ಅಳಸಂಡೆ

ಅಳಸಂಡೆ

ಕವನ

ಅಂಗಳ ತುದಿಯಲಿ ಕೊಂಚವೆ ಜಾಗದಿ

ಮಾಡಿದೆ ಸುಂದರ ಕೈತೋಟ

ಚಂದದಿ ಬೆಳೆದಿದೆ ಚಿಗುರಿದೆ ಗಿಡಗಳು

ಕೀಟವು ಕೊಡುತಿದೆ ಬಲುಕಾಟ

 

ಅನುದಿನ ಜತನದಿ ಕಾಯುತಲಿರುವೆನು

ಕೀಟದ ಬಾಧೆಯ ತಡೆವಂತೆ

ಶ್ರಮಕಿದೊ ದೊರಕಿದೆ ಉತ್ತಮ ಪ್ರತಿಫಲ

ಗಿಡದಲಿ ಬಿಟ್ಟಿದೆ ಅಳಸಂಡೆ

 

ಈದಿನ ಊಟಕೆ ಅದರದೆ ಪಲ್ಯವ

ಮಾಡುವ ಆಸೆಯು ಮನದಲ್ಲಿ

ಸಂತಸದಿಂದಲೆ ಎಲ್ಲರು ಉಣುವರು

ಎಲ್ಲರಿಗಿಷ್ಟವು ಮನೆಯಲ್ಲಿ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್

ಚಿತ್ರ್