ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !

ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !

ಬರಹ

ಇಂತಹ ಸುಂದರ, ಹಾಗೂ ಅಸಾಧಾರಣ ಶಿಲ್ಪವನ್ನು ಈ ತರಹದ ಸ್ಥಿತಿಯಲ್ಲಿ ಕಂಡಿದ್ದು ಇದೇಮೊದಲು. ಎಷ್ಟು ಸರಳ ಹಾಗು ಎಷ್ಟು ಸುಲಭವಾಗಿ ಸಾಮಾನ್ಯರಿಗೂ ಸಿಗುವ ಅಸಮಾನ್ಯ ವ್ಯಕ್ತಿ ಈತ ! ಅಮೆರಿಕದ ಹಿಂದಿನ ರಾಷ್ಟ್ರಾಧ್ಯಕ್ಷ, ಮಹಾ ವೈಚಾರಿಕ, ಸಂವಿಧಾನಲೇಖಕ, ಹಾಗೂ ಅಪ್ರತಿಮದೇಶಪ್ರೇಮಿ, ಥಾಮಸ್ ಜಫರ್ಸನ್, ನಮ್ಮೆಲ್ಲರ ಕಣ್ಣುಮುಂದೆ ಕಲ್ಲಿಬೆಂಚಿನಮೇಲೆ ಎಲ್ಲಸಾಮಾನ್ಯರಂತೆ ಆಸನಾಸೀನರಾಗಿರುವ ದೃಷ್ಯ ನಮ್ಮನ್ನೆಲ್ಲ ರೋಮಾಂಚಿತಗೊಳಿಸಿತು. ಅವರ ಕೈನಲ್ಲಿ ಪುಸ್ತಕ, ಲೇಖನಿ ; ನಿಧಾನವಾಗಿ ಯೋಚಿಸುತ್ತಾ ಬರೆಯುತ್ತಿರುವ ಭಂಗಿ ! ನಮಗೆ ಅವರ ಪಕ್ಕದಲ್ಲಿ ಓಡಿಹೋಗಿ ಕುಳಿತುಕೊಳ್ಳುವಾಸೆ. ಆದರೆ, ಅವರು ಅಂತಹಮೇರುವ್ಯಕ್ತಿ. ಅವರೆಲ್ಲಿ ; ನಾವೆಲ್ಲಿ ? ನನ್ನ ಮೊಮ್ಮೊಗಳು ನಾವೆಲ್ಲಾ ಹೇಳುವ ಮೊದಲೇ ಜೆಫರ್ಸನ್ ತಾತಾರವರ ಬದಿಯಲ್ಲಿ ಕುಳಿತೇ ಬಿಟ್ಟಳು ! ಅಲ್ಲಿ ನಮ್ಮನ್ನು ತಡೆಯುವ ಯಾವ ಪೇದೆಗಳೂ ಇರಲಿಲ್ಲ ! ಈ ಚಿತ್ರವನ್ನು ತೆಗೆದಿದ್ದಲ್ಲದೆ, ನಮ್ಮ ಸಂಪದೀಯರ ಜೊತೆ ಈ ಎಲ್ಲ ವಿಷಯಗಳನ್ನೂ ಹಂಚಿಕೊಂಡ ನಾನೇ ಅದೃಷ್ಟಶಾಲಿ !

ಈ ಅದ್ಭುತ ಶಿಲ್ಪವಿರುವುದು, ಮಿಸ್ಸೂರಿ ವಿಶ್ವವಿದ್ಯಾಲಯದ ಭಾರಿ ಹುಲ್ಲುಗಾವಲಿನ ತರಹ ಕಾಣಿಸುವ ಪ್ರಾಂಗಣದಲ್ಲಿ. ಅಮೆರಿಕವನ್ನು ವಿಸ್ತರಿಸಲು ಅವರು ಪಟ್ಟ ಶ್ರಮವೆಷ್ಟು ? ಇದೂ ಅಲ್ಲದೆ, ’ ವರ್ಜೀನಿಯಾ ವಿಶ್ವವಿದ್ಯಾಲಯ,’ ದ ಸ್ಥಾಪಕರಾಗಿಯೂ ಅವರು ದುಡಿದಿದ್ದರು. ತಮ್ಮ ಪಾಲಿಗೆ ಬಂದ ಆಸ್ತಿ, ಸುಮಾರು ೫,೦೦೦ ಎಕರೆ ಜಮೀನು. ಇವರು ಸಾರ್ವಜನಿಕ ಸಂಸ್ಥೆಗಳಿಗೆ ಹಾಗೂ ಅನೇಕ ಸಂಘ ಸಂಸ್ಥೆಗಳಿಗೆ ಹಣ ಹಾಗೂ ಬೇರೆವಿಧದ ಸಹಾಯಗಳನ್ನು ನೀಡುತ್ತಾ, ಕೊನೆಗೆ ಅವರ ಮರಣ ಸಮಯದಲ್ಲಿ, ಆಸ್ತಿಯ ಬಹುಭಾಗ ಅವರ ಖಾತೆಯಲ್ಲಿ ಇಲ್ಲದಂತಾಗಿತ್ತು. ಮಿಸಿಸಿಪ್ಪಿನದಿಯ ಪಶ್ಚಿಮಬಾಗದ ವಿಸ್ತರಣಾ ಭೂಮಿಯಲ್ಲಿ ಇವರು ಮಿಸ್ಸೂರಿವಿಶ್ವವಿದ್ಯಾಲಯಕ್ಕೆ, ಜಮೀನು ಕೊಡಿಸಿದ್ದರು. ಇವರ ಸ್ಮಾರಕವೂ ಕಾಲೇಜಿನ ಅಂಗಳದಲ್ಲೇ, ನಾನು ದಾಖಲಿಸಿದ ಚಿತ್ರದ ಬದಿಯಲ್ಲೇ ಇದೆ.

-ಚಿತ್ರ-ವೆಂ.