ಅಳಬೇಡ ತಂಗಿ...
ಕವನ
ಅಳಬೇಡ ತಂಗಿ ಅಳಬೇಡ
ಹುಟ್ಟ ಮನೆ ನೆನೆದು ಕೊಟ್ಟ
ಮನೆಯಲಿ ನೀನು ಅಳಬೇಡ
ಮುಂಜಾನೆ ಬೇಗನೆ ಏಳುವುದು
ಮರಿಬೇಡ ತಂಗಿ ಮರೆತು ರವಿ
ಮೂಡೊವರೆಗು ಮಲಗಬೇಡ ತಂಗಿ..
ಅಳಬೇಡ ತಂಗಿ ನೀ ಅಳಬೇಡ
ಮುಸ್ಸಂಜೆ ಸಮಯದಲಿ ರವಿ
ಮುಳುಗೊ ಹೊತ್ತಿನಲಿ ದಣಿದು
ಗಂಡ ಬರುವ ವೇಳೆ ಮಲಗಬೇಡ ತಂಗಿ..
ಅಳಬೇಡ ತಂಗಿ ನೀ ಅಳಬೇಡ
ನೆರೆಹೊರೆಯಲಿ ನಿನ್ನ ಸಂಸಾರ
ಬಗ್ಗೆ ಚಾಡಿ ಮಾತು ಹೇಳಬೇಡ
ಒಳಹಿಡಿತ ಸಡಿಲ ಮಾಡಬೇಡ ತಂಗಿ..
ಅಳಬೇಡ ತಂಗಿ ನೀ ಅಳಬೇಡ
ಜಗಳ ಆಡುತಲಿ ಹೊರಗಡೆ
ನಿಲಬೇಡ ತಂಗಿ ಜನ ನೋಡಿದರೆ
ಮುಸಿಮುಸಿ ಆಡಿಕೊಂಡು ನಕ್ಕಾರು ತಂಗಿ..
ಅಳಬೇಡ ತಂಗಿ ನೀ ಅಳಬೇಡ
ಸಣ್ಣ ಮಾತಿಗೆ ಮುನಿಸುಬೇಡ
ಹುಟ್ಟ ಮನೆಗೆ ಕೊಟ್ಟ ಮನೆಗೆ
ಕೆಟ್ಟ ಹೆಸರು ಎಂದು ತರಬೇಡ ತಂಗಿ..
ಅಳಬೇಡ ತಂಗಿ ನೀ ಅಳಬೇಡ
-ಬಂದ್ರಳ್ಳಿ ಚಂದ್ರು, ತುಮಕೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್