-ಅಳಲು

-ಅಳಲು

ಕವನ

 

-1-
ಗೆಳೆಯಾ ನೀನು...
ಹಾವು ಏಣಿ ಆಟದಲ್ಲಿ 
ನನಗೆ ಏಣಿಯಾಗದೆ 
ನುಂಗುವ ಹಾವಾದೆ...
ನನ್ನ ನಿಜ ಬಾಳಿನ 
ಊಟದಲ್ಲಿ 
ಸಿಹಿ ಬೆಲ್ಲವಾಗದೆ 
ಕಹಿ ಬೇವಾದೆ ...
*************
-2-
ಕೊಟ್ಟ ಸವಿ ಹಣ್ಣನ್ನು 
ಮಣ್ಣಿಗೆ ತೂರಿ 
ಇಟ್ಟ  ಪ್ರೀತಿಗೆ ಹಾಕಿ 
ಸರಿಯಾಗಿ ಚೂರಿ 
ಯಾವುದದು ಹೇಳು ಪ್ರಿಯ 
ನೀ ಹಿಡಿದ ದಾರಿ?
-ಮಾಲು