ಅಳದೀ ಕುಪ್ಸಾ ಅಸರೀನ್ ಸೀರೆ...
ಕವನ
ಅಳದೀ ಕುಪ್ಸಾ ಅಸರೀನ್ ಸೀರೆ
ಉಟ್ಕೊಂಡ್ ಬಂದಿದ್ದ್ಲಲ್ಲಿ ತಿಮ್ಮೀ!
ಊರ್ಗೆ ಊರೇ ಕಣ್ ಆಕ್ತಿತ್ತು ಕೇಮಿಲ್ಲ್ದೆ
ನನ್ಮುಟ್ಲೂ ಇಲ್ಲ ಈಯಮ್ಮಿ !
ನನ್ ಮನ್ಸ್ನಾಗ್ ಇರೋದ್ ಎಲ್ಲಾ
ಅಂಗೇ ಕನ್ಸ್ನಾಗ್ ಬರ್ತೈತಂದ್ರೆ!
ನಾನ್ ತಿಮ್ಮೀನ್ ತಬ್ಬ್ಕೊಂಡ್ ಇರೋದ್
ನೋಡ್ತೀನ್ ಏನು ಇಲ್ದೆ ತೊಂದ್ರೆ!
ಅಗ್ಲೂ ರಾತ್ರಿ ಚಾಕ್ರಿ ಮಾಡಿ
ಕೂಡ್ಸಕೊಂಡ್ ಕಾಸ್ಗೆ ಕಾಸ
ತಾಳೀಗ್ ಚಿನ್ನ ತಕ್ಕೊಂಡ್ ಬರ್ತೀನ್
ಆಗಕ್ ತಿಮ್ಮೀಗ್ ದಾಸ!