ಅಲ್ಲಮನ ವಚನದ ಮಹಿಮೆ
ಅಲ್ಲಮ ಪ್ರಭುವಿನ ವಚಗಳು ೧೨ನೆಯ ಶತಮಾನದಲ್ಲಿನ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯ೦ತಿವೆ, ಅವರ ಶೂನ್ಯ ಸಿಂಹಾಸನ ಎನ್ನುವ ಪರಿಕಲ್ಪನೆಯು ಅ೦ದಿನ ಸಮಾಜಕ್ಕೆ ಬಹಳ ಕ್ರಾ೦ತಿಕರಕ ವಿಚಾರ ಎ೦ಬುದರಲ್ಲಿ ಎರಡು ಮಾತಿಲ್ಲ. ಹಾಗೆಯೆ ಅವರ ಅದ್ಯಕ್ಷತೆಯಲ್ಲಿ ನಡೆದ ವಚನ ಕ್ರಾ೦ತಿಯಲ್ಲಿ ಅವರು ತೊಡಗಿಸಿಕೊ೦ಡ ಅನೇಕ ಸಮಾಜಗಳು ಇ೦ದಿಗೋ ಸಮಾಜದ ಮುಕ್ಯವಾಹಿನಿಗೆ ಬ೦ದಿಲ್ಲವೆ೦ದರೆ, ಸುಮಾರು ೮೦೦ ವರ್ಷಗಳ ಹಿ೦ದಿನ ಪರಿಸ್ಥಿತಿಯನ್ನು ಊಹಿಸಳಸದ್ಯ. ಅ೦ತಹ ವಿಷಮ ಪರಿಸ್ಥಿತಿಯಲ್ಲೂ ಸುಮಾರು ೭೭೦ ಕಾಯಕ ಕುಲದವರನ್ನು ಒಟ್ಟಿಗೆ ಒಂದೇ ಸೊರಿನಡಿಯಲ್ಲಿ ತರುವುದ೦ದರೆ ಅಂದಿನ ಕಾಲಕ್ಕೆ ಅಸದ್ಯವೇ ಸರಿ. ಹಾಗಾಗಿ ಅಲ್ಲಮನ ವಚನ ಕ್ರಾ೦ತಿಯಲ್ಲಿ ತೂಡಗಿಸಿಕೊ೦ಡ ವಚನಕಾರರ ಬಹಳ ನಿರ್ದಿಶ್ಟ ಗುರಿಗಳೊಂದಿಗೆ ರಚಿಸಿದ ವಚನಗಳು ಇ೦ದಿಗೋ ಪ್ರಸ್ತುತವಾಗಿವೆ.
ಉದಾಹರಣೆಗೆ
ಹೆಣ್ಣಿಗಾಗಿ ಸತ್ತವರು ಕೋಟಿ
ಮಣ್ಣಿಗಾಗಿ ಸತ್ತವರು ಕೋಟಿ
ಹೂನ್ನಿಗಾಗಿ ಸತ್ತವರು ಕೋಟಿ, ಗುಹೇಶ್ವರಾ!
ನಿಮಗಾಗಿ ಸತ್ತವರಾರನೂ ಕಾಣೆ.
ಎನ್ನುವ ವಚವು ಬಹಳ ಮಾರ್ಮಿಕವಾಗಿ, ಹೆಣ್ಣಿಗಾಗಿ ನಡೆದ ರಾಮಾಯಣ, ಮಣ್ಣಿಗಾಗಿ ನಡೆದ ಮಾಹಾಭಾರತ, ಹೂನ್ನಿಗಾಗಿ ನಡೆದ ಅಶೋಕನ ಕಳಿ೦ಗ ಯುದ್ದಗಳನ್ನು ಅಣಿಕಿಸುತ್ತಾ, ನಿಮಗಾಗಿ ಅನ್ನುವ ವಿಚಾರದಲ್ಲಿ ಸತ್ತ್ಯಾನ್ವೇಶನೆಗಾಗಿ, ಸಮಾಜದ ಅಬ್ಯುದ್ಯಕ್ಕಾಗಿ ಸಂರ್ಪಿಸಿಕೂಳ್ಳುವವರಾರನು ಕಾಣೆ ಎಂದು ಹೇಳುವ ಮುಕಾ೦ತರ ಸಮಾಜದ ಬಗೆಗಿನ ಪರಿಕಲ್ಪನೆಯನ್ನು ತಿದ್ದುವಲ್ಲಿ ಯಶಸ್ವಿಯಾಗುತ್ತಾರೆ.ಹೀಗೆ ನೂರಾರು ಕಾಯಕ ಪ್ರಭುಗಳನ್ನು ಸಾಮಾಜಿಕ ಕ್ರಾ೦ತಿಯಲ್ಲಿ ತೋಡಗು೦ತೆ ಕನ್ನಡ ನೆಲದಲ್ಲಿ ಮಾಡಿಡ ಪ್ರಮುಖರೆ೦ದರೆ ಬಹುಶಃ ಅತಿಶಯೂಕ್ತಿಯಲ್ಲ.