ಅಲ್ಲಿ ಎಲ್ಲಿ ಸೇರುತ್ತದೆ?

ಅಲ್ಲಿ ಎಲ್ಲಿ ಸೇರುತ್ತದೆ?

ಬರಹ

ಅಲ್ಲಿ ಎಲ್ಲಿ ಸೇರುತ್ತದೆ?
ಹಾಗೆನ್ದರೇನು ಸ್ವಾಮೀ....ಅಲ್ಲೆಲ್ಲೋ ಸೇರುತ್ತೆ ನನ್ಗೇನ್ ಗೊತ್ತು..ಅನ್ಬೇಡಿ, ಯಾಕೆನ್ದರೆ ಅಲ್ಲಿ ಎಲ್ಲಾ ಕಡೆ ಬೇಕಾಗುತ್ತೆ ಕಾಣ್ರಿ...ಇದು ಏಳನೇ ವಿಭಕ್ತಿ ಪ್ರತ್ಯಯ ಪ್ರಕರಣ.
 
ಈವೊತ್ತಿನ್ ರೂಢಿಯನ್ತೆ ಏಳನೇ ವಿಭಕ್ತಿ ನಲ್ಲಿ ಅಲ್ಲವೇ..ಇನ್ನೆಲ್ಲಿ ಅಲ್ಲಿ..ಛೇ..ಬಿಡಿ ಸ್ವಾಮೀ..ವಿಷ್ಯಕ್ಕೆ ಬರ್ತೇನೆ.

ಕನ್ನಡ+ಅಲ್ಲಿ = ಕನ್ನಡದಲ್ಲಿ
ನಗರ+ಅಲ್ಲಿ  = ನಗರದಲ್ಲಿ
ಕಿಟಕಿ+ಅಲ್ಲಿ = ಕಿಟಕಿಯಲ್ಲಿ
ಮನೆ+ಅಲ್ಲಿ = ಮನೆಯಲ್ಲಿ; ಮನೇನಲ್ಲಿ ತಪ್ಪು(ಮನೇಲಿ ಸರಿ, ಅದರ ಕುರಿತು ಮುನ್ದಿನ ಬರೆಹದಲ್ಲಿ)
ಊರು+ಅಲ್ಲಿ = ಊರಿನಲ್ಲಿ

(ಕೊನೆಯ ಸ್ವರ ಒ ಆಗಿರುವನ್ಥ ಉದಾಹರಣೆಗಳ ಕುರಿತು ಮುನ್ದಿನ ಬರೆಹದಲ್ಲಿ)

ಕನ್ನಡ+ಅಲ್ಲಿ = ಕನ್ನಡದಲ್ಲಿ ಯಾಕಾಗ್ಬೇಕು....ಕನ್ನಡಾನಲ್ಲಿ ಅಲ್ಲವೇ...ಹಂಗೇ ತಾನೇ ನಾವೆಲ್ಲ ಅನ್ನೋದು..ಅನುಮಾನ ಬನ್ದಿರುತ್ತೆ.
ಅಲ್ಲಿ ಎಲ್ಲಿ ಸೇರುತ್ತೆ ಎನ್ದರೆ ಅ ಆದಮೇಲೆ ಸೇರುತ್ತೆ. ಹಾಗಾಗಿ ಅಲ್ಲಿ ಸೇರುವ ಮುಂಚೆ ಅ ಸೇರಬೇಕು..ಅದೇ ಕಾಣ್ರಿ ಆರನೇ ವಿಭಕ್ತಿ ಅನ್ನಾದು.....
(ಕನ್ನಡ ಪತ್ರಿಕೆಯೊನ್ದರಲ್ಲಿ ಇದರ ಬಗ್ಗೆ ಚರ್ಚೆ ನಡೆಸಿದ್ದರು, ಆದರೆ ಪರಿಹಾರ ಅವರಿಗೂ ಗೊತ್ತಿರಲಿಲ್ಲ.)

ಇನ್ತಿರೆ,

ಕನ್ನಡ+ಅ+ಅಲ್ಲಿ = ಕನ್ನಡದಲ್ಲಿ (ಕನ್ನಡಂ ಎನ್ದೂ ತೆಗೆದುಕೊಳ್ಳಬಹುದು, ಆಗ ಮಕಾರಕ್ಕೆ ದಕಾರಾದೇಶ)
ಕಿಟಕಿ+ಅ+ಅಲ್ಲಿ = ಕಿಟಕಿಯಲ್ಲಿ (ಯಕಾರಾಗಮ)
ಮನೆ+ಅ+ಅಲ್ಲಿ = ಮನೆಯಲ್ಲಿ (ಯಕಾರಾಗಮ)
ಊರು+ಅ+ಅಲ್ಲಿ = ಊರಿನಲ್ಲಿ (ನಕಾರಾಗಮ)

(ಕೊನೆಯ ಸ್ವರ ಒ ಆಗಿರುವನ್ಥ ಉದಾಹರಣೆಗಳ ಕುರಿತು ಮುನ್ದಿನ ಬರೆಹದಲ್ಲಿ)

ಅನ್ದಂಗೆ ಮರ್ತೇವೋದೆ ಗುರೋ..
ಮಲಬಾರ್+ಅ+ಅಲ್ಲಿ = ಮಲಬಾರಿನಲ್ಲಿ (ಮಲಬಾರದಲ್ಲಿ ಅಲ್ಲ)
ತೆಂಕಣ ಒಳನಾಡಿನಾಗೆ ಎಲ್ಲದಕ್ಕೂ ನಲ್ಲಿ ಸೇರುಸ್ತಾರೆ...ಅಲ್ಲಿ ಬಡಗಣ ಒಳನಾಡಿನಾಗೆ ಎಲ್ಲದಕ್ಕೂ ದಲ್ಲಿ ಸೇರುಸ್ತಾರೆ... (ವಸಿ ಉಪ್ಪು ಕಾರ ನೀವೇ ಹಚ್ಕೊಳ್ಳಿ ಸ್ವಾಮೀ)
ಬೇಜಾರ್ ಮಾಡ್ಕ್ಯಂಬೇಡಿ.....ಇದ್ದಿದ್ದುನ್ನ ಇದ್ದಂಗೇ ಅನ್ದಾನ್ತ ಎದೆಗೆ ಒದೀಬೇಡಿ.

ಕನ್ನಡವು+ಅಲ್ಲಿ = ಕನ್ನಡವಲ್ಲಿ ಆಗಿ ವಕಾರಕ್ಕೆ ದಕಾರ ಆದೇಶವಾಗುವನ್ಥದ್ದಲ್ಲ.
ಇಷ್ಟೇ ಕಾಣ್ರಿ ಸದ್ಯಕ್ಕೆ ಅಲ್ಲಿ ಪ್ರವರ...ಮುನ್ದಿನ ಬರೆಹದಲ್ಲಿ ಇನ್ನಾ ಮಿಕ್ಕಿದ್ದನ್ನ ಹೇಳ್ತೇನೆ.

ನಲುಮೆಯೊನ್ದಿಗೆ,
ಕೆಪಿ ಬೊಳುಂಬು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet