲಿ ತೇಲುತ್ತ

ಕವನ

ಅಲೆಯಲ್ಲಿ ತೇಲುತ್ತ ಬಾಗುತ್ತ ಸಾಗುತಿಹ

ಹಾಯಿ ದೋಣಿಯನೊಂದ ಕಂಡೆನೊ

ಅದರಾ ಒಳಗಲ್ಲಿ ಕುಳಿತಿದ್ದ ಸವಿ ಚೆಲುವೆ

ನೋಡುತಲೆ  ಮೈ ಮರೆತು ಮರುಳಾದೆನೊ

ಸವಿನೋಟಕೆ ಮನಸೋತು ಎದುರಾದೆನೊ

 

ಉಬ್ಬರದ ನಡುವೆಯೂ ಪ್ರೀತಿ ಚಿಗಿದಾಗ

ಬಾಳ ಒಲುಮೆಯ ಕಂಡು ಕೈಹಿಡಿದೆನೊ

ಖುಷಿಲಿ ಕಂಬದ ಬಳಿಯೆ ಸನಿಹದೀ ಕುಳಿತೆ

ಮುಗುಳು ನಗುತಲಿಯಿಂದು ಗೆಲುವಾದೆನೊ

ಚೆಲುವನ್ನು ನಾನಾಗ ಸವಿಯಾಗಿ ಉಂಡೆನೊ

 

ಪ್ರೀತಿಯಲೆ ನಡುವೆ ಬೇರೆಯೇನನು ಕಾಣೆ

ಕನಸಿನಲ್ಲಿ ಒಲವನುಣುತ ಬೇಡಿಕೊಂಡೆನೊ

ಹಿತದ ಮಾತನು ಆಡಿ ಕಣ್ಣ ನೋಟವ ಬೆರೆಸಿ

ಮೌನ ಮುರಿಯುತಲವಳು ತಬ್ಬಿಕೊಂಡಳೊ

ಮುತ್ತನಿಡುತಲಿಯವಳು ಮದುವೆಯಾದಳೊ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್